ರಸ್ತೆ ಗುಂಡಿಗಳ ನಡುವೆ ವಧು ಫೋಟೊಶೂಟ್: ವೈರಲ್ ವಿಡಿಯೊ

Related Articles

ಪ್ರಭಾಸ್ ನಟನೆಯ ಆದಿಪುರುಷ ಚಿತ್ರಕ್ಕೆ ಸಂಕಷ್ಟ: ಕಾನೂನು ಕ್ರಮ ಕೈಗೊಳ್ಳುವುದಾಗಿ ಮಧ್ಯ ಪ್ರದೇಶದ ಗೃಹ ಸಚಿವ ಎಚ್ಚರಿಕೆ

ಜಮ್ಮು-ಕಾಶ್ಮೀರ ಕಾರಾಗೃಹ ಡಿಜಿ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು: ಮನೆ ಸಹಾಯಕನೇ ಮುಖ್ಯ ಆರೋಪಿ, ಹತ್ಯೆ ಹೊಣೆ ಹೊತ್ತುಕೊಂಡ ಪಿಎಎಫ್ಎಫ್ ಸಂಘಟನೆ

ಅಮೆರಿಕಾದಲ್ಲಿ 8 ತಿಂಗಳ ಮಗುವಿನ ಸಹಿತ ಭಾರತ ಮೂಲದ ಕುಟುಂಬ ಅಪಹರಣ

ವಿಜಯಪುರ: ಕೆಎಸ್ಸಾರ್ಟಿಸಿ ನೌಕರ ಆತ್ಮಹತ್ಯೆ

ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಮಹಿಳೆಯ ಹತ್ಯೆ

ಬಿಬಿಎಂಪಿ ಮುಖ್ಯ ಆಯುಕ್ತರ ಚಿತ್ರ ಬಳಸಿ ವಂಚನೆ: ಎಫ್‍ಐಆರ್ ದಾಖಲು

ದಕ್ಷಿಣ ಕನ್ನಡ: ಅ.5ಕ್ಕೆ ಉಚಿತ 'ಅಭಾ ಕಾರ್ಡ್‌' ಉಚಿತ ನೋಂದಣಿ

ಉತ್ತರಾಖಂಡ್‌: ಹಿಮಕುಸಿತದಲ್ಲಿ ಸಿಲುಕಿದ 28 ಪರ್ವತಾರೋಹಿಗಳು

ಎಸ್ಸಿ ಯುವಕನ ಜೊತೆ ಒಕ್ಕಲಿಗ ಯುವತಿ ನಾಪತ್ತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬೆಳ್ತಂಗಡಿಯಲ್ಲಿ RSSನಿಂದ ಶಸ್ತ್ರಾಸ್ತ ಪೂಜೆ: ಸಿಪಿಐ(ಎಂ) ಖಂಡನೆ

ರಸ್ತೆ ಗುಂಡಿಗಳ ನಡುವೆ ವಧು ಫೋಟೊಶೂಟ್: ವೈರಲ್ ವಿಡಿಯೊ

Updated : 21.09.2022

ತಿರುವನಂತಪುರ: ಮದುವೆಯ ಸಂಭ್ರಮದಲ್ಲಿರುವ ವಧು–ವರರು ತಮ್ಮ ಅವಿಸ್ಮರಣೀಯ ಕ್ಷಣವನ್ನು ಫೋಟೊಶೂಟ್ ಮೂಲಕ ಸೆರೆಹಿಡಿಯುವುದು ಸಾಮಾನ್ಯ. ಆದರೆ, ಕೇರಳದ ವಧುವೊಬ್ಬರು ತಮ್ಮ ಮದುವೆಯ ಫೋಟೊಶೂಟ್ ಅನ್ನು ಆ ಪ್ರದೇಶದಲ್ಲಿನ ರಸ್ತೆ ಗುಂಡಿಗಳ ಬಳಿ ಮಾಡಿಸಿಕೊಳ್ಳುವ ಮೂಲಕ ಸಮಸ್ಯೆಯ ಬಗ್ಗೆ ಆಡಳಿತ ವರ್ಗದ ಗಮನ ಸೆಳೆದಿದ್ದಾರೆ.

ರಸ್ತೆಯಲ್ಲಿರುವ ಗುಂಡಿಗಳ ಬಳಿ ನಿಂತು ವಧು ಫೋಟೊಶೂಟ್ ಮಾಡಿಸಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಂಪು ಸೀರೆಯುಟ್ಟ ವಧು ನೀರು ತುಂಬಿದ ರಸ್ತೆ ಗುಂಡಿಗಳ ಪಕ್ಕದಲ್ಲಿ ನಡೆಯುತ್ತಾ ಬರುತ್ತಿದ್ದಾರೆ. ಛಾಯಾಗ್ರಾಹಕರು ಗುಂಡಿಗಳನ್ನೂ ಹೈಲೆಟ್ ಮಾಡಿ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಅಕ್ಕಪಕ್ಕ ಹೋಗುತ್ತಿದ್ದ ವಾಹನ ಸವಾರರು ಸಹ ಪರದಾಡುತ್ತಾ ಸಂಚರಿಸುತ್ತಿರುವುದು ಕಂಡುಬಂದಿದೆ.

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ 43 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, 3.7 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ವಧುವಿನ ಸೃಜನಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕೇರಳದ ರಸ್ತೆ ಪರಿಸ್ಥಿತಿಗಳನ್ನು ಗೇಲಿ ಮಾಡಿದ್ದಾರೆ. ಒಬ್ಬ ಬಳಕೆದಾರ ‘ಈ ಫೋಟೊಶೂಟ್ ರಸ್ತೆಯಲ್ಲಿ ಅಲ್ಲ ಕೊಳದಲ್ಲಿ ನಡೆಯುತ್ತಿದೆ’ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಒಳ್ಳೆ ರಸ್ತೆ’ಎಂದು ಬರೆದಿದ್ಧಾರೆ. ಮಗದೊಬ್ಬರು, ‘ಇದು ರಸ್ತೆಯೇ? ನೀವು ಮೀನಿನ ಮರಿಗಳನ್ನು ಖರೀದಿಸಿದರೆ, ಇಲ್ಲಿ ಮೀನು ಸಾಕಾಣಿಕೆಯನ್ನು ಪ್ರಾರಂಭಿಸಬಹುದು’ಎಂದು ಕಾಮೆಂಟ್ ಮಾಡಿದ್ದಾರೆ.

© Copyright 2022, All Rights Reserved Kannada One News