ಕಾಮನ್ ವೆಲ್ತ್ ಗೇಮ್ಸ್: 10,000 ಮೀ.ರೇಸ್ ವಾಕ್ ನಲ್ಲಿ ಪ್ರಿಯಾಂಕಾ ಗೋಸ್ವಾಮಿಗೆ ಬೆಳ್ಳಿ ಪದಕ

Related Articles

ಇಂಗ್ಲೆಂಡ್ ವಿರುದ್ಧ ಕ್ಲೀನ್‍ಸ್ವೀಪ್ ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ

ಟೆನಿಸ್ ಗೆ ವಿದಾಯ ಹೇಳಿದ ರೋಜರ್ ಫೆಡರರ್: ಸ್ನೇಹಿತನ ನಿವೃತ್ತಿಗೆ ಗಳಗಳನೆ ಅತ್ತ ಪ್ರತಿಸ್ಪರ್ಧಿ ರಫೆಲ್ ನಡಾಲ್: ಇದು ಕ್ರೀಡೆಯ ಅತ್ಯುತ್ತಮ ಕ್ಷಣ ಎಂದ ಕೊಹ್ಲಿ

ಟೆನಿಸ್ ಗೆ ಸ್ವಿಸ್ ಸ್ಟಾರ್ ರೋಜರ್ ಫೆಡರರ್ ವಿದಾಯ

ಲಾರೆನ್ಸ್ ಮೈದಾನದಲ್ಲಿ ಅಬ್ಬರಿಸಿದ ಹರ್ಮನ್​ಪ್ರೀತ್ ಕೌರ್: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 88 ರನ್‌ ಗೆಲುವು

ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಟಿಕೆಟ್ ಖರೀದಿಗೆ ನೂಕುನುಗ್ಗಲು: ಕಾಲ್ತುಳಿತದಿಂದ ಹಲವರಿಗೆ ಗಾಯ

ಉದ್ದೀಪನ ಮದ್ದು ಸೇವನೆ ಪ್ರಕರಣ: ಹಿರಿಯ ಅಥ್ಲೀಟ್ ಪೂವಮ್ಮಗೆ 2 ವರ್ಷ ನಿಷೇಧ

ಉತ್ತರ ಪ್ರದೇಶ| ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ: ವೀಡಿಯೊ ವೈರಲ್

ಟಿ20 ವಿಶ್ವಕಪ್: ನ್ಯೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‍: ಭಾರತದ ಬಜರಂಗ್ ಪೂನಿಯಾಗೆ ಕಂಚಿನ ಪದಕ

ಮಹಿಳಾ ಏಕದಿನ ಕ್ರಿಕೆಟ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

ಕಾಮನ್ ವೆಲ್ತ್ ಗೇಮ್ಸ್: 10,000 ಮೀ.ರೇಸ್ ವಾಕ್ ನಲ್ಲಿ ಪ್ರಿಯಾಂಕಾ ಗೋಸ್ವಾಮಿಗೆ ಬೆಳ್ಳಿ ಪದಕ

Updated : 06.08.2022

ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನ 9ನೇ ದಿನವಾದ ಶನಿವಾರ ಭಾರತದ ಪ್ರಿಯಾಂಕಾ ಗೋಸ್ವಾಮಿ ಅವರು ಮಹಿಳೆಯರ  10,000 ಮೀ. ರೇಸ್ ವಾಕ್ ನಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಮಹಿಳೆಯರ 10,000 ಮೀ. ರೇಸ್ ವಾಕ್  ಫೈನಲ್ ನಲ್ಲಿ  43 ನಿಮಿಷ, 38  ಸೆಕೆಂಡ್ ನಲ್ಲಿ ಗುರಿ ತಲುಪಿದ ಪ್ರಿಯಾಂಕಾ ಎರಡನೇ ಸ್ಥಾನ ಪಡೆದರೆ, ಆಸ್ಟ್ರೇಲಿಯದ ಜಮಿಮಾ ಮೊನ್ ಟಾಗ್ ಮೊದಲ ಸ್ಥಾನ ಪಡೆದಿದ್ದಾರೆ.

ಪ್ರಿಯಾಂಕಾ ಪ್ರಸಕ್ತ ಗೇಮ್ಸ್ ನಲ್ಲಿ  ಭಾರತಕ್ಕೆ 27ನೇ ಪದಕ ಗೆದ್ದುಕೊಟ್ಟರು. ಟ್ರ್ಯಾಕ್ ಆ್ಯಂಡ್ ಫೀಲ್ಡ್ ನಲ್ಲಿ ಮುರಳಿ ಶಂಕರ್(ಬೆಳ್ಳಿ, ಲಾಂಗ್  ಜಂಪ್)ಹಾಗೂ ತೇಜಸ್ವಿನ್ ಶಂಕರ್(ಕಂಚು, ಹೈಜಂಪ್)ಬಳಿಕ ಭಾರತಕ್ಕೆ 3ನೇ ಪದಕ ಗೆದ್ದುಕೊಟ್ಟರು.

ಪ್ರಿಯಾಂಕಾ ರೇಸ್ ವಾಕ್ ನಲ್ಲಿ ಪದಕ ಗೆದ್ದ  ಭಾರತದ ಮೊದಲ ಮಹಿಳಾ ರೇಸ್ ವಾಕರ್ ಆಗಿದ್ದಾರೆ. ಕಾಮನ್ ವೆಲ್ತ್ ನಲ್ಲಿ ಪದಕ ಗೆದ್ದ ಭಾರತದ 2ನೇ ರೇಸ್ ವಾಕರ್ ಎನಿಸಿಕೊಂಡಿದ್ದಾರೆ. 2018ರ ಗೇಮ್ಸ್ ನಲ್ಲಿ 20 ಮೀ. ರೇಸ್ ವಾಕ್ ನಲ್ಲಿ ಹರ್ಮಿಂದರ್ ಸಿಂಗ್ ಕಂಚು ಜಯಿಸಿದ್ದರು.



© Copyright 2022, All Rights Reserved Kannada One News