ಭಾರತದ ಅತ್ಯಂತ ಕಲುಷಿತ ನಗರಗಳಲ್ಲಿ ಬೆಂಗಳೂರಿಗೆ 6ನೇ ಸ್ಥಾನ!

ಭಾರತದ ಅತ್ಯಂತ ಕಲುಷಿತ ನಗರಗಳಲ್ಲಿ ಬೆಂಗಳೂರಿಗೆ 6ನೇ ಸ್ಥಾನ!

Updated : 25.07.2022

ಬೆಂಗಳೂರು: ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಬೆಂಗಳೂರು ನಗರವು ಸೋಮವಾರ ಬೆಳಗ್ಗೆ ಅತ್ಯಂತ ಕೆಟ್ಟ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗುವ ಮೂಲಕ ಭಾರತದ ಅತ್ಯಂತ ಕಲುಷಿತ ನಗರಗಳಲ್ಲಿ 6 ನೇ ಸ್ಥಾನವನ್ನು ಪಡೆದುಕೊಂಡಿದೆ. ನಗರವು ಬೆಳಿಗ್ಗೆ 7.30 ಗಂಟೆಗೆ 101ರ ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಿಸಿದೆ. ಅದಾಗ್ಯೂ ಮಧ್ಯಾಹ್ನದ ಹೊತ್ತಿಗೆ ಗುಣಮಟ್ಟವು 67ರೊಂದಿಗೆ ತೃಪ್ತಿಕರ ಮಟ್ಟಕ್ಕೆ ಇಳಿಯಿತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ಪಂಜಾಬ್‌ನ ರೂಪನಗರವು 141 ರ ವಾಯು ಗುಣಮುಟ್ಟ ದಾಖಲಾಗುವುದರೊಂದಿಗೆ ಅಗ್ರಸ್ಥಾನದಲ್ಲಿದೆ.

ಪಂಜಾಬ್​ನ ರೂಪನಗರವು 141 ರ ವಾಯು ಗುಣಮುಟ್ಟದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪಾಟ್ನಾ 113ರ ಗುಣಮಟ್ಟ ಸೂಚ್ಯಂಕದೊಂದಿಗೆ 2ನೇ ಸ್ಥಾನ, 114 ರ ಗುಣಮಟ್ಟ ಸೂಚ್ಯಂಕದೊಂದಿಗೆ ಧರುಹೆರಾ 3ನೇ ಸ್ಥಾನ, 106 ಗುಣಮಟ್ಟ ಸೂಚ್ಯಂಕದೊಂದಿಗೆ ದೆಹಲಿ 4ನೇ ಸ್ಥಾನ, 104 ರ ಸೂಚ್ಯಂಕದೊಂದಿಗೆ ಚಂದ್ರಾಪುರ್ ನಗರವು 5ನೇ ಸ್ಥಾನ ಪಡೆದಿದೆ. ಇದರ ನಂತರ 101ರ ವಾಯು ಗುಣಮಟ್ಟ ಸೂಚ್ಯಂಕದೊಂದಿಗೆ ಬೆಂಗಳೂರು ನಗರ 6ನೇ ಸ್ಥಾನ ಪಡೆದುಕೊಂಡಿದೆ.

ವಾಯು ಗುಣಮಟ್ಟ ಸೂಚ್ಯಂಕದಲ್ಲಿ 100 ಕ್ಕಿಂತ ಹೆಚ್ಚಿನ AQI ಮೌಲ್ಯವನ್ನು ಮಧ್ಯಮ ತೀವ್ರವೆಂದು ಪರಿಗಣಿಸಲಾಗುತ್ತದೆ. CPCB ಪ್ರಕಾರ, ಇಂತಹ ಕಲುಷಿತ ವಾಯು ಗುಣಮಟ್ಟವು ಜನರಲ್ಲಿ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು.

© Copyright 2022, All Rights Reserved Kannada One News