Flash News:
ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ 75 ಮಂದಿ ಪ್ರಯಾಣಿಸುತ್ತಿದ್ದ ದೋಣಿ: ಓರ್ವ ಅಧಿಕಾರಿ ಸೇರಿ ಹಲವರು ನಾಪತ್ತೆ

ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ 75 ಮಂದಿ ಪ್ರಯಾಣಿಸುತ್ತಿದ್ದ ದೋಣಿ: ಓರ್ವ ಅಧಿಕಾರಿ ಸೇರಿ ಹಲವರು ನಾಪತ್ತೆ

Updated : 29.09.2022

ಹೊಸದಿಲ್ಲಿ: ಹಲವು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 75 ಜನರನ್ನು ಹೊತ್ತೊಯ್ಯುತ್ತಿದ್ದ ಯಾಂತ್ರೀಕೃತ ದೋಣಿಯೊಂದು ಗುರುವಾರ ಅಸ್ಸಾಂನ ಧುಬ್ರಿಯ ಬ್ರಹ್ಮಪುತ್ರ ನದಿಯಲ್ಲಿ ಮುಳುಗಿರುವ ಘಟನೆ ವರದಿಯಾಗಿದೆ. ಘಟನೆಯ ಬಳಿಕ ಧುಬ್ರಿ ಕಂದಾಯ ವೃತ್ತದ ಅಧಿಕಾರಿ ಸಂಜು ದಾಸ್ ಸೇರಿದಂತೆ ಹಲವರು ನಾಪತ್ತೆಯಾಗಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ  ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ಶೋಧ ಹಾಗೂ  ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

"ಧುಬ್ರಿ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿ ದೇಶೀಯ  ನಿರ್ಮಿತ ದೋಣಿಯೊಂದು ಮಗುಚಿ ಬಿದ್ದಿದೆ. ಶೋಧ ಹಾಗೂ  ರಕ್ಷಣಾ ತಂಡಗಳು ಕಾರ್ಯಾಚರಣೆ ಆರಂಭಿಸಿವೆ. ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ" ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಞಾನೇಂದ್ರ ದೇವ್ ತ್ರಿಪಾಠಿ ಹೇಳಿದ್ದಾರೆ.

"ಈ ಯಾಂತ್ರೀಕೃತ ಹಳ್ಳಿಗಾಡಿನ ದೋಣಿ ಸರಕುಗಳನ್ನು ಸಾಗಿಸಲು ಮಾತ್ರ ಬಳಸಲಾಗುತ್ತಿತ್ತು. ಸರ್ಕಲ್ ಆಫೀಸರ್ ಸ್ವತಃ ಅನೇಕ ಪ್ರಯಾಣಿಕರೊಂದಿಗೆ ಏಕೆ ಪ್ರಯಾಣಿಸುತ್ತಿದ್ದರು ಎಂಬುದು ತನಿಖೆಯಾಗಬೇಕಾದ ವಿಷಯವಾಗಿದೆ" ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

© Copyright 2022, All Rights Reserved Kannada One News