Flash News:
ದೇಶದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಇಳಿಕೆ

ದೇಶದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಇಳಿಕೆ

Updated : 05.04.2022

ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಇಳಿಕೆಯಾಗಿದ್ದು,   716 ದಿನಗಳಲ್ಲೇ ಮೊದಲ ಬಾರಿಗೆ ಒಂದು ಸಾವಿರಕ್ಕಿಂತ ಕೆಳಗಿಳಿದಿದೆ.

ರವಿವಾರ ದೇಶದಲ್ಲಿ 999 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಸೋಮವಾರ ಕೂಡಾ 1000ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. 2020ರ ಎಪ್ರಿಲ್ 17ರಂದು ದೇಶದಲ್ಲಿ 922 ಪ್ರಕರಣಗಳು ದಾಖಲಾಗಿದ್ದವು. ಆ ಬಳಿಕ ಕೋವಿಡ್‌ ಮೂರು ಅಲೆಗಳು ಬಂದು ಹೋಗಿವೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 12 ಸಾವಿರಕ್ಕೆ ಇಳಿದಿದೆ. ಇದು  2020ರ ಎಪ್ರಿಲ್ 17ರ ಬಳಿಕ ದಾಖಲಾದ ಕನಿಷ್ಠ ಸಂಖ್ಯೆ. ಕೇರಳದಲ್ಲಿ ಸಾಂಕ್ರಾಮಿಕ ಇಳಿಮುಖವಾಗಿದ್ದರೂ, 256 ಪ್ರಕರಣಗಳು ಸೋಮವಾರ ದಾಖಲಾಗಿವೆ.

© Copyright 2022, All Rights Reserved Kannada One News