ನೀರು ಮುಟ್ಟಿದ ಆರೋಪ: ದಲಿತ ಬಾಲಕನನ್ನು ಥಳಿಸಿ ಹತ್ಯಗೈದ ಶಿಕ್ಷಕ

Related Articles

108 ಆ್ಯಂಬುಲೆನ್ಸ್ ಸ್ಥಗಿತ ಹಿನ್ನೆಲೆ: ಆರೋಗ್ಯ ಸಚಿವ ಕೆ. ಸುಧಾಕರ್ ವಿರುದ್ಧ ಕಾಂಗ್ರೆಸ್ ಟೀಕೆ

ಎನ್.ಡಿ.ಎ ಮೈತ್ರಿಕೂಟವನ್ನು ತೊರೆದದ್ದು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ: ತೇಜಸ್ವಿ ಯಾದವ್

ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹೋದಲ್ಲೆಲ್ಲಾ ಕಮಲ ಅರಳಿದೆ: ಸಿಎಂ ಬಸವರಾಜ ಬೊಮ್ಮಾಯಿ

ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ವೈದ್ಯ, ಅವರ ಇಬ್ಬರು ಮಕ್ಕಳು ಮೃತ್ಯು

ಮಹಿಷ ದಸರಾ: ಮಹಿಷ ಪ್ರತಿಮೆ ಪೂಜೆ ಅವಕಾಶಕ್ಕೆ ಹೈಕೋರ್ಟ್‌ ನಕಾರ

ಉಸಿರಾಟದ ಸಮಸ್ಯೆ: ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

ಅನುಮತಿ ಸಿಗದೆ ಇದ್ದರೂ ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ: ಲೇಖಕ ಸಿದ್ಧಸ್ವಾಮಿ

ಬಲವಂತವಾಗಿ ಮತಾಂತರ ಮಾಡಲು ಯತ್ನ ಆರೋಪ: ಪ್ರಕರಣ ದಾಖಲು

ದಂಡ ಕಟ್ಟುತ್ತೇವೆ, ದೇವರ ಮುಟ್ಟಲು ಬಿಡಿ: ಆರ್‌.ಧರ್ಮಸೇನ ಸವಾಲು

‘ಚೈಲ್ಡ್‌ ಪೋರ್ನ್‌’ ವೀಡಿಯೊ ಹಂಚಿಕೆ ಜಾಲದ ಮೇಲೆ ಸಿಬಿಐ ದಾಳಿ: 50 ಲ್ಯಾಪ್‌ಟಾಪ್‌ಗಳು ವಶಕ್ಕೆ

ನೀರು ಮುಟ್ಟಿದ ಆರೋಪ: ದಲಿತ ಬಾಲಕನನ್ನು ಥಳಿಸಿ ಹತ್ಯಗೈದ ಶಿಕ್ಷಕ

Updated : 14.08.2022

ಜೋಧಪುರ: ಖಾಸಗಿ ಶಾಲೆಯಲ್ಲಿ ದಲಿತ ಬಾಲಕನೊಬ್ಬ ನೀರಿನ ಕೊಡ ಮುಟ್ಟಿದ್ದಕ್ಕೆ ಕೋಪಗೊಂಡ ಶಿಕ್ಷಕ ಆತನನ್ನು ಅಮಾನುಷವಾಗಿ ಥಳಿಸಿದ್ದು, ತೀವ್ರ ಗಾಯಗೊಂಡ ಬಾಲಕ ಶನಿವಾರ ಮೃತಪಟ್ಟಿದ್ದಾನೆ.

ಶಿಕ್ಷಕ ಚೈಲ್ ಸಿಂಗ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕನ ವಿರುದ್ಧ ಕೊಲೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಸುರಾನಾ ಶಾಲೆಯ ವಿದ್ಯಾರ್ಥಿ ಇಂದ್ರಾ ಮೇಘವಾಲ್ ಎಂಬಾತನನ್ನು ಜುಲೈ 20ರಂದು ಶಿಕ್ಷಕ ಥಳಿಸಿದ್ದು, ತೀವ್ರ ಗಾಯಗೊಂಡಿದ್ದ ಬಾಲಕನನ್ನು ಅಹ್ಮದಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕ ಶನಿವಾರ ಮೃತಪಟ್ಟಿದ್ದಾನೆ. ಶಾಲಾ ಶಿಕ್ಷಣ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ. ರಾಜಸ್ಥಾನ ಎಸ್ಸಿ ಆಯೋಗದ ಅಧ್ಯಕ್ಷ ಖಿಲಾಡಿ ಲಾಲ್ ಬೈರ್ವಾ ತನಿಖೆಗೆ ಆದೇಶ ನೀಡಿದ್ದು, ಅಧಿಕಾರಿಗಳು ತ್ವರಿತವಾಗಿ ಮಧ್ಯಪ್ರವೇಶಿಸುವ ಪ್ರಕರಣವಾಗಿ ಪರಿಗಣಿಸುವಂತೆ ಸೂಚಿಸಿದ್ದಾರೆ.

"ಶಿಕ್ಷಕ ಚೈಲ್ ಸಿಂಗ್ ವಿರುದ್ಧ ಐಪಿಸಿಯ ಸೆಕ್ಷನ್ 302 ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯ ಅನ್ವಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. "ಶಿಕ್ಷಕ ಥಳಿಸಿದ್ದರಿಂದ ಬಾಲಕನ ಮುಖ, ಕಿವಿಗಳಿಗೆ ಗಾಯಗಳಾಗಿದ್ದು, ಬಾಲಕ ಬಹುತೇಕ  ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ" ಎಂದು ಬಾಲಕನ ತಂದೆ ಹೇಳಿದ್ದಾರೆ.

ತೀವ್ರ ಗಾಯಗೊಂಡ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಉದಯಪುರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಒಂದು ವಾರ ಕಾಲ ಆಸ್ಪತ್ರೆಯಲ್ಲಿ ಬಾಲಕನ ಆರೋಗ್ಯಸ್ಥಿತಿಯಲ್ಲಿ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಆತನನ್ನು ಅಹ್ಮದಾಬಾದ್‍ಗೆ ಸಾಗಿಸಲಾಗಿತ್ತು ಎಂದು newindianexpress.com ವರದಿ ಮಾಡಿದೆ.

© Copyright 2022, All Rights Reserved Kannada One News