ಕರ್ನಾಟಕಕ್ಕೆ ಬಿಜೆಪಿಯಿಂದ ಕಳಂಕ: ಪಿಣರಾಯಿ ವಿಜಯನ್‌

Related Articles

ಪರೇಶ್ ಮೇಸ್ತ ಪ್ರಕರಣ| ಬಿಜೆಪಿಗರೇ ಜನರೆದುರು ಕ್ಷಮೆ ಕೇಳುವ ಮುಖ ಇದ್ಯಾ: ಬಿ.ಕೆ.ಹರಿಪ್ರಸಾದ್

ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.6ರಿಂದ 10ಕ್ಕೇರಿಸಿದ ತೆಲಂಗಾಣ ಸರ್ಕಾರ

ಅಡ್ಡ ಮತದಾನ: ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್‌

ಪರೇಶ್ ಮೇಸ್ತಾ ಕುರಿತ CBI ವರದಿ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ: ಸಿದ್ದರಾಮಯ್ಯ

ಅಧ್ಯಕ್ಷೀಯ ಚುನಾವಣೆಗೆ ಕಾಂಗ್ರೆಸ್‌ನಿಂದ ಮಾರ್ಗಸೂಚಿ ಬಿಡುಗಡೆ

SDPI ಯನ್ನು ನಿಷೇಧಿಸಲು ಪೂರಕವಾದ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಚುನಾವಣಾ ಆಯೋಗ

ಎರಡಕ್ಕಿಂತ ಅಧಿಕ ಮಕ್ಕಳಿರುವವರು ಪಾಕಿಸ್ತಾನಕ್ಕೆ ಹೋಗಲಿ: ಯತ್ನಾಳ ವಿವಾದಾತ್ಮಕ ಹೇಳಿಕೆ

ರಾಹುಲ್ ಗಾಂಧಿ ಭದ್ರತೆಗೆ ಒಂದು ಹಗ್ಗ ಕೊಡಿಸಲೂ ಈ ಸರ್ಕಾರಕ್ಕೆ ಗತಿ ಇಲ್ಲವಾ?: ಬಿಜೆಪಿ ವಿರುದ್ಧ ಖರ್ಗೆ ಆಕ್ರೋಶ

ಮಹಾ ಸಿಎಂ ಶಿಂದೆಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ: ಫಡಣವೀಸ್

ಅಕ್ರಮ ಅಕ್ಕಿ ಸಾಗಾಟ ಪ್ರಕರಣ: ಬಿಜೆಪಿ ಮುಖಂಡ ಗಡಿಪಾರು

ಕರ್ನಾಟಕಕ್ಕೆ ಬಿಜೆಪಿಯಿಂದ ಕಳಂಕ: ಪಿಣರಾಯಿ ವಿಜಯನ್‌

Updated : 19.09.2022

ಚಿಕ್ಕಬಳ್ಳಾಪುರ: ಉಡುಪಿ, ಮಂಗಳೂರು, ಕರಾವಳಿ ಭಾಗಗಳಲ್ಲಿ ಕೋಮು ಪ್ರಚೋಧನೆ ಮೂಲಕ ಕರ್ನಾಟಕದ ಪರಂಪರೆಗೆ ಬಿಜೆಪಿ, ಆರೆಸ್ಸೆಸ್‌ ಕಳಂಕ ತರುತ್ತಿದೆ. ಶಾಲಾ ಪಠ್ಯ ಪುಸ್ತಕಗಳನ್ನು ಕೇಸರಿಕರಣಗೊಳಿಸುವ ಮೂಲಕ ಬಿಜೆಪಿ ಸರ್ಕಾರ ಮುಗ್ಧ ಮಕ್ಕಳಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಸಮಾನತೆಗಾಗಿ ಹೋರಾಡಿದ ಪೆರಿಯರ್‌. ನಾರಾಯಣ ಗುರು, ಭಗತ್‌ಸಿಂಗ್‌ ರವರ ಪಠ್ಯಗಳನ್ನು ನಿರ್ಲಕ್ಷಿಸಲಾಗಿದೆ  ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಕೆಎಸ್‌ಆರ್‌ಟಿಸಿ ಡೀಪೋ ಬಳಿ ರವಿವಾರ ಸಿಪಿಎಂ ಆಯೋಜಿಸಿದ್ದ ರಾಜ್ಯ ಮಟ್ಟದ ಬೃಹತ್‌ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪಿಣರಾಯಿ ವಿಜಯನ್‌,  ಅಧಿಕಾರಕ್ಕಾಗಿ ಜನರಲ್ಲಿ ಜಾತಿ, ಧರ್ಮದ ಹೆಸರಲ್ಲಿ ಕೋಮುಭಾವನೆ ಕೆರಳಿಸಿ ಕೋಮುದಳ್ಳುರಿ ನಡೆಸುವ ಬಿಜೆಪಿ, ಸಂಘ ಪರಿವಾರದಿಂದ ರಾಷ್ಟಕ್ಕೆ ಆಪತ್ತು ಎಂದು ಕಳವಳ ವ್ಯಕ್ತಪಡಿಸಿದರು.

  ಬಿಜೆಪಿ, ಸಂಘ ಪರಿವಾರ ಹಾಗೂ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ದ ನೇರ ವಾಗ್ದಾಳಿ ನಡೆಸಿ ಕೋಮುವಾದಿ ರಾಜಕಾರಣದ ವಿರುದ್ದ ಪ್ರಗತಿಪರರು ಒಗ್ಗಟ್ಟು ಪ್ರದರ್ಶಿಸಬೇಕೆಂದು ಕರೆ ನೀಡಿದರು.

ದೇಶದ ಸ್ವಾತಂತ್ರ್ಯ ಚಳವಳಿ ಭಾಗವಾಗಿರದ ಶಕ್ತಿಗಳು ಇಂದು ಅಧಿಕಾರದಲ್ಲಿ ವಿಜೃಂಭಿಸುತ್ತಿರುವುದು ದೊಡ್ಡ ದುರಂತ, ದೇಶ ಪ್ರೇಮ, ದೇಶ ಭಕ್ತಿಯೆಂದರೆ ಹಿಂದುತ್ವ ಎನ್ನುವ ರೀತಿಯಲ್ಲಿ ಸಂಘ, ಪರಿವಾರ ವರ್ತಿಸುತ್ತಿದೆ. ಬಿಜೆಪಿ ಅಧಿಕಾರದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ. ರೈತ, ಕಾರ್ಮಿಕ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಬಿಜೆಪಿಯನ್ನು ಸೈದ್ದಾಂತಿಕವಾಗಿ ಎದುರಿಸುವ ಶಕ್ತಿ ಕಾಂಗ್ರೆಸ್‌ಗೆ ಇಲ್ಲ. ಅದು ಕೇವಲ ಎಡಪಕ್ಷಗಳಿಗೆ ಮಾತ್ರ ಸಾಧ್ಯ ಎಂದರು.

ರಾಜ್ಯಗಳ ಕತ್ತು ಹಿಸುಕುವ ಕೆಲಸ: ದೇಶದ ಒಕ್ಕೂಟದ ವ್ಯವಸ್ಥೆಯ ವಿರುದ್ದವಾಗಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸಿ ರಾಜ್ಯಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಬಿಜೆಪಿ, ಸಂಘ ಪರಿವಾರದ ಎಲ್ಲಾ ಕುತಂತ್ರಗಳನ್ನು ಸೈದ್ದಾಂತಿಕವಾಗಿ ಎದುರಿಸುವ ತಾಕತ್ತು ಎಡಪಕ್ಷಗಳಿಗೆ ಮಾತ್ರ ಇದೆ. ರಾಷ್ಟ್ರದಲ್ಲಿ ನವ ಉದಾರೀಕರಣ ನೀತಿಗಳು ಶರವೇಗದಲ್ಲಿ ಜಾರಿ ಆಗುತ್ತಿವೆ. ಬಿಜೆಪಿ, ಸಂಘ ಪರಿವಾರ ದೇಶವನ್ನು ವಿಭಜಿಸವ ಅಜೆಂಡಾ ಹೊಂದಿವೆ. ಇದು ಅತ್ಯಂತ ಅಪಾಯಕಾರಿ, ಕೋಮುವಾದಿ ಶಕ್ತಿಗಳಿಂದ ದೇಶದ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ತೀವ್ರ ಅಪಾಯ ಇದೆ ಎಂದರು.

ಸಮಾವೇಶದ ವೇದಿಕೆಯಲ್ಲಿ ಸಿಪಿಎಂ ಪೊಲಿಟ್‌ ಬ್ಯುರೊ ಸದಸ್ಯರಾದ ಎಂ.ಎ. ಬೇಬಿ, ಬಿ.ವಿ. ರಾಘವಲು, ರಾಜ್ಯ ಕಾರ್ಯದರ್ಶಿ ಯು. ಬಸವರಾಜ. ಮುಖಂಡರಾದ ಕೆ.ಎನ..ಉಮೇಶ., ಎಸ.. ವರಲಕ್ಷ್ಮಿ, ಕೆ.ನೀಲಾ, ಜಿ.ಎನ್‌.ನಾಗರಾಜ, ಮೀನಾಕ್ಷಿ ಸುಂದರಂ, ಗೋಪಾಲಕೃಷ್ಣ ಅರಳಹಳ್ಳಿ, ಎಂ.ಪಿ.ಮುನಿವೆಂಕಟಪ್ಪ. ಜಿ.ಸಿ.ಬಯ್ಯಾರೆಡ್ಡಿ, ಡಾ. ಕೆ.ಪ್ರಕಾಶ., ಸಯ್ಯದ್‌ ಮುಜೀಬ., ಯಾಧವ ಶೆಟ್ಟಿ, ಡಾ. ಅನೀಲ್‌ ಕುಮಾರ್‌, ಮಹಮ್ಮದ್‌ ಅಕ್ರಂ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು.


© Copyright 2022, All Rights Reserved Kannada One News