ಕೋವಿಡ್‌-19: 28,593ಕ್ಕೆ ಇಳಿಕೆಯಾದ ಸಕ್ರಿಯ ಪ್ರಕರಣಗಳು

ಕೋವಿಡ್‌-19: 28,593ಕ್ಕೆ ಇಳಿಕೆಯಾದ ಸಕ್ರಿಯ ಪ್ರಕರಣಗಳು

Updated : 09.10.2022

ನವದೆಹಲಿ: ರಾಷ್ಟ್ರದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಪ್ರಸ್ತುತ ರಾಷ್ಟ್ರದಲ್ಲಿ 28,593 ಸಕ್ರಿಯ ಪ್ರಕರಣಗಳಿವೆ.

ಕೇಂದ್ರ ಆರೋಗ್ಯ ಸಚಿವಾಲಯವು ರವಿವಾರ ಬಿಡುಗಡೆ ಮಾಡಿದ ವರದಿಯಲ್ಲಿ 2,756 ಹೊಸ ಕೋವಿಡ್‌ ದೃಢ ಪ್ರಕರಣಗಳು ಸೇರ್ಪಡೆಗೊಂಡಿವೆ. ಇದರೊಂದಿಗೆ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 4,46,12,013 ಆಗಿದೆ.

ಕೇರಳದಲ್ಲಿ 16 ಮಂದಿ ಸೇರಿದಂತೆ ಕೋವಿಡ್‌ ಕಾರಣಕ್ಕೆ ಒಟ್ಟು 21 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 5,28,799ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 658 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

© Copyright 2022, All Rights Reserved Kannada One News