ಅಕ್ರಮ ಹಣ ವರ್ಗಾವಣೆ ಆರೋಪ: ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸಮನ್ಸ್

Related Articles

ಕರಾವಳಿ ಕತೆ ಹೇಳುವ 'ಕಾಂತಾರ': ತಾವು ಎಲ್ಲಿಂದ ಬಂದವರೆನ್ನುವುದ ಮರೆತ ನಿರ್ದೇಶಕ: ಪತ್ರಕರ್ತ ನವೀನ್ ಸೂರಿಂಜೆ ಅವರ ವಿಮರ್ಶೆ

ಮುಂಬೈ: ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್‌ ಮೃತದೇಹ ಪತ್ತೆ

ಉಗ್ರ ಹಿಂದುತ್ವ ಸಂಘಟನೆ ಸನಾತನ ಸಂಸ್ಥೆಯನ್ನೂ ನಿಷೇಧಿಸಲಾಗುತ್ತದೆಯೇ?: ನಟ ಚೇತನ್‌ ಅಹಿಂಸಾ

'ಚೆಲ್ಲೊ ಶೋ' ಭಾರತೀಯ ಸಿನಿಮಾ ಅಲ್ಲ: FWICE ಆರೋಪ

ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ನವೆಂಬರ್ 4ಕ್ಕೆ ತೆರೆಗೆ

ನಿಯಮ ಉಲ್ಲಂಘನೆ ಆರೋಪ: 'ಸೈಮಾ ಅವಾರ್ಡ್' ಆಯೋಜಕರ ವಿರುದ್ಧ ಎಫ್‌ ಐಆರ್

ಕಾಮಿಡಿಯನ್ ರಾಜು ಶ್ರೀವಾಸ್ತವ ನಿಧನ

ಗೌರಿ ಸಾಕ್ಷ್ಯಚಿತ್ರ: ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಗೆ ಭಾಜನ

ರವೀಶ್‌ ಕುಮಾರ್‌ ಕುರಿತ ಸಾಕ್ಷ್ಯಚಿತ್ರಕ್ಕೆ ಆಂಪ್ಲಿಫೈ ವಾಯ್ಸಸ್‌ ಪ್ರಶಸ್ತಿ

ತಮಿಳು ನಟಿ ಪಾಲಿನ್ ಜೆಸ್ಸಿಕಾ ಆತ್ಮಹತ್ಯೆ

ಅಕ್ರಮ ಹಣ ವರ್ಗಾವಣೆ ಆರೋಪ: ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸಮನ್ಸ್

Updated : 01.09.2022

ಬಾಲಿವುಡ್ ನಟಿ ಮತ್ತು ರಾರಾ ರಕ್ಕಮ್ಮ ಖ್ಯಾತಿಯ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸೆಪ್ಟೆಂಬರ್ 26ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. 

ಜಾಕ್ವೆಲಿನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿದ್ದು, ಈಗಾಗಲೇ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣವನ್ನು ದಾಖಲಿಸಿಕೊಂಡಿದೆ. ಪ್ರಕರಣದ ವಿಚಾರಣೆಯ ಭಾಗವಾಗಿ ದೆಹಲಿ ಹೈಕೋರ್ಟ್ ಜಾಕ್ವೆಲಿನ್‌ಗೆ ನೋಟಿಸ್ ಜಾರಿ ಮಾಡಿದೆ.

200 ಕೋಟಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿ ಸುಖೇಶ್ ಚಂದ್ರಶೇಖರ್ ಎಂಬಾತನನ್ನು ಇಡಿ ತನಿಖೆಗೆ ಒಳಪಡಿಸಿದೆ. ಸುಖೇಶ್ ನಡೆಸಿರುವ ಅಕ್ರಮ ಹಣ ವರ್ಗಾವಣೆಯಲ್ಲಿ ಜಾಕ್ವೆಲಿನ್ ಸಹಆರೋಪಿ ಎಂದು ನ್ಯಾಯಾಲಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಇಡಿ ಉಲ್ಲೇಖಿಸಿದೆ. 


© Copyright 2022, All Rights Reserved Kannada One News