ಎರಡು ರೀತಿಯ ಸಾಹಿತಿಗಳು ಇದ್ದಾರೆ: ಸಿಎಂ ಬೊಮ್ಮಾಯಿ‌

ಎರಡು ರೀತಿಯ ಸಾಹಿತಿಗಳು ಇದ್ದಾರೆ: ಸಿಎಂ ಬೊಮ್ಮಾಯಿ‌

Updated : 29.09.2022

ಹಾವೇರಿ: ದೇಶದಲ್ಲಿ ಹಲವು ಬದಲಾವಣೆಗಳು ಆದಾಗ ಸಾಹಿತಿಗಳು ಪರ ಹಾಗೂ ವಿರೋಧ ಎರಡೂ ಕಡೆ ಇದ್ದಾರೆ. ಕೆಲವು ವಿಚಾರದಲ್ಲಿ ಅಲ್ಲೂ ಬೆಂಬಲ ಮಾಡ್ತಾರೆ‌. ಕೆಲವು ವಿಚಾರದಲ್ಲಿ ಇಲ್ಲಿಯೂ ಬೆಂಬಲ ನೀಡ್ತಾರೆ. ಭಾರತ್  ಜೋಡೋ ಯಾರ್ ಮಾಡ್ತಿದ್ದಾರೆ. ಭಾರತ್ ಥೋಡೋ ಯಾರ್ ಮಾಡ್ತಿದ್ದಾರೆ ಜನಕ್ಕೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಜೋಡೋ ಯಾತ್ರೆಯ ಪ್ಲೆಕ್ಸ್ ಗಳನ್ನು ಬಿಜೆಪಿಯವರು ಹರಿದು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಮಾಡಿರುವ ಆರೋಪಕ್ಕೆ ಸ್ಪಷ್ಟೀಕರಣ  ನೀಡಿರುವ ಸಿಎಂ ಅವರು, ಡಿಕೆಶಿ ಹೇಳಲಿ ಬಿಡಲಿ, ಮೊದಲನೆಯದಾಗಿ ಪರ್ಮಿಶನ್ ತಗೊಂಡು ಫ್ಲೆಕ್ಸ್ ಹಾಕಬೇಕು. ಪರ್ಮಿಶನ್ ತಗೊಂಡಿದ್ರಾ? ಇಲ್ಲವಾ ನನಗೆ ಮಾಹಿತಿ ಇಲ್ಲ. ಯಾವ ಪಕ್ಷಕ್ಕೂ ಫ್ಲೆಕ್ಸ್ ಹರಿಯುವಂತ ಅವಶ್ಯವಿಲ್ಲ. ಭಾರತ ಜೋಡೋ ಯಾತ್ರೆ ಫ್ಲೆಕ್ಸ್ ಹರಿದ ಬಗ್ಗೆ ಮಾಹಿತಿಯಿಲ್ಲ ಎಂದರು.


© Copyright 2022, All Rights Reserved Kannada One News