2ಎ ಮೀಸಲಾತಿ ಸಿಗದಿದ್ದರೆ ನವೆಂಬರ್‌ನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ: ಯತ್ನಾಳ್‌

Related Articles

ಪರೇಶ್ ಮೇಸ್ತ ಪ್ರಕರಣ| ಬಿಜೆಪಿಗರೇ ಜನರೆದುರು ಕ್ಷಮೆ ಕೇಳುವ ಮುಖ ಇದ್ಯಾ: ಬಿ.ಕೆ.ಹರಿಪ್ರಸಾದ್

ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.6ರಿಂದ 10ಕ್ಕೇರಿಸಿದ ತೆಲಂಗಾಣ ಸರ್ಕಾರ

ಅಡ್ಡ ಮತದಾನ: ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್‌

ಪರೇಶ್ ಮೇಸ್ತಾ ಕುರಿತ CBI ವರದಿ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ: ಸಿದ್ದರಾಮಯ್ಯ

ಅಧ್ಯಕ್ಷೀಯ ಚುನಾವಣೆಗೆ ಕಾಂಗ್ರೆಸ್‌ನಿಂದ ಮಾರ್ಗಸೂಚಿ ಬಿಡುಗಡೆ

SDPI ಯನ್ನು ನಿಷೇಧಿಸಲು ಪೂರಕವಾದ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಚುನಾವಣಾ ಆಯೋಗ

ಎರಡಕ್ಕಿಂತ ಅಧಿಕ ಮಕ್ಕಳಿರುವವರು ಪಾಕಿಸ್ತಾನಕ್ಕೆ ಹೋಗಲಿ: ಯತ್ನಾಳ ವಿವಾದಾತ್ಮಕ ಹೇಳಿಕೆ

ರಾಹುಲ್ ಗಾಂಧಿ ಭದ್ರತೆಗೆ ಒಂದು ಹಗ್ಗ ಕೊಡಿಸಲೂ ಈ ಸರ್ಕಾರಕ್ಕೆ ಗತಿ ಇಲ್ಲವಾ?: ಬಿಜೆಪಿ ವಿರುದ್ಧ ಖರ್ಗೆ ಆಕ್ರೋಶ

ಮಹಾ ಸಿಎಂ ಶಿಂದೆಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ: ಫಡಣವೀಸ್

ಅಕ್ರಮ ಅಕ್ಕಿ ಸಾಗಾಟ ಪ್ರಕರಣ: ಬಿಜೆಪಿ ಮುಖಂಡ ಗಡಿಪಾರು

2ಎ ಮೀಸಲಾತಿ ಸಿಗದಿದ್ದರೆ ನವೆಂಬರ್‌ನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ: ಯತ್ನಾಳ್‌

Updated : 21.09.2022

ಹಾವೇರಿ:  'ನವೆಂಬರ್​​ ತಿಂಗಳೊಳಗೆ ಮೀಸಲಾತಿ ಸಿಗುವ ವಿಶ್ವಾಸವಿದೆ. ಇಲ್ಲದಿದ್ದಲ್ಲಿ ನವೆಂಬರ್‌ 2ನೇ ವಾರದಲ್ಲಿ 25 ಲಕ್ಷ ಜನ ಸೇರಿ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದೇವೆ' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಹಾವೇರಿ ಜಿಲ್ಲೆ‌ ಶಿಗ್ಗಾಂವಿ ಪಟ್ಟಣದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದ ಮುಂದೆ ಮಂಗಳವಾರ ನಡೆದ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದರು.

'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ವಿರೋಧಿಗಳಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಬೊಮ್ಮಾಯಿ ಅವರನ್ನು ಯಡಿಯೂರಪ್ಪ ಅವರು ಬಿಡುತ್ತಿಲ್ಲ. ತಿರುಪತಿಗೆ ಹೋಗಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡದಂತೆ ಬಿಎಸ್‌ವೈ ಹೇಳಿರುವ ಕಾರಣ ಬೊಮ್ಮಾಯಿ ಅವರು ಮೀಸಲಾತಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ' ದೂರಿದರು.

'ನಾವು ನಿಮಗೇನು ಮಂತ್ರಿ ಸ್ಥಾನ ಕೇಳಿಲ್ಲ. ನಮಗೆ ಮೀಸಲಾತಿ ಕೊಡಿ. ಇವತ್ತು ಅಧಿವೇಶನದಲ್ಲಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನನಗೆ ಬೆಂಬಲ ಕೊಟ್ಟಿದ್ದಾರೆ. ಅಧಿವೇಶನ ಮುಗಿಯೋದರ ಒಳಗೆ ಎಲ್ಲ ಪಕ್ಷದ ಮುಖಂಡರು ಮೀಸಲಾತಿ ಚರ್ಚೆಯಲ್ಲಿ ಭಾಗವಹಿಸಿ ನಮ್ಮ ಹೋರಾಟಕ್ಕೆ ಜಯ ಸಿಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ' ಎಂದು ತಿಳಿಸಿದರು.

© Copyright 2022, All Rights Reserved Kannada One News