ಭಾರತಕ್ಕೆ ಮತ್ತೊಂದು ಬೆಳ್ಳಿ: ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಬಿಂದ್ಯಾರಾಣಿ

Related Articles

ಇಂಗ್ಲೆಂಡ್ ವಿರುದ್ಧ ಕ್ಲೀನ್‍ಸ್ವೀಪ್ ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ

ಟೆನಿಸ್ ಗೆ ವಿದಾಯ ಹೇಳಿದ ರೋಜರ್ ಫೆಡರರ್: ಸ್ನೇಹಿತನ ನಿವೃತ್ತಿಗೆ ಗಳಗಳನೆ ಅತ್ತ ಪ್ರತಿಸ್ಪರ್ಧಿ ರಫೆಲ್ ನಡಾಲ್: ಇದು ಕ್ರೀಡೆಯ ಅತ್ಯುತ್ತಮ ಕ್ಷಣ ಎಂದ ಕೊಹ್ಲಿ

ಟೆನಿಸ್ ಗೆ ಸ್ವಿಸ್ ಸ್ಟಾರ್ ರೋಜರ್ ಫೆಡರರ್ ವಿದಾಯ

ಲಾರೆನ್ಸ್ ಮೈದಾನದಲ್ಲಿ ಅಬ್ಬರಿಸಿದ ಹರ್ಮನ್​ಪ್ರೀತ್ ಕೌರ್: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 88 ರನ್‌ ಗೆಲುವು

ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಟಿಕೆಟ್ ಖರೀದಿಗೆ ನೂಕುನುಗ್ಗಲು: ಕಾಲ್ತುಳಿತದಿಂದ ಹಲವರಿಗೆ ಗಾಯ

ಉದ್ದೀಪನ ಮದ್ದು ಸೇವನೆ ಪ್ರಕರಣ: ಹಿರಿಯ ಅಥ್ಲೀಟ್ ಪೂವಮ್ಮಗೆ 2 ವರ್ಷ ನಿಷೇಧ

ಉತ್ತರ ಪ್ರದೇಶ| ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ: ವೀಡಿಯೊ ವೈರಲ್

ಟಿ20 ವಿಶ್ವಕಪ್: ನ್ಯೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‍: ಭಾರತದ ಬಜರಂಗ್ ಪೂನಿಯಾಗೆ ಕಂಚಿನ ಪದಕ

ಮಹಿಳಾ ಏಕದಿನ ಕ್ರಿಕೆಟ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

ಭಾರತಕ್ಕೆ ಮತ್ತೊಂದು ಬೆಳ್ಳಿ: ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಬಿಂದ್ಯಾರಾಣಿ

Updated : 31.07.2022

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪದಕದ ಓಟಕ್ಕೆ ವೇಟ್‌ಲಿಫ್ಟರ್‌ ಬಿಂದ್ಯಾರಾಣಿ ದೇವಿ ಕೊಡುಗೆ ನೀಡಿದ್ದಾರೆ. ಅವರು ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದಾರೆ. ಬಿಂದ್ಯಾರಾಣಿ ಅವರ ಸಾಧನೆಯ ನೆರವಿನೊಂದಿಗೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ನಾಲ್ಕನೇ ಪದಕ ಸಿಕ್ಕಂತಾಗಿದೆ.

ಶನಿವಾರ ನಡೆದ ಮಹಿಳೆಯರ ವೇಟ್‌ಲಿಫ್ಟಿಂಗ್‌ನ 55 ಕೆ.ಜಿ. ವಿಭಾಗದಲ್ಲಿ ಅವರು ಒಟ್ಟು 202 ಕೆ.ಜಿ (86 ಕೆ.ಜಿ+ 116 ಕೆ.ಜಿ) ಭಾರ ಎತ್ತುವ ಮೂಲಕ ಅವರು ಎರಡನೇ ಸ್ಥಾನ ಪಡೆದಿದ್ದಾರೆ. ಸಿಡಬ್ಲ್ಯುಜಿಯಲ್ಲಿ ಇದು ಬಿಂದ್ಯಾರಾಣಿ ಅವರ ಶ್ರೇಷ್ಠ ಸಾಧನೆ ಎಂದೂ ದಾಖಲಾಗಿದೆ.

ನೈಜೀರಿಯಾದ ಆದಿಜತ್ ಅಡೆನಿಕೆ ಒಲರಿನೊಯ್ ಅವರು ಒಟ್ಟು 203 ಕೆಜಿ (92 ಕೆಜಿ + 111 ಕೆಜಿ) ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದು, ಸ್ಥಳೀಯ ಪ್ರತಿಭೆ ಫ್ರೇರ್ ಮಾರೊ ಅವರು ಒಟ್ಟು 198 ಕೆಜಿ (86 ಕೆಜಿ+109 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮೊದಲು ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರು ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದಿದ್ದರು. ಅಲ್ಲದೇ ಸಂಕೇತ್ ಸರ್ಗರ್ ಮತ್ತು ಗುರುರಾಜ ಪೂಜಾರಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು.

© Copyright 2022, All Rights Reserved Kannada One News