ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಪ್ರತಿಮೆ ನಿರ್ಮಿಸುತ್ತೇವೆ: ಸಿಎಂ ಇಬ್ರಾಹಿಂ

ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಪ್ರತಿಮೆ ನಿರ್ಮಿಸುತ್ತೇವೆ: ಸಿಎಂ ಇಬ್ರಾಹಿಂ

Updated : 22.11.2022

ಹುಬ್ಬಳ್ಳಿ: ಪಂಚರತ್ನ ಯಾತ್ರೆ ಹಳೆ ಮೈಸೂರು ಭಾಗದಲ್ಲಿ ಜೋರಾಗಿ ನಡೆಯುತ್ತಿದೆ. ಪಂಚರತ್ನ ಕಾರ್ಯಕ್ರಮದ ಉದ್ದೇಶ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಐದು ವರ್ಷಗಳಲ್ಲಿ ಏನೂ ಮಾಡುತ್ತೆವೆಂದು ತಿಳಿಸಲಾಗುತ್ತದೆ.

ಐದು ವರ್ಷಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದೆ ಹೋದ್ರೆ 2028 ಕ್ಕೆ ನಾವು ನಿಮ್ಮಲ್ಲಿ ಮತ ಕೇಳಲಿಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.

ಬೊಮ್ಮಾಯಿಯವರು ಸಿಎಂ ಆದ ಮೇಲೆ ಮೀಸಲಾತಿಗಾಗಿ ಹೋರಾಟ ನಡೆಯುತ್ತಿವೆ. 40% ಕಮಿಷನ್ ಆರೋಪ ಮಾಡಿ, ಅವರದ್ದೆ ಪಕ್ಷದ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಸ್.ಆರ್.ಬೊಮ್ಮಾಯಿ ಆವರ ಬೃಹತ್ ಪ್ರತಿಮೆಯನ್ನ ಹುಬ್ಬಳ್ಳಿಯಲ್ಲಿ ಮಾಡುತ್ತೇವೆ ಎಂದಿದ್ದಾರೆ.

© Copyright 2022, All Rights Reserved Kannada One News