Flash News:
ಕೊಲೆಗಡುಕರು, ಅತ್ಯಾಚಾರಿಗಳು, ಭ್ರಷ್ಟರ ಕೂಟವೇ ಬಿಜೆಪಿ: ಕಾಂಗ್ರೆಸ್‌ ಟೀಕೆ

ಕೊಲೆಗಡುಕರು, ಅತ್ಯಾಚಾರಿಗಳು, ಭ್ರಷ್ಟರ ಕೂಟವೇ ಬಿಜೆಪಿ: ಕಾಂಗ್ರೆಸ್‌ ಟೀಕೆ

Updated : 25.09.2022

ಬೆಂಗಳೂರು: ಉತ್ತರಾಖಂಡದಲ್ಲಿ ಬಿಜೆಪಿ ನಾಯಕರೊಬ್ಬರ ಮಗ ತನ್ನ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ವಾಗತಕಾರಿಣಿ ಅಂಕಿತ ಭಂಡಾರಿ ಎಂಬುವವರ ಕೊಲೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವುದನ್ನು ಕಾಂಗ್ರೆಸ್‌ ಕಟು ಶಬ್ದಗಳಿಂದ ಟೀಕಿಸಿದೆ. 

‘ಕೊಲೆಗಡುಕರು, ಅತ್ಯಾಚಾರಿಗಳು, ಭ್ರಷ್ಟರು ಸೇರಿಕೊಂಡಿರುವ ಕೂಟಕ್ಕೆ ಇರುವ ಹೆಸರೇ ಬಿಜೆಪಿ‘ ಎಂದು ಕರ್ನಾಟಕ ಕಾಂಗ್ರೆಸ್‌ನ ಟ್ವಿಟರ್‌ ಖಾತೆಯಿಂದ ಮಾಡಲಾದ ಟ್ವೀಟ್‌ನಲ್ಲಿ ಹೇಳಲಾಗಿದೆ. 

‘ಬೇಟಿ ಬಚಾವ್ ಆಗಬೇಕಿರುವುದು ಬಿಜೆಪಿಗರಿಂದ ಎಂಬುದು ಕರ್ನಾಟಕದಿಂದ, ಉತ್ತರ ಪ್ರದೇಶ, ಉತ್ತರಖಾಂಡದವರೆಗೂ ಬಿಜೆಪಿಗರು ನಿರೂಪಿಸಿದ್ದಾರೆ. ಹಣ್ಣುಮಕ್ಕಳನ್ನು ಪೀಡಿಸುವ ಬಿಜೆಪಿಗೆ ಕೀಚಕ, ದುಶ್ಯಾಸನರು ಆದರ್ಶ ಪುರುಷರೇ ಹೊರತು ರಾಮನಲ್ಲ’ ಎಂದು ಕಾಂಗ್ರೆಸ್‌ ಗೇಲಿ ಮಾಡಿದೆ. 

ರೆಸಾರ್ಟ್ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಹತ್ಯೆ ಆರೋಪದಲ್ಲಿ ಹರಿದ್ವಾರ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಮಗ ಪುಳಕಿತ್ ಆರ್ಯ ಸೇರಿದಂತೆ ಮೂವರನ್ನು ಉತ್ತರಾಖಂಡ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.© Copyright 2022, All Rights Reserved Kannada One News