ರಾಜ್ಯದಲ್ಲಿಂದು 639 ಮಂದಿಗೆ ಕೋವಿಡ್ ಪಾಸಿಟಿವ್

ರಾಜ್ಯದಲ್ಲಿಂದು 639 ಮಂದಿಗೆ ಕೋವಿಡ್ ಪಾಸಿಟಿವ್

Updated : 01.09.2022

ಬೆಂಗಳೂರು: ರಾಜ್ಯದಲ್ಲಿಂದು 639 ಮಂದಿಗೆ ಕೋವಿಡ್(covid 19) ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.

24,741 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. 967 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,445 ರಷ್ಟಿದೆ.

ಸೋಂಕಿತರ ಪ್ರಮಾಣ ಶೇ. 2.58 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 4.19 ಇದೆ. ವಾರದ ಸಾವಿನ ಪ್ರಮಾಣ ಶೇ. 0.33.ವಿಮಾನ ನಿಲ್ದಾಣದಿಂದ 2,642 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ. 

ಪ್ರಮುಖವಾಗಿ ಬೆಂಗಳೂರಿನಲ್ಲಿ 281 ಮಂದಿಗೆ ಕೋವಿಡ್ ತಗುಲಿದೆ. 524 ಮಂದಿ ಬಿಡುಗಡೆಯಾಗಿದ್ದಾರೆ. 4,190 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

© Copyright 2022, All Rights Reserved Kannada One News