Flash News:
ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಮಹಿಳೆಯ ಹತ್ಯೆ

ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಮಹಿಳೆಯ ಹತ್ಯೆ

Updated : 04.10.2022

ಗದಗ: ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಭೀಕರ ಘಟನೆ ಇಲ್ಲಿನ ಮುಳಗುಂದ ನಾಕಾ ಬಳಿ ನಡೆದಿದೆ.

ಮಹಿಳೆಯನ್ನು ನಾಗಾವಿ ತಾಂಡಾ ನಿವಾಸಿ ಮೀನಾಝ್ ಬೇಫಾರಿ (35)  ಎಂದು ಗುರುತಿಸಲಾಗಿದೆ. ಆರೋಪಿಗಳಾದ ಚೇತನ ಹುಳಕಣ್ಣವರ, ಶ್ರೀನಿವಾಸ ಶಿಂಧೆ, ಕುಮಾರ ಮಾರನಬಸರಿ ನೇರವಾಗಿ ಪೊಲೀಸರ ಬಳಿ ತೆರಳಿ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೂಲತಃ ಲಮಾಣಿ ಸಮುದಾಯಕ್ಕೆ ಸೇರಿದ ಶೋಭಾ ಲಮಾಣಿ ಇತ್ತೀಚೆಗೆ ಮತಾಂತರಗೊಂಡ ನಂತರ ಮೀನಾಝ್ ಬೇಫಾರಿ ಎಂದು ಹೆಸರು ಬದಲಾಯಿಸಿಕೊಂಡಿದ್ದಳು. ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಈ ಬಗ್ಗೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

© Copyright 2022, All Rights Reserved Kannada One News