ಅಕ್ಷಯ್ ಕುಮಾರ್ ನಟನೆಯ 6 ಏರ್ ಬ್ಯಾಗ್ ಜಾಹೀರಾತು ಮಸ್ಯಾತ್ಮಕವಾಗಿದೆ ಎಂದು ವ್ಯಾಪಕ ಟೀಕೆ

ಅಕ್ಷಯ್ ಕುಮಾರ್ ನಟನೆಯ 6 ಏರ್ ಬ್ಯಾಗ್ ಜಾಹೀರಾತು ಮಸ್ಯಾತ್ಮಕವಾಗಿದೆ ಎಂದು ವ್ಯಾಪಕ ಟೀಕೆ

Updated : 13.09.2022

 ಹೊಸದಿಲ್ಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನಟಿಸಿರುವ ರಸ್ತೆ ಸುರಕ್ಷಾ ಅಭಿಯಾನದ ವೀಡಿಯೊ ಜಾಹೀರಾತು ಬಗ್ಗೆ  ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕಾರುಗಳಲ್ಲಿ 6 ಏರ್ ಬ್ಯಾಗ್‌ಗಳ ಕುರಿತು ಸರಕಾರ ಪ್ರಚಾರ ಮಾಡುತ್ತಿರುವ ನಡುವೆ ಕಳೆದ ವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ವೀಡಿಯೊ ಜಾಹೀರಾತನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದರು.

 ವೀಡಿಯೊದಲ್ಲಿ ತಂದೆಯೋರ್ವ ಮಗಳನ್ನು ಆಕೆಯ ಪತಿಯೊಂದಿಗೆ ಬೀಳ್ಕೊಡುವ ಸಂದರ್ಭ ಅಳುತ್ತಿರುತ್ತಾನೆ. ಈ ಸಂದರ್ಭ ಪೊಲೀಸ್ ಸಮವಸ್ತ್ರ ಧರಿಸಿದ ಅಕ್ಷಯ್ ಕುಮಾರ್ ಕಾಣಿಸಿಕೊಂಡು ನವ ದಂಪತಿಯನ್ನು ಕೇವಲ ಎರಡು ಏರ್‌ಬ್ಯಾಗ್ ಇರುವ ಕಾರಿನಲ್ಲಿ ಕಳುಹಿಸುತ್ತಿರುವ ತಂದೆಯನ್ನು ಗೇಲಿ ಮಾಡುತ್ತಾರೆ.

ಜಾಹೀರಾತಿನಲ್ಲಿ ಗಡ್ಕರಿ ಅವರು ಒಂದೆಡೆ ಕಾರಿನಲ್ಲಿ ೬ ಏರ್ ಬ್ಯಾಗ್‌ಗಳ ಪ್ರಚಾರ ಮಾಡುತ್ತಾರೆ. ಇನ್ನೊಂದೆಡೆ  ವರದಕ್ಷಿಣೆ ಸಂಸ್ಕೃತಿಯನ್ನು ಕೂಡ ಉತ್ತೇಜಿಸುತ್ತಾರೆ ಎಂದು ಹಲವರು ಟೀಕಿಸಿದ್ದಾರೆ.

ಈ ಜಾಹೀರಾತು ಸಮಸ್ಯಾತ್ಮಕವಾಗಿದೆ ಎಂದು ಹಲವು ರಾಜಕೀಯ ನಾಯಕರು ಗಮನ ಸೆಳೆದಿದ್ದಾರೆ. ಜಾಹೀರಾತಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ, ವರದಕ್ಷಿಣೆಯ ದುಷ್ಟ ಹಾಗೂ ಕ್ರಿಮಿನಲ್ ಕೃತ್ಯಕ್ಕೆ ಇದು ಉತ್ತೇಜನ ನೀಡುತ್ತದೆ ಎಂದಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ, ಭಾರತ ಸರಕಾರ ವರದಕ್ಷಿಣೆಯನ್ನು ಅಧಿಕೃತವಾಗಿ ಪ್ರಚಾರ ಮಾಡುವುದನ್ನು ನೋಡಲು ಅಸಹ್ಯವಾಗುತ್ತದೆ ಎಂದಿದ್ದಾರೆ.

© Copyright 2022, All Rights Reserved Kannada One News