ಬಿಜೆಪಿ ಸೇರುವಂತೆ ಆಮಿಷ; ಬಿಎಲ್‌ ಸಂತೋಷ್‌ಗೆ ಬಂಧನದ ಭೀತಿ

ಬಿಜೆಪಿ ಸೇರುವಂತೆ ಆಮಿಷ; ಬಿಎಲ್‌ ಸಂತೋಷ್‌ಗೆ ಬಂಧನದ ಭೀತಿ

Updated : 19.11.2022

ತೆಲಂಗಾಣ: ತೆಲಂಗಾಣದಲ್ಲಿ ಬಿಜೆಪಿ ಸೇರುವಂತೆ ಭಾರತೀಯ ರಾಷ್ಟ್ರ ಸಮಿತಿಯ(ಬಿಆರ್‌ಎಸ್‌) ನಾಲ್ವರು ಶಾಸಕರಿಗೆ ಹಣದ ಆಮಿಷವೊಡ್ಡಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕರ‍್ಯರ‍್ಶಿ ಬಿ ಎಲ್‌ ಸಂತೋಷ್‌ ಅವರಿಗೆ ನವೆಂಬರ್‌ ೨೧ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಶುಕ್ರವಾರ ಸಮನ್ಸ್‌ ಜಾರಿ ಮಾಡಿದೆ.

ಅಪರಾಧ ನೀತಿ ಸಂಹಿತೆಯ ಸೆಕ್ಷನ್‌ (ಸಿಆರ್‌ಪಿಸಿ) ೪೧(ಎ) ಅಡಿಯಲ್ಲಿ ಸಮನ್ಸ್‌ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಗೈರಾದರೆ ಬಂಧಿಸುವ ಎಚ್ಚರಿಕೆ ಕೂಡ ನೀಡಿದೆ.  ಕಳೆದ ತಿಂಗಳು ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್) ನೇತೃತ್ವದ ರ‍್ಕಾರವನ್ನು ಅಸ್ಥಿರಗೊಳಿಸಲು ಬಿಆರ್‌ಎಸ್‌ನ ಶಾಸಕರಾದ ಪಿ ರೋಹಿತ್‌ ರೆಡ್ಡಿ, ರೇಗಾ ಕಾಂತಾರಾವ್‌, ಗುವ್ವಾಲ ಬಾಲರಾಜು ಹಾಗೂ ಬೀರಮ್‌ ರ‍್ಷರ‍್ಧನ ಅವರಿಗೆ ಹಣದ ಆಮಿಷವೊಡ್ಡಿದ ಆರೋಪ ಸಂತೋಷ್‌ ಮೇಲೆ ಕೇಳಿಬಂದಿತ್ತು. ಸದ್ಯ ಬಿಎಲ್‌ ಸಂತೋಷ್‌ ಬಂಧನದ ಭೀತಿಯಲ್ಲಿದ್ದಾರೆ.

© Copyright 2022, All Rights Reserved Kannada One News