ಚಿತ್ತ ಮತ್ತು ಚೇತಸಿಕಾಗಳು- ಅಭಿಧಮ್ಮದ ವಿಶ್ಲೇಷಣೆ. ಭಾಗ-2- ರಮಾಕಾಂತ್ ಪುರಾಣಿಕ್ ಅವರ 20ನೇ ಅಂಕಣ

ಚಿತ್ತ ಮತ್ತು ಚೇತಸಿಕಾಗಳು- ಅಭಿಧಮ್ಮದ ವಿಶ್ಲೇಷಣೆ. ಭಾಗ-2- ರಮಾಕಾಂತ್ ಪುರಾಣಿಕ್ ಅವರ 20ನೇ ಅಂಕಣ

Updated : 25.07.2022

ಧಮ್ಮದ ದಾರಿ-20
ನಮೋ ಅರಹತೋ ಭಗವತೋ ಸಮ್ಮಾ ಸಂಬುದ್ಧಸ್ಸ

ಕೆಲವು ಪದಗಳ ಅರ್ಥ ವಿವರಣೆ:
ಹೇತು: ಹೇತು ಎಂದರೆ ಕಾರ್ಯಕಾರಣಾಧಿನವಾದದ್ದು. ಕೊ ಹೇತು, ಕೋ ಪಚ್ಚಯ ಎನ್ನುವ  ವಾಕ್ಯವಿದೆ. ಹೇತು ಅಂದರೆ ರಾಗ, ದ್ವೇಷ, ಮೋಹ, ಅರಾಗ, ಅದ್ವೇಷ, ಅಮೋಹ ಹೀಗೆ ಆರು ಮೂಲ ಕಾರಣಗಳು, ನಂತರದ ಉಪಕಾರಕ ಧಮ್ಮಗಳು ಪಚ್ಚಯ ಎನ್ನಿಸಿಕೊಳ್ಳುತ್ತವೆ.  24 ಹೇತು ಪಚ್ಚಯಗಳಿಗೆ ಪಟ್ಠಾಣದಲ್ಲಿ ವಿವರಣೆ ಇದೆ. ಈ ಮೂಲ ಕಾರಣಗಳು ಸಹವರ್ತಿಯಾಗಿಲ್ಲದ ಚಿತ್ತಗಳನ್ನು ಅಹೇತುಕ ಚಿತ್ಗಗಳು ಎನ್ನುತ್ತಾರೆ.

ಸಂಪಟಿಚ್ಚನ ಚಿತ್ತ: ವಸ್ತು, ಘಟನೆಗಳನ್ನು ತತ್‌ ಕ್ಷಣ ಸ್ವೀಕರಿಸುವ ಚಿತ್ತ. ಅದನ್ನು ಪರಿಶೀಲನೆಗೊಳಪಡಿಸುವದು ಸಂತಿರಣ ಚಿತ್ತ .ಚಿತ್ತದ ಆಕ್ಷಣವನ್ನು ಪಂಚೇಂದ್ರಿಯಗಳ ಕಡೆಗೆ ತಿರುಗಿಸುವ ಪಂಚದ್ವಾರಾವಜ್ಜನ  ಮತ್ತು ಮನೋವಿಷಯಗಳ ಕಡೆಗೆ ತಿರುಗಿಸುವ ಮನೋದ್ವಾರಾವಜ್ಜನ ಇವು ಚಿತ್ತದ ಕ್ಷಣಗಳಾಗಿವೆ.
ಹಸಿತಉಪ್ಪಾದ: ಮುಗುಳ್ನಗೆಯ ಚಿತ್ತಗಳು.

ಅಕುಶಲ ವಿಪಾಕ ಅಹೇತುಕ ಚಿತ್ತಗಳು:
1) ಉಪೇಕ್ಷಾ ಸಹಿತ ಚಕ್ಷು ವಿಜ್ಞಾಣ (ಕಣ್ಣು)  ಅದರಂತೆ 2) ಸೋತ ವಿಜ್ಞಾಣ (ಕಿವಿ)  3) ಘಾನ ವಿಜ್ಞಾಣ (ಮೂಗು) 4) ಜಿಹ್ವಾ ವಿಜ್ಞಾಣ (ನಾಲಗೆ)  5) ದುಃಖ ವೇದನಾ ಸಹಿತ ಕಾಯ ವಿಜ್ಞಾಣ  6) ಉಪೇಕ್ಷಾ ಸಹಿತ ಸಂಪಟಿಚ್ಚನ ಚಿತ್ತ (Receiving consciousness)   7) ಉಪೇಕ್ಖಾಸಹಿತ ಸಂತಿರಣ ಚಿತ್ತ.

ಕುಶಲ ವಿಪಾಕ ಅಹೇತುಕ ಚಿತ್ತಗಳು:
8)  ಉಪೇಕ್ಷಾ ಸಹಿತ ಕುಶಲ ವಿಪಾಕ ಚಕ್ಷು ವಿಜ್ಞಾಣ (ಕಣ್ಣು)  ಅದರಂತೆ 9) ಸೋತ ವಿಜ್ಞಾಣ (ಕಿವಿ)  10) ಘಾನ ವಿಜ್ಞಾಣ (ಮೂಗು) 11) ಜಿಹ್ವಾ ವಿಜ್ಞಾಣ (ನಾಲಗೆ)  12) ಸುಖ ವೇದನಾ ಸಹಿತ ಕಾಯ ವಿಜ್ಞಾಣ  13) ಉಪೇಕ್ಷಾ ಸಹಿತ ಸಂಪಟಿಚ್ಚನ ಚಿತ್ತ (Receiving consciousness)   14)ಸುಖವೇದನಾಸಹಿತ ಸಂತಿರಣ ಚಿತ್ತ   15) ಉಪೇಕ್ಖಾಸಹಿತ ಸಂತಿರಣ ಚಿತ್ತ.

ಅಹೇತುಕ ಕಿರೀಯ ಚಿತ್ತಗಳು:
16) ಉಪೇಕ್ಷಾ ಸಹಿತ ಪಂಚೇಂದ್ರಿಯ ದ್ವಾರ ಗಮನಿತ ಚಿತ್ತ(ಪಂಚದ್ವಾರ ವಿಜ್ಜನ), ಅಂತೆಯೇ 17) ಮನೋದ್ವಾರ ಗಮನಿತ ಚಿತ್ತ  18) ಸುಖ ವೇದನೆಯ ಹಸಿತ ಉಪ್ಪಾದ (ಮುಗುಳ್ನಗೆ) ಚಿತ್ತ.
ಒಟ್ಟು ಏಳು ಅಕುಶಲ ವಿಪಾಕ, ಎಂಟು ಕುಶಲ ವಿಪಾಕ, ಮೂರು ಕಿರೀಯ ಚಿತ್ತಗಳು ಅಹೇತುಕವಾಗಿವೆ.
ಕಾಮಾವಚರ ಕುಶಲ ಚಿತ್ತಗಳು
1) & 2) ಸುಖವೇದನಾಸಹಿತ ಅಸಂಖಾರಿತ/ ಸಸಂಖಾರಿತ ಅರಿವಿನೊಂದಿಗಿನ ಚಿತ್ತಗಳು
3) &4) ಸುಖವೇದನಾಸಹಿತ ಅಸಂಖಾರಿತ/ ಸಸಂಖಾರಿತ ಅರಿವಿಲ್ಲದ ಚಿತ್ತಗಳು
5) & 6)  ಉಪೇಕ್ಖಾಸಹಿತ ಅಸಂಖಾರಿತ/ ಸಸಂಖಾರಿತ ಅರಿವಿನೊಂದಿಗಿನ ಚಿತ್ತಗಳು
7) & 8)  ಉಪೇಕ್ಖಾಸಹಿತ ಅಸಂಖಾರಿತ/ ಸಸಂಖಾರಿತ ಅರಿವಿಲ್ಲದ ಚಿತ್ತಗಳು

ಇದೇ ರೀತಿಯಲ್ಲಿ ಎಂಟು ಕಾಮಾವಚರ ಕುಶಲ ವಿಪಾಕ ಚಿತ್ತಗಳು ಮತ್ತು ಎಂಟು ಕಾಮಾವಚರ ಕುಶಲ ಕಿರೀಯ ಚಿತ್ತಗಳು ಇವೆ. ಒಟ್ಟು ಇಪ್ಪತ್ನಾಲ್ಕು ಕಾಮಾವಚರ ಕುಶಲ ಹೇತು ಚಿತ್ತಗಳು.

ಮತ್ತೆ ಕೆಲ ಪದಗಳ ಅರ್ಥವಿವರಣೆ.
ವಿತಕ್ಕ: ಮನಸ್ಸು ಒಂದು ನಿರ್ದಿಷ್ಠ ವಸ್ತುವಿನ ಕಡೆಗೆ ಸಾಗುವದು:
ವಿಚಾರ: ಒಂದು ಘಟನೆ, ವಸ್ತುವಿಗೆ ಅನುವರ್ತಿಯಾಗಿ ಸಾಗಿದ ಮನಸ್ಸು ಅದನ್ನೇ ಕೇಂದ್ರೀಕರಿಸಿ ಯೋಚಿಸುವದು ಮತ್ತು ವಸ್ತು, ಘಟನೆಯನ್ನು ಪರಿಶೀಲಿಸುವದು.
ಪೀತಿ: ಸಂತೋಷ,

ರೂಪಾವಚರ ಚಿತ್ತಗಳಲ್ಲಿ ಧ್ಯಾನದ ಐದು ಹಂತಗಳಿವೆ.

ವಿಚಾರ, ವಿತಕ್ಕ, ಪ್ರೀತಿ(ಸಂತೋಷ), ಸುಖವೇದನಾ, ಏಕಾಗ್ರತಾ ಸಹಿತವಾದ ಕುಶಲ/ವಿಪಾಕ / ಕಿರೀಯ ಚಿತ್ತಗಳು ಮೊದಲ ಝಾನ ಎನ್ನಿಸಿಕೊಳ್ಳುತ್ತವೆ.
 
ವಿತಕ್ಕವಿಲ್ಲದ ಉಳಿದ ಪ್ರತ್ಯಯಗಳು ಇರುವ ಕುಶಲ/ವಿಪಾಕ/ ಕಿರೀಯ ಚಿತ್ತಗಳು ಎರಡನೆ ಝಾನ ಎನ್ನಿಸಿಕೊಳ್ಳುತ್ತವೆ.
ವಿತಕ್ಕ, ವಿಚಾರ ಎರಡೂ ಇಲ್ಲದ ಉಳಿದ ಪ್ರತ್ಯಯಗಳ ಸಹಿತ ಕುಶಲ/ವಿಪಾಕ/ಕಿರೀಯ  ಚಿತ್ತಗಳ ಏಕಾಗ್ರತೆಯ ವಸ್ತುವಾಗಿಸಿದ  ಈ ಸ್ಥಿತಿಯು ಮೂರನೆಯ ಝಾನ ಎನ್ನಿಸಿಕೊಳ್ಳುತ್ತದೆ.

ಕೇವಲ ಸುಖವೇದನೆ ಮತ್ತು ಏಕಾಗ್ರತೆಯೊಡಗೂಡಿದ ಚಿತ್ತವು ನಾಲ್ಕನೇ ಝಾನದಲ್ಲಿರುತ್ತದೆ.
ಐದನೆಯ ಝಾನದಲ್ಲಿ ಉಪೇಕ್ಖಾ ಮತ್ತು ಏಕಾಗ್ರತೆಯಿಂದ ಕೂಡಿದ  ಚಿತ್ತ ಮಾತ್ರ ಇರುತ್ತದೆ.

ಹೀಗೆ ರೂಪಾವಚರದಲ್ಲಿ ಕುಶಲ, ವಿಪಾಕ ಮತ್ತು ಕಿರೀಯದ ಐದೈದು ಒಟ್ಟು ಹದಿನೈದು ಚಿತ್ತಗಳು ಇರುತ್ತವೆ. ಧ್ಯಾನಿಯು ರೂಪಾವಚರ ಝಾನಗಳಲ್ಲಿ ಭೌತಿಕ ವಸ್ತುಗಳನ್ನು (ಕಸೀನಾ) ಏಕಾಗ್ರತೆಯ ಸಾಧನವಾಗಿ ಉಪಯೋಗಿಸುತ್ತಾನೆ. ಅರೂಪ ಧ್ಯಾನದಲ್ಲಿ ಭೌತಿಕ ವಸ್ತುಗಳನ್ನು ಮೀರಿ ಏಕಾಗ್ರತೆಯನ್ನು ಸಾಧಿಸುತ್ತಾನೆ.

ಮೊದಲಿಗೆ ಆಕಾಶವು ಅನಂತವಾಗಿದೆ ಎಂದು ಅದರಲ್ಲಿ ಏಕಾಗ್ರತೆಯನ್ನು ಸಾಧಿಸುತ್ತಾನೆ. ಇದು “ಆಕಾಸಾನಞ್ಚಾಯತನ”.
ನಂತರ ವಿಞ್ಞಾಣವು (ಅರಿವು) ಅನಂತವಾಗಿದೆಯೆಂದು ಅದರಲ್ಲಿ ಏಕಾಗ್ರತೆಯನ್ನು ಸಾಧಿಸುತ್ತಾನೆ. ಇದು “ವಿಞ್ಞಾಣಾಞ್ಚಾಯತನ”.
ನಂತರ ಇಲ್ಲಿ ಏನೂ ಇಲ್ಲ ( ನತ್ಥಿ ಕಿಞ್ಚಿ)  ಎಂದು ಅದರಲ್ಲಿ ಏಕಾಗ್ರತೆಯನ್ನು ಸಾಧಿಸುತ್ತಾನೆ.
ನಂತರ ಮೂರನೆ ಝಾನವನ್ನೇ ಏಕಾಗ್ರತೆಯ ವಸ್ತುವಾಗಿಸಿ ಚಿತ್ತ ಇದೆಯೋ ಇಲ್ಲವೋ ಅನ್ನುವಷ್ಟು ಸೂಕ್ಷವಾಗಿಸಿ ಚಿತ್ತ ಇದೆ ಮತ್ತು ಇಲ್ಲ ಎನ್ನುವ ಸ್ತಿತಿಗೆ ಬರುತ್ತಾನೆ. “ನೇವ ಸಞ್ಞಾ ನಾಸಞ್ಞಾಯತನ” ಎನ್ನುವ ಅರಿವು.  

 ಹೀಗೆ ಅರೂಪದಲ್ಲಿ ಕುಶಲ, ವಿಪಾಕ ಮತ್ತು ಕಿರೀಯಗಳಲ್ಲಿ ಪ್ರತಿಯೊಂದರಲ್ಲಿ ನಾಲ್ಕುಅಂದರೆ ಒಟ್ಟು ಹನ್ನೆರಡು ಚಿತ್ತಗಳು ಇವೆ.

ಲೋಕುತ್ತರದಲ್ಲಿ(supermundane) ನಾಲ್ಕು ಹಂತಗಳಿವೆ. ನಾಲ್ಕು ವಿದಧ ಸಾಧಕ ಸಮಣರಿದ್ದಾರೆ.
1) ಸೋತಾಪತ್ತಿ
2) ಸಕದಾಗಾಮಿ
3) ಅನಾಗಾಮಿ
4) ಅರಹಂತ
ಸಾಧನೆಯ ದಾರಿಯಲ್ಲಿ ಪ್ರವೇಶಿಸಿದವನು ತನ್ನ ಎಲ್ಲ ಕಲ್ಮಷಗಳನ್ನು ಕಳೆದುಕೊಳ್ಳುತ್ತ ಖೀಣಾಶವನಾಗಿ ಅರಹಂತ ಸ್ಥಿತಿ ಸಾಧಿಸುತ್ತಾನೆ.
ಈ ನಾಲ್ಕು ಚಿತ್ತಗಳು ಮತ್ತೆ ಕುಶಲ (ಮಗ್ಗ) ಮತ್ತು ವಿಪಾಕ ( ಫಲ) ಎಂದು ಎರಡು ಭಾಗಗಳಾಗಿ ಒ ಟ್ಟು ಎಂಟು ಚಿತ್ತಗಳಾಗಿತ್ತವೆ. ಪ್ರತೀ ಚಿತ್ತದಲ್ಲಿ ಐದು ಝಾನಗಳ ಹಂತವನ್ನು ನೋಡಿ ೮*೫=೪೦ ಚಿತ್ತಗಳಾಗಿ ನೋಡಬಹುದು.

ಚಿತ್ತಗಳ ಸಂಕ್ಷಿಪ್ತ ನೋಟ

ಚಿತ್ತಗಳು — 89/121

ಕಾಮಾವಚರ-54
ರೂಪಾವಚರ—15
ಅರೂಪಾವಚರ—12
ಲೋಕುತ್ತರ—8/40

ಭವತು ಸಬ್ಬ ಮಂಗಲಂ, ರಕ್ಖಂತು ಸಬ್ಬ ದೇವತಾ   

© Copyright 2022, All Rights Reserved Kannada One News