ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೊನ್ ಫಿಂಚ್

Related Articles

ಇಂಗ್ಲೆಂಡ್ ವಿರುದ್ಧ ಕ್ಲೀನ್‍ಸ್ವೀಪ್ ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ

ಟೆನಿಸ್ ಗೆ ವಿದಾಯ ಹೇಳಿದ ರೋಜರ್ ಫೆಡರರ್: ಸ್ನೇಹಿತನ ನಿವೃತ್ತಿಗೆ ಗಳಗಳನೆ ಅತ್ತ ಪ್ರತಿಸ್ಪರ್ಧಿ ರಫೆಲ್ ನಡಾಲ್: ಇದು ಕ್ರೀಡೆಯ ಅತ್ಯುತ್ತಮ ಕ್ಷಣ ಎಂದ ಕೊಹ್ಲಿ

ಟೆನಿಸ್ ಗೆ ಸ್ವಿಸ್ ಸ್ಟಾರ್ ರೋಜರ್ ಫೆಡರರ್ ವಿದಾಯ

ಲಾರೆನ್ಸ್ ಮೈದಾನದಲ್ಲಿ ಅಬ್ಬರಿಸಿದ ಹರ್ಮನ್​ಪ್ರೀತ್ ಕೌರ್: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 88 ರನ್‌ ಗೆಲುವು

ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಟಿಕೆಟ್ ಖರೀದಿಗೆ ನೂಕುನುಗ್ಗಲು: ಕಾಲ್ತುಳಿತದಿಂದ ಹಲವರಿಗೆ ಗಾಯ

ಉದ್ದೀಪನ ಮದ್ದು ಸೇವನೆ ಪ್ರಕರಣ: ಹಿರಿಯ ಅಥ್ಲೀಟ್ ಪೂವಮ್ಮಗೆ 2 ವರ್ಷ ನಿಷೇಧ

ಉತ್ತರ ಪ್ರದೇಶ| ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ: ವೀಡಿಯೊ ವೈರಲ್

ಟಿ20 ವಿಶ್ವಕಪ್: ನ್ಯೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‍: ಭಾರತದ ಬಜರಂಗ್ ಪೂನಿಯಾಗೆ ಕಂಚಿನ ಪದಕ

ಮಹಿಳಾ ಏಕದಿನ ಕ್ರಿಕೆಟ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೊನ್ ಫಿಂಚ್

Updated : 10.09.2022

ಕೈರ್ನ್ಸ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಆ್ಯರೊನ್ ಫಿಂಚ್ ಶನಿವಾರ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಅಚ್ಚರಿಗೊಳಿಸಿದರು. ಇದು ಬ್ಯಾಟನ್ ಹಸ್ತಾಂತರಿಸುವ ಸಮಯ ಎಂದು ಅವರು ಹೇಳಿದ್ದಾರೆ.

35 ವರ್ಷ ವಯಸ್ಸಿನ ಫಿಂಚ್ ಅವರು ತಮ್ಮ 146 ನೇ ಮತ್ತು ಅಂತಿಮ ಏಕದಿನ ಪಂದ್ಯವನ್ನು ರವಿವಾರ ಕೇರ್ನ್ಸ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಆಡಲಿದ್ದಾರೆ. 50 ಓವರ್‌ಗಳ ಆಟದಲ್ಲಿ ಫಿಂಚ್  ಅವರು 5,401 ರನ್ ಗಳಿಸಿ ಉತ್ತಮ ಸಾಧನ ಮಾಡಿದ್ದರು.

17 ಶತಕಗಳನ್ನು ಗಳಿಸುವ ಮೂಲಕ ತಮ್ಮ ದೇಶದ ಶ್ರೇಷ್ಠ ಆಟಗಾರರಾದ ರಿಕಿ ಪಾಂಟಿಂಗ್ (29), ಡೇವಿಡ್ ವಾರ್ನರ್ ಹಾಗೂ  ಮಾರ್ಕ್ ವಾ (ಇಬ್ಬರೂ 18) ಬಳಿಕದ ಸ್ಥಾನ ಪಡೆದಿದ್ದರು.

ಮುಂದಿನ ತಿಂಗಳು ತವರು ನೆಲದಲ್ಲಿ ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ತಯಾರಿ ನಡೆಸುತ್ತಿರುವ ಆಸ್ಟ್ರೇಲಿಯ ಟ್ವೆಂಟಿ-20  ತಂಡವನ್ನು ಫಿಂಚ್ ಮುನ್ನಡೆಸಲಿದ್ದಾರೆ.

"ಇದು ಕೆಲವು ನಂಬಲಾಗದ ನೆನಪುಗಳೊಂದಿಗೆ ಅದ್ಭುತ ಪಯಣವಾಗಿದೆ" ಎಂದು ಏಕದಿನ ತಂಡವನ್ನು 54 ಬಾರಿ ನಾಯಕನಾಗಿ ಮುನ್ನಡೆಸಿದ್ದ ಫಿಂಚ್ ಹೇಳಿದ್ದಾರೆ.

© Copyright 2022, All Rights Reserved Kannada One News