ದೇಶದಾದ್ಯಂತ 5,747 ಕೋವಿಡ್‌ ಪ್ರಕರಣ ಪತ್ತೆ: 29 ಸಾವು

ದೇಶದಾದ್ಯಂತ 5,747 ಕೋವಿಡ್‌ ಪ್ರಕರಣ ಪತ್ತೆ: 29 ಸಾವು

Updated : 17.09.2022

ನವದೆಹಲಿ: ಕಳೆದ 24 ಗಂಟೆಗಳಲ್ಲಿ 5,747 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4,45,28,524ಕ್ಕೆ ಏರಿದೆ. ಸದ್ಯ ದೇಶದಲ್ಲಿ 46,848 ಸಕ್ರಿಯ ಪ್ರಕರಣಗಳಿವೆ. 

ಒಂದು ದಿನದ ಅವಧಿಯಲ್ಲಿ 29 ಸಾವುಗಳು ವರದಿಯಾಗಿದ್ದು, ಇದರಲ್ಲಿ 13 ಸಾವುಗಳು ಕೇರಳದಿಂದಲೇ ವರದಿಯಾಗಿವೆ. ಒಟ್ಟು ಸಾವಿನ ಸಂಖ್ಯೆ 5,28,302ಕ್ಕೆ ಏರಿದೆ  ಎಂಬುದು ಆರೋಗ್ಯ ಇಲಾಖೆ ಮಾಹಿತಿಯಿಂದ ಗೊತ್ತಾಗಿದೆ. 

ದೈನಂದಿನ ಪಾಸಿಟಿವಿಟಿ ದರವು ಶೇಕಡ 1.69ರಷ್ಟು ಇದೆ. 

ಸಚಿವಾಲಯದ ಪ್ರಕಾರ, ದೇಶದಾದ್ಯಂತ ಕೋವಿಡ್-19 ಲಸಿಕೆ ಅಭಿಯಾನದ ಅಡಿಯಲ್ಲಿ ಈವರೆಗೆ 216.41 ಕೋಟಿ ಡೋಸ್‌ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.

© Copyright 2022, All Rights Reserved Kannada One News