‘ಬೇಹುಗಾರಿಕಾ’ ಹಡಗಿಗೆ ಅನುಮತಿ ನೀಡಿದ ಶ್ರೀಲಂಕಾ

Related Articles

108 ಆ್ಯಂಬುಲೆನ್ಸ್ ಸ್ಥಗಿತ ಹಿನ್ನೆಲೆ: ಆರೋಗ್ಯ ಸಚಿವ ಕೆ. ಸುಧಾಕರ್ ವಿರುದ್ಧ ಕಾಂಗ್ರೆಸ್ ಟೀಕೆ

ಎನ್.ಡಿ.ಎ ಮೈತ್ರಿಕೂಟವನ್ನು ತೊರೆದದ್ದು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ: ತೇಜಸ್ವಿ ಯಾದವ್

ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹೋದಲ್ಲೆಲ್ಲಾ ಕಮಲ ಅರಳಿದೆ: ಸಿಎಂ ಬಸವರಾಜ ಬೊಮ್ಮಾಯಿ

ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ವೈದ್ಯ, ಅವರ ಇಬ್ಬರು ಮಕ್ಕಳು ಮೃತ್ಯು

ಮಹಿಷ ದಸರಾ: ಮಹಿಷ ಪ್ರತಿಮೆ ಪೂಜೆ ಅವಕಾಶಕ್ಕೆ ಹೈಕೋರ್ಟ್‌ ನಕಾರ

ಉಸಿರಾಟದ ಸಮಸ್ಯೆ: ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

ಅನುಮತಿ ಸಿಗದೆ ಇದ್ದರೂ ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ: ಲೇಖಕ ಸಿದ್ಧಸ್ವಾಮಿ

ಬಲವಂತವಾಗಿ ಮತಾಂತರ ಮಾಡಲು ಯತ್ನ ಆರೋಪ: ಪ್ರಕರಣ ದಾಖಲು

ದಂಡ ಕಟ್ಟುತ್ತೇವೆ, ದೇವರ ಮುಟ್ಟಲು ಬಿಡಿ: ಆರ್‌.ಧರ್ಮಸೇನ ಸವಾಲು

‘ಚೈಲ್ಡ್‌ ಪೋರ್ನ್‌’ ವೀಡಿಯೊ ಹಂಚಿಕೆ ಜಾಲದ ಮೇಲೆ ಸಿಬಿಐ ದಾಳಿ: 50 ಲ್ಯಾಪ್‌ಟಾಪ್‌ಗಳು ವಶಕ್ಕೆ

‘ಬೇಹುಗಾರಿಕಾ’ ಹಡಗಿಗೆ ಅನುಮತಿ ನೀಡಿದ ಶ್ರೀಲಂಕಾ

Updated : 14.08.2022

ನವದೆಹಲಿಯ ಸೇನಾ ನೆಲೆಗಳ ಮೇಲೆ ಬೇಹುಗಾರಿಕೆ ನಡೆಸಬಹುದೆಂಬ ಭಾರತದ ಆತಂಕದ ನಡುವೆಯೂ ಚೀನಾದ ವಿವಾದಿತ ಸಂಶೋಧನಾ ನೌಕೆಗೆ ಬಂದರಿಗೆ ಭೇಟಿ ನೀಡಲು ಶ್ರೀಲಂಕಾ ಸರಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಡಗು ಶ್ರೀಲಂಕಾದ ಹಂಬಂಟೋಟ‌ ಬಂದರಿಗೆ ಆಗಸ್ಟ್ 11ರಂದು ಆಗಮಿಸಿ ಆ. 17ರ ವರೆಗೆ ಬಂದರಿನಲ್ಲಿ ಉಳಿಯುವಂತೆ ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಭಾರತ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಂದರು ಪ್ರವೇಶ ಮುಂದೂಡುವಂತೆ ಚೀನಾದ ರಾಯಭಾರ ಕಚೇರಿಗೆ ಶ್ರೀಲಂಕಾ ಮನವಿ ಮಾಡಿತ್ತು.

ಇದೀಗ ಶ್ರೀಲಂಕಾದಿಂದ ಅನುಮತಿ ದೊರೆತ ಹಿನ್ನಲೆಯಲ್ಲಿ ಈ ಹಡಗು ಆ. 16ಕ್ಕೆ ಬಂದರಿಗೆ ಆಗಮಿಸಿ ಆ. 22ರ ತನಕ ಅಲ್ಲಿ ಉಳಿಯಲಿದೆ. ‘ಯುವಾನ್ ವಾಂಗ್ 5’ ಎಂಬ ಹೆಸರಿನ ಈ ನೌಕೆಯು ಸಂಶೋಧನೆ ಮತ್ತು ಸಮೀಕ್ಷೆ ಸಂಬಂಧ ಹಡಗು ಎಂದು ಅಂತರರಾಷ್ಟ್ರೀಯ ಶಿಪ್ಪಿಂಗ್ ಮತ್ತು ವಿಶ್ಲೇಷಣಾ ತಾಣಗಳು ವಿವರಿಸಿದ್ದರೂ, ಇದು ದ್ವಿಬಳಕೆಯ ಬೇಹುಗಾರಿಕಾ ಹಡಗು ಎಂದು ಹೇಳಲಾಗುತ್ತಿದೆ.

© Copyright 2022, All Rights Reserved Kannada One News