ಬಾಲಿವುಡ್‌ ಖ್ಯಾತ ನಟ ಮಿತಿಲೇಶ್​ ಚತುರ್ವೇದಿ ನಿಧನ

ಬಾಲಿವುಡ್‌ ಖ್ಯಾತ ನಟ ಮಿತಿಲೇಶ್​ ಚತುರ್ವೇದಿ ನಿಧನ

Updated : 04.08.2022

ಮುಂಬೈ: ಬಾಲಿವುಡ್‌ ಖ್ಯಾತ ಪೋಷಕ ನಟ ಮಿತಿಲೇಶ್ ಚತುರ್ವೇದಿ (Mithilesh Chaturvedi) ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. 

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬುಧವಾರ ರಾತ್ರಿ ನಿಧನರಾದರು ಎಂದು ಅವರ ಅಳಿಯ ಆಶಿಶ್ ಚತುರ್ವೇದಿ ಸಾಮಾಜಿಕ ಜಾಲತಾಣಗಳ ಮೂಲಕ ಖಚಿತಪಡಿಸಿದ್ದಾರೆ. ಲಖನೌದಲ್ಲಿ ಮಕ್ಕಳ ಜತೆ ವಾಸವಾಗಿದ್ದರು ಎಂದು ಸಿನಿಮಾರಂಗದ ಅವರ ಸ್ನೇಹಿತರು ಹೇಳಿದ್ದಾರೆ.

© Copyright 2022, All Rights Reserved Kannada One News