Flash News:
ʼಕಲ್ಲಂಗಡಿ ರಕ್ತʼ: ಆರಿಫ್‌ ರಾಜಾ ಅವರ ವರ್ತಮಾನಕ್ಕೆ ಮಿಡಿವ ಕವಿತೆ

ʼಕಲ್ಲಂಗಡಿ ರಕ್ತʼ: ಆರಿಫ್‌ ರಾಜಾ ಅವರ ವರ್ತಮಾನಕ್ಕೆ ಮಿಡಿವ ಕವಿತೆ

Updated : 12.04.2022

ಬೀದಿ ಬದಿಯಲಿ ಸಿಡಿ ಸಿಡಿದು
ಬೀಳುತ್ತಿರುವುದು
ಕೇವಲ ಕೆಂಪು ಕಲ್ಲಂಗಡಿ ಹಣ್ಣುಗಳಲ್ಲ
ಗೆಳೆಯರೆ

ಐದು ವರ್ಷಕ್ಕೊಮ್ಮೆ ಬಂದು ಹೋಗುವ
ವಸಂತ ಋತುವಿಗೆ
ಡೊಗ್ಗು ಸಲಾಮು ಹೊಡೆಯುವ
ನಮ್ಮ ನಿಮ್ಮಂಥವರ
ಬಡಪಾಯಿ ಹೃದಯ!

ಅಸಲಿ ದೇಶದ್ರೋಹಿಗಳಿಗಷ್ಟೇ ಅಲ್ಲ
ನಕಲಿ ದೇಶಭಕ್ತರಿಗೂ ಗೊತ್ತು:
ರಕ್ತ ಚೆಲ್ಲದಿದ್ದರೇನಾಯಿತು
ರಸ್ತೆಯ ಮೇಲೆ
ರಕ್ತದ ಬಣ್ಣಚೆಲ್ಲಿದರೂ ಸಾಕು!

'...ಬಾಬಾ,ದುವಾ ಮಾಡಿ
ದುವಾ ಮಾಡಿ ಬಾಬಾ'
ಈ ಬೀದಿಯಲಿ ಇಂದು ಹರಿದ ಕಲ್ಲಂಗಡಿ ರಕ್ತ
ನಾಳೆ ನಮ್ಮದೂ ಆಗದಿರಲೆಂದು!

                      -ಆರಿಫ್ ರಾಜಾ

© Copyright 2022, All Rights Reserved Kannada One News