Flash News:
ದಾದಾಪೀರ್ ಜೈಮನ್ ಸೇರಿ ಐವರಿಗೆ ಕುವೆಂಪು ಭಾಷಾಭಾರತಿ ಪ್ರಶಸ್ತಿ

ದಾದಾಪೀರ್ ಜೈಮನ್ ಸೇರಿ ಐವರಿಗೆ ಕುವೆಂಪು ಭಾಷಾಭಾರತಿ ಪ್ರಶಸ್ತಿ

Updated : 22.07.2022

ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ನೀಡುವ 2022ನೇ ಗೌರವ ಪ್ರಶಸ್ತಿಗೆ ದಾದಾಪೀರ್ ಜೈಮನ್ ಸೇರಿ ಐವರು ಆಯ್ಕೆಯಾಗಿದ್ದಾರೆ. 

ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ ಭಟ್ ಅವರು ಪ್ರಶಸ್ತಿ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ. ಬಹುಭಾಷಾ ವಿದ್ವಾಂಸ ಆರ್.ವಿ.ಎಸ್. ಸುಂದರಮ್,  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಸಿ.ಆರ್. ಯರವಿನತೆಲಿಮಠ, ಲೇಖಕಿ ವಿಜಯಾ ಗುತ್ತಲ, ಭಾಷಾಂತರಕಾರ ಕೆ. ನಲ್ಲತಂಬಿ ಹಾಗೂ ಅನುವಾದಕ ವಿ. ಕೃಷ್ಣ ಅವರು ಪ್ರಾಧಿಕಾರದ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಕನ್ನಡ ಹಾಗೂ ಇತರ ಭಾಷೆಗಳ ನಡುವೆ ಭಾಷಾಂತರದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ವಾಂಸರಿಗೆ ನೀಡಲಾಗುವ ಈ ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದೆ. 

2021ರಲ್ಲಿ ಪ್ರಕಟವಾದ ಅನುವಾದಿತ ಕೃತಿಗಳಿಗೆ ವಿವಿಧ ವಿಭಾಗಗಳಲ್ಲಿ ನೀಡಲಾಗುವ ಪುಸ್ತಕ ಬಹುಮಾನಗಳನ್ನು ಪ್ರಾಧಿಕಾರ ಪ್ರಕಟಿಸಿದೆ. ‘ದ ಎಸೆನ್ಶಿಯಲ್ ಮಹಾಭಾರತ’ ಕೃತಿಗೆ ಅರ್ಜುನ ಭಾರದ್ವಾಜ ಮತ್ತು ಹರಿ ರವಿಕುಮಾರ್ (ಕನ್ನಡದಿಂದ ಇಂಗ್ಲಿಷಿಗೆ), ‘ಪರ್ದಾ & ಪಾಲಿಗಮಿ’ ಕೃತಿಗೆ ದಾದಾಪೀರ್ ಜೈಮನ್ (ಇಂಗ್ಲಿಷಿನಿಂದ ಕನ್ನಡಕ್ಕೆ), ‘ಕಳ್ಳಿಗಾಡಿನ ಇತಿಹಾಸ’ ಮಲರ್ವಿಳಿ ಕೆ. (ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ), ‘ಪ್ರೇಮಪತ್ರ’ ಕೃತಿಗೆ ಮೋಹನ ಕುಂಟಾರ್ ಹಾಗೂ ‘ಉತ್ತರಕಾಂಡಂ’ ಕೃತಿಗೆ ಎಚ್.ಆರ್. ವಿಶ್ವಾಸ (ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ) ಆಯ್ಕೆಯಾಗಿದ್ದಾರೆ.

ಪುಸ್ತಕ ಬಹುಮಾನವು ತಲಾ ₹ 25 ಸಾವಿರ ನಗದು ಬಹುಮಾನ ಒಳಗೊಂಡಿದೆ. ‌

© Copyright 2022, All Rights Reserved Kannada One News