ಕಾಮಿಡಿಯನ್ ರಾಜು ಶ್ರೀವಾಸ್ತವ ನಿಧನ

Related Articles

ಕರಾವಳಿ ಕತೆ ಹೇಳುವ 'ಕಾಂತಾರ': ತಾವು ಎಲ್ಲಿಂದ ಬಂದವರೆನ್ನುವುದ ಮರೆತ ನಿರ್ದೇಶಕ: ಪತ್ರಕರ್ತ ನವೀನ್ ಸೂರಿಂಜೆ ಅವರ ವಿಮರ್ಶೆ

ಮುಂಬೈ: ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್‌ ಮೃತದೇಹ ಪತ್ತೆ

ಉಗ್ರ ಹಿಂದುತ್ವ ಸಂಘಟನೆ ಸನಾತನ ಸಂಸ್ಥೆಯನ್ನೂ ನಿಷೇಧಿಸಲಾಗುತ್ತದೆಯೇ?: ನಟ ಚೇತನ್‌ ಅಹಿಂಸಾ

'ಚೆಲ್ಲೊ ಶೋ' ಭಾರತೀಯ ಸಿನಿಮಾ ಅಲ್ಲ: FWICE ಆರೋಪ

ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ನವೆಂಬರ್ 4ಕ್ಕೆ ತೆರೆಗೆ

ನಿಯಮ ಉಲ್ಲಂಘನೆ ಆರೋಪ: 'ಸೈಮಾ ಅವಾರ್ಡ್' ಆಯೋಜಕರ ವಿರುದ್ಧ ಎಫ್‌ ಐಆರ್

ಗೌರಿ ಸಾಕ್ಷ್ಯಚಿತ್ರ: ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಗೆ ಭಾಜನ

ರವೀಶ್‌ ಕುಮಾರ್‌ ಕುರಿತ ಸಾಕ್ಷ್ಯಚಿತ್ರಕ್ಕೆ ಆಂಪ್ಲಿಫೈ ವಾಯ್ಸಸ್‌ ಪ್ರಶಸ್ತಿ

ತಮಿಳು ನಟಿ ಪಾಲಿನ್ ಜೆಸ್ಸಿಕಾ ಆತ್ಮಹತ್ಯೆ

ಕೇರಳದಲ್ಲಿ ಸಾಪ್ತಾಹಿಕ ಕೋವಿಡ್ ಸೋಂಕು ಪ್ರಮಾಣ ಶೇ.50 ಹೆಚ್ಚಳ

ಕಾಮಿಡಿಯನ್ ರಾಜು ಶ್ರೀವಾಸ್ತವ ನಿಧನ

Updated : 21.09.2022

ಹೊಸದಿಲ್ಲಿ: ಹೃದಯ ಸ್ತಂಭನದಿಂದ ಆಸ್ಪತ್ರೆಗೆ ದಾಖಲಾಗಿದ್ದ ಒಂದು ತಿಂಗಳಿಗೂ ಅಧಿಕ ಸಮಯದ ನಂತರ ಕಾಮಿಡಿಯನ್  ರಾಜು ಶ್ರೀವಾಸ್ತವ ಅವರು ದಿಲ್ಲಿಯಲ್ಲಿ ಇಂದು ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಆಗಸ್ಟ್ 10 ರಂದು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ  ಕುಸಿದು ಬಿದ್ದ ಶ್ರೀವಾಸ್ತವ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಎಐಐಎಂಎಸ್) ದಾಖಲಿಸಲಾಯಿತು. ಅದೇ ದಿನ ಆಂಜಿಯೋಪ್ಲಾಸ್ಟಿ ಮಾಡಿಸಿ ವೆಂಟಿಲೇಟರ್  ವ್ಯವಸ್ಥೆಯಲ್ಲಿ ಇಡಲಾಗಿತ್ತು.

ಶ್ರೀವಾಸ್ತವ ಅವರು 1980 ರ ದಶಕದಿಂದಲೂ ಮನರಂಜನಾ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ.  ಆದರೆ 2005 ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಶೋ "ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್" ನಲ್ಲಿ ಭಾಗವಹಿಸಿದ ನಂತರ ಹೆಚ್ಚು ಮನ್ನಣೆ ಪಡೆದರು.

ಶ್ರೀವಾಸ್ತವ ಅವರು "ಮೈನೆ ಪ್ಯಾರ್ ಕಿಯಾ", "ಬಾಝಿಗರ್", "ಬಾಂಬೆ ಟು ಗೋವಾ" ಹಾಗೂ "ಆಮ್ದಾನಿ ಅಥಾನಿ ಖರ್ಚಾ ರುಪೈಯಾ" ಮುಂತಾದ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮೂರನೇ  ಆವೃತ್ತಿಯ "ಬಿಗ್ ಬಾಸ್" ನಲ್ಲಿ ಭಾಗವಹಿಸಿದ್ದರು.

© Copyright 2022, All Rights Reserved Kannada One News