ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ಧ ಜಯ ಸಾಧಿಸಿ ಫೈನಲ್ ತಲುಪಿದ ಭಾರತ ಹಾಕಿ ತಂಡ

Related Articles

ಇಂಗ್ಲೆಂಡ್ ವಿರುದ್ಧ ಕ್ಲೀನ್‍ಸ್ವೀಪ್ ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ

ಟೆನಿಸ್ ಗೆ ವಿದಾಯ ಹೇಳಿದ ರೋಜರ್ ಫೆಡರರ್: ಸ್ನೇಹಿತನ ನಿವೃತ್ತಿಗೆ ಗಳಗಳನೆ ಅತ್ತ ಪ್ರತಿಸ್ಪರ್ಧಿ ರಫೆಲ್ ನಡಾಲ್: ಇದು ಕ್ರೀಡೆಯ ಅತ್ಯುತ್ತಮ ಕ್ಷಣ ಎಂದ ಕೊಹ್ಲಿ

ಟೆನಿಸ್ ಗೆ ಸ್ವಿಸ್ ಸ್ಟಾರ್ ರೋಜರ್ ಫೆಡರರ್ ವಿದಾಯ

ಲಾರೆನ್ಸ್ ಮೈದಾನದಲ್ಲಿ ಅಬ್ಬರಿಸಿದ ಹರ್ಮನ್​ಪ್ರೀತ್ ಕೌರ್: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 88 ರನ್‌ ಗೆಲುವು

ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಟಿಕೆಟ್ ಖರೀದಿಗೆ ನೂಕುನುಗ್ಗಲು: ಕಾಲ್ತುಳಿತದಿಂದ ಹಲವರಿಗೆ ಗಾಯ

ಉದ್ದೀಪನ ಮದ್ದು ಸೇವನೆ ಪ್ರಕರಣ: ಹಿರಿಯ ಅಥ್ಲೀಟ್ ಪೂವಮ್ಮಗೆ 2 ವರ್ಷ ನಿಷೇಧ

ಉತ್ತರ ಪ್ರದೇಶ| ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ: ವೀಡಿಯೊ ವೈರಲ್

ಟಿ20 ವಿಶ್ವಕಪ್: ನ್ಯೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‍: ಭಾರತದ ಬಜರಂಗ್ ಪೂನಿಯಾಗೆ ಕಂಚಿನ ಪದಕ

ಮಹಿಳಾ ಏಕದಿನ ಕ್ರಿಕೆಟ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ಧ ಜಯ ಸಾಧಿಸಿ ಫೈನಲ್ ತಲುಪಿದ ಭಾರತ ಹಾಕಿ ತಂಡ

Updated : 07.08.2022

ಬರ್ಮಿಂಗ್‍ಹ್ಯಾಂ: ಭಾರತ ಹಾಕಿ ತಂಡ ಕಾಮನ್‍ವೆಲ್ತ್ ಕ್ರೀಡಾಕೂಟದ ಹಾಕಿ ಸ್ಪರ್ಧೆಯ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-2 ಗೋಲುಗಳ ರೋಚಕ ಜಯದೊಂದಿಗೆ ಫೈನಲ್ ತಲುಪಿದೆ.

ಮೊದಲ ಕ್ವಾರ್ಟರ್‌ ನಲ್ಲಿ ಉಭಯ ತಂಡಗಳು ಯಾವುದೇ ಗೋಲು ಗಳಿಸಲಿಲ್ಲ. ಎರಡನೇ ಕ್ವಾರ್ಟರ್‌ ನಲ್ಲಿ ಭಾರತ ಎರಡು ಗೋಲು ಗಳಿಸಿತು. ಅಭಿಷೇಕ್ ಅವರು ಭಾರತದ ಖಾತೆ ತೆರೆದರೆ ಮನದೀಪ್ ಸಿಂಗ್ ಏಕಾಂಗಿ ಸಾಹಸದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ಈ ಹಂತದಲ್ಲಿ ರಿಯಾನ್ ಜ್ಯೂಲಿಯಸ್ ದಕ್ಷಿಣ ಆಫ್ರಿಕಾದ ಮರುಹೋರಾಟ ಸಂಘಟಿಸಿದರು. ನಾಲ್ಕನೇ ಕ್ವಾರ್ಟರ್‌ ನಲ್ಲಿ ಕೂಡಾ ಭಾರತ ಮುನ್ನಡೆ ಕಾಯ್ದುಕೊಂಡಿತು. ಪಂದ್ಯದ ಕೊನೆಯ ವೇಳೆಗೆ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದವು. ಅಂತಿಮವಾಗಿ ಭಾರತ ಗೆಲುವಿನ ನಗೆ ಬೀರಿತು.

ಭಾರತ ಇದುವರೆಗೆ ಕೂಟದಲ್ಲಿ ಅಜೇಯವಾಗಿ ಉಳಿದಿದ್ದು, ಮೂರು ಜಯ ಹಾಗೂ ಒಂದು ಡ್ರಾ ಸಾಧಿಸಿದೆ. ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಒಂದು ಪಂದ್ಯದಲ್ಲಿ ಸೋತಿದೆ. ವಿಶ್ವದಲ್ಲಿ 13ನೇ ಕ್ರಮಾಂಕದಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಫೇವರಿಟ್ ಆಗಿತ್ತು.

ಬಿ ಗುಂಪಿನಲ್ಲಿ ಭಾರತ ಅಗ್ರಸ್ಥಾನಿಯಾಗಿದ್ದರೆ, ದಕ್ಷಿಣ ಆಫ್ರಿಕಾ ಎ ಗುಂಪಿನ ಎರಡನೇ ಸ್ಥಾನಿಯಾಗಿ ಸೆಮಿಫೈನಲ್‍ಗೆ ಮುನ್ನಡೆದಿತ್ತು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ವಿಜೇತ ತಂಡವನ್ನು ಭಾರತ ಫೈನಲ್‍ನಲ್ಲಿ ಎದುರಿಸಲಿದೆ. ಸೆಮಿಫೈನಲ್‍ನಲ್ಲಿ ಸೋತ ತಂಡಗಳು ಕಂಚಿನ ಪದಕಕ್ಕಾಗಿ ಸೆಣೆಸಲಿವೆ.


© Copyright 2022, All Rights Reserved Kannada One News