ರಾಜ್ಯದಲ್ಲಿ 7 ತಿಂಗಳಲ್ಲಿ 10 ಕೋಮು ಗಲಭೆ: ಸೂಕ್ತ ಕ್ರಮವಿಲ್ಲ ಯಾಕೆ?

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ರಾಜ್ಯದಲ್ಲಿ 7 ತಿಂಗಳಲ್ಲಿ 10 ಕೋಮು ಗಲಭೆ: ಸೂಕ್ತ ಕ್ರಮವಿಲ್ಲ ಯಾಕೆ?

Updated : 29.07.2022

ಬೆಂಗಳೂರು: ವರದಿಗಳ ಪ್ರಕಾರ 2019ರಲ್ಲಿ ರಾಜ್ಯದಲ್ಲಿ ಒಟ್ಟು 12 ಕೋಮು ಗಲಭೆಗಳು ನಡೆದಿವೆ. 2020ರಲ್ಲಿ 21 ಕೋಮುಗಲಭೆ ಹಾಗೂ 2021ರಲ್ಲಿ 23 ಕೋಮು ಘರ್ಷಣೆಗಳು ಸಂಭವಿಸಿವೆ. ಅದೇರೀತಿ, 2022ರಲ್ಲಿ ಈವರೆಗೆ 10 ಕೋಮು ಗಲಭೆಗಳು ನಡೆದಿವೆ. ಇಷ್ಟಾದರೂ ಈ ಗಲಭೆಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆ ಸಂಬಂಧ ರಾಜ್ಯದ ವಿವಿಧೆಡೆ ಆಕ್ರೋಶ ಭುಗಿಲೆದ್ದಿದ್ದು, ಈ ನಡುವೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಆಡಳಿತದಲ್ಲಿ 66 ಕೋಮುಗಲಭೆ ವರದಿಯಾಗಿದ್ದರೂ, ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ. 

ಹಿಂದಿನ ಮೂರು ವರ್ಷಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ 66 ಕೋಮು ಸಂಘರ್ಷಗಳು ನಡೆದಿವೆ. ಈ ಕೋಮು ದ್ವೇಷಕ್ಕೆ ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಹಿಂದೂಗಳಾಗಲಿ, ಮುಸ್ಲಿಮರಾಗಲಿ ಕೋಮು ಸಂಘರ್ಷಕ್ಕೆ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಇದೆ.

ರಾಜ್ಯದ ವಿವಿಧ ಜಿಲ್ಲೆಗಳ ಪೈಕಿ ಶಿವಮೊಗ್ಗದಲ್ಲಿ ಕಳೆದ ಮೂರು ವರ್ಷದಿಂದೀಚೆಗೆ 13 ಕೋಮು ಗಲಭೆಗಳು ದಾಖಲಾಗಿವೆ. ಇತ್ತ, ದಕ್ಷಿಣಕನ್ನಡದಲ್ಲೂ 12 ಕೋಮು ಸಂಘರ್ಷಗಳು ಜರುಗಿವೆ. ಹಾವೇರಿಯಲ್ಲಿ 10 ಕೋಮು ಸಂಘರ್ಷಗಳು ನಡೆದಿರುವ ಪ್ರಕರಣಗಳು ದಾಖಲಾಗಿವೆ.

ಆದರೆ, ಈ ಹಿಂದೆ ಅಂದರೆ, 2016ರಲ್ಲಿ 42 ಕೋಮು ಗಲಭೆಗಳು ದಾಖಲಾಗಿದ್ದವು. 2017ರಲ್ಲಿ ಈ ಪ್ರಕರಣಗಳ ಸಂಖ್ಯೆ 100ಕ್ಕೆ ಏರಿಕೆ ಕಂಡಿತ್ತು. 2018ರಲ್ಲಿ ಕೋಮು ಸಂಘರ್ಷ ಪ್ರಕರಣಗಳು 30ಕ್ಕೆ ಇಳಿಕೆ ಕಂಡಿತ್ತು ಎಂದು ಹೇಳಲಾಗುತ್ತಿದೆ.

© Copyright 2022, All Rights Reserved Kannada One News