ಲೈಂಗಿಕ ಕಿರುಕುಳ ಪ್ರಕರಣ: ಪೊಲೀಸ್‌ ವಿಚಾರಣೆಗೆ ಹಾಜರಾದ ಲೇಖಕ ಸಿವಿಕ್‌ ಚಂದ್ರನ್

ಲೈಂಗಿಕ ಕಿರುಕುಳ ಪ್ರಕರಣ: ಪೊಲೀಸ್‌ ವಿಚಾರಣೆಗೆ ಹಾಜರಾದ ಲೇಖಕ ಸಿವಿಕ್‌ ಚಂದ್ರನ್

Updated : 25.10.2022

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದ ಸಂಬಂಧ ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಸಿವಿಕ್ ಚಂದ್ರನ್ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ರದ್ದುಪಡಿಸಿದ ಹಿನ್ನೆಲೆ ಅವರು ವಡಕರ ಡಿವೈಎಸ್‌ಪಿ ಮುಂದೆ ಶರಣಾಗಿದ್ದಾರೆ. 

ಈ ಹಿಂದೆ ಕೋಳಿಕ್ಕೋಡ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿತ್ತು. ತನಿಖಾಧಿಕಾರಿ ಎದುರು ಹಾಜರಾಗುವಂತೆ ಚಂದ್ರನ್‌ಗೆ ಹೈಕೋರ್ಟ್‌ ಸೂಚಿಸಿತ್ತು.
ಚಂದ್ರನ್ ಅವರು ವಕೀಲರೊಂದಿಗೆ ಡಿವೈಎಸ್ಪಿ ಕಚೇರಿಗೆ ಹಾಜರಾಗಿದ್ದರು. ಪ್ರಕ್ರಿಯೆ ಮುಗಿದ ಬಳಿಕ ಚಂದ್ರನ್‌ ಅವರನ್ನು ಕೋಳಿಕ್ಕೋಡ್‌ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.


© Copyright 2022, All Rights Reserved Kannada One News