ಟಿ-20: ಇಂಡೀಸ್ ತಂಡದ ವಿರುದ್ಧ ಭಾರತಕ್ಕೆ ಜಯ

Related Articles

ಇಂಗ್ಲೆಂಡ್ ವಿರುದ್ಧ ಕ್ಲೀನ್‍ಸ್ವೀಪ್ ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ

ಟೆನಿಸ್ ಗೆ ವಿದಾಯ ಹೇಳಿದ ರೋಜರ್ ಫೆಡರರ್: ಸ್ನೇಹಿತನ ನಿವೃತ್ತಿಗೆ ಗಳಗಳನೆ ಅತ್ತ ಪ್ರತಿಸ್ಪರ್ಧಿ ರಫೆಲ್ ನಡಾಲ್: ಇದು ಕ್ರೀಡೆಯ ಅತ್ಯುತ್ತಮ ಕ್ಷಣ ಎಂದ ಕೊಹ್ಲಿ

ಟೆನಿಸ್ ಗೆ ಸ್ವಿಸ್ ಸ್ಟಾರ್ ರೋಜರ್ ಫೆಡರರ್ ವಿದಾಯ

ಲಾರೆನ್ಸ್ ಮೈದಾನದಲ್ಲಿ ಅಬ್ಬರಿಸಿದ ಹರ್ಮನ್​ಪ್ರೀತ್ ಕೌರ್: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 88 ರನ್‌ ಗೆಲುವು

ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಟಿಕೆಟ್ ಖರೀದಿಗೆ ನೂಕುನುಗ್ಗಲು: ಕಾಲ್ತುಳಿತದಿಂದ ಹಲವರಿಗೆ ಗಾಯ

ಉದ್ದೀಪನ ಮದ್ದು ಸೇವನೆ ಪ್ರಕರಣ: ಹಿರಿಯ ಅಥ್ಲೀಟ್ ಪೂವಮ್ಮಗೆ 2 ವರ್ಷ ನಿಷೇಧ

ಉತ್ತರ ಪ್ರದೇಶ| ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ: ವೀಡಿಯೊ ವೈರಲ್

ಟಿ20 ವಿಶ್ವಕಪ್: ನ್ಯೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‍: ಭಾರತದ ಬಜರಂಗ್ ಪೂನಿಯಾಗೆ ಕಂಚಿನ ಪದಕ

ಮಹಿಳಾ ಏಕದಿನ ಕ್ರಿಕೆಟ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

ಟಿ-20: ಇಂಡೀಸ್ ತಂಡದ ವಿರುದ್ಧ ಭಾರತಕ್ಕೆ ಜಯ

Updated : 30.07.2022

ಟರೊಬುವಾ (ಪೋರ್ಟ್ ಆಫ್ ಸ್ಪೇನ್):  ಅತಿಥೇಯ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಭಾರತ 67 ರನ್‍ಗಳ ಭರ್ಜರಿ ಜಯ ಸಾಧಿಸಿದೆ.‌

ರೋಹಿತ್ ಶರ್ಮಾ 44 ಎಸೆತಗಳಲ್ಲಿ 64 ರನ್ ಮತ್ತು ದಿನೇಶ್ ಕಾರ್ತಿಕ್ 19 ಎಸೆತಗಳಲ್ಲಿ ಅಜೇಯ 41 ರನ್‍ಗಳ ಕೊಡುಗೆ ನೀಡಿ ಭಾರತ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್‍ಗಳ ಗೌರವಾರ್ಹ ಮೊತ್ತ ಗಳಿಸಲು ಕಾರಣರಾದರು.

ಬಳಿಕ ಭಾರತದ ಬೌಲರ್‌ ಗಳು ಬಿಗಿ ದಾಳಿಯ ಮೂಲಕ ಅತಿಥೇಯ ತಂಡವನ್ನು ಕಟ್ಟಿಹಾಕಿದರು. ಕೊನೆಯ 3 ಓವರ್‌ ಗಳಲ್ಲಿ ಭಾರತ 45 ರನ್‍ಗಳನ್ನು ಗಳಿಸಿದ್ದು ನಿರ್ಣಾಯಕ ಎನಿಸಿತು.

ಉತ್ತಮ ಬೌನ್ಸ್ ಹಾಗೂ ಸ್ವಲ್ಪಮಟ್ಟಿಗೆ ತಿರುವು ಪಡೆಯುತ್ತಿದ್ದ ಪಿಚ್‍ನಲ್ಲಿ ಭಾರತದ ಸ್ಪಿನ್ನರ್‍ಗಳಾದ ರವಿಚಂದ್ರನ್ ಅಶ್ವಿನ್ (2/22) , ರವೀಂದ್ರ ಜಡೇಜಾ (1/26), ರವಿ ಬಿಷ್ಣೋಯಿ (2/26) ವಿಕೆಟ್‍ಗಳನ್ನು ಪಡೆದು ವೆಸ್ಟ್ ಇಂಡೀಸ್ ಪಡೆಯನ್ನು 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 122 ರನ್‍ಗೆ ನಿಯಂತ್ರಿಸಿದರು.

ಆರಂಭದಲ್ಲಿ ಸ್ವಲ್ಪ ದುಬಾರಿ ಎನಿಸಿದರೂ ಅರ್ಷದೀಪ್ ಸಿಂಗ್ (2/24) ಮತ್ತು ಭುವನೇಶ್ವರ ಕುಮಾರ್ (1/11) ಕೂಡಾ ಮೊನಚಿನ ದಾಳಿ ನಡೆಸಿದರು. ವೆಸ್ಟ್ ಇಂಡೀಸ್ ಪರವಾಗಿ 20 ರನ್ ಗಳಿಸಿದ ಶಮರ್ಹ್ ಬ್ರೂಕ್ಸ್ ಗರಿಷ್ಠ ಸ್ಕೋರರ್ ಎನಿಸಿದರು.

© Copyright 2022, All Rights Reserved Kannada One News