ಮೇಲ್ಮನೆಯಲ್ಲಿ ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆ

Related Articles

ಭಾರತದ ಜನಪ್ರಿಯ ಗೇಮಿಂಗ್ ಯೂಟ್ಯೂಬರ್ ಅಭ್ಯುದಯ್ ಮಿಶ್ರಾ ರಸ್ತೆ ಅಪಘಾತದಲ್ಲಿ ಮೃತ್ಯು

ಪಿಎಸ್ಐ ಹಗರಣ: ಪ್ರಮುಖ ಆರೋಪಿ ಹಾಸ್ಟೆಲ್ ವಾರ್ಡನ್ ಬಂಧನ

ತಮ್ಮ ತಂಗಿ ಜೊತೆ ಸ್ನೇಹದಲ್ಲಿದ್ದ ಯುವಕನ ಹತ್ಯೆ: ಆರೋಪಿಗಳ ಬಂಧನ

ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ 75 ಮಂದಿ ಪ್ರಯಾಣಿಸುತ್ತಿದ್ದ ದೋಣಿ: ಓರ್ವ ಅಧಿಕಾರಿ ಸೇರಿ ಹಲವರು ನಾಪತ್ತೆ

ಪ್ರವಾದಿ ಮುಹಮ್ಮದ್ ಬಗ್ಗೆ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ: ಮುಖ್ಯಶಿಕ್ಷಕ ಅಮಾನತು

ದೇಶದ ನೂತನ ಅಟಾರ್ನಿ ಜನರಲ್‌ ಆಗಿ ಹಿರಿಯ ವಕೀಲ ಆರ್‌.ವೆಂಕಟರಮಣಿ ನೇಮಕ

ಕೊಡಗು: ಸಾಕಾನೆ ದಾಳಿಗೆ ಕಾರ್ಮಿಕ ಬಲಿ

ಚಾಮರಾಜನಗರ: ‘ಭಾರತ್ ಜೋಡೋ’ ಫ್ಲೆಕ್ಸ್ ಹರಿದ ದುಷ್ಕರ್ಮಿಗಳು

ಕಾನೂನುಬದ್ಧ ಗರ್ಭಪಾತಕ್ಕೆ ಎಲ್ಲ ಮಹಿಳೆಯರು ಅರ್ಹ : ಸುಪ್ರೀಂಕೋರ್ಟ್

ಮಳಲಿ‌ ಮಸೀದಿ ವಿವಾದ: ಪ್ರಕರಣದ ತೀರ್ಪು ಅ.17 ಕ್ಕೆ ಮುಂದೂಡಿಕೆ

ಮೇಲ್ಮನೆಯಲ್ಲಿ ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆ

Updated : 23.09.2022

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಸ್ವತ್ತುಗಳ ದುರ್ಬಳಕೆ ಮತ್ತು ಅತಿಕ್ರಮಣದ ಕುರಿತು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪಾಡಿ ವರದಿಯನ್ನು ಪರಿಷತ್ತಿನ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಂಡಿಸಿದರು.

ಗುರುವಾರ ವಿಧಾನ ಪರಿಷತ್ತಿನಲ್ಲಿ ವರದಿ ಮಂಡನೆಯಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಹರಿಪ್ರಸಾದ್ ಸೇರಿ ಹಲವು ಸದಸ್ಯರು ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಪಟ್ಟುಹಿಡಿದರು. ಅದು ಅಲ್ಲದೆ, ವರದಿ ಮೂಲಕ ಹಲವು ನಾಯಕರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದಾಗ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಗದ್ದಲ ಉಂಟಾಯಿತು.

ಇದರ ನಡುವೆಯೇ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಪ್ರಸ್ತಾಪಿಸಿ, ಕಾಂಗ್ರೆಸ್ ನಾಯಕರಾದ ಝಮೀರ್ ಅಹ್ಮದ್‍ಖಾನ್, ನಸೀರ್ ಅಹ್ಮದ್ ಸೇರಿದಂತೆ 12 ಮಂದಿಯ ಹೆಸರಿದೆ ಎಂದು ಹೇಳಲಾಗುತ್ತಿದೆ ಎಂದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು, ವರದಿಯೇ ಇನ್ನೂ ಮಂಡನೆಯಾಗಿಲ್ಲ ಹೇಗೆ ಹೆಸರು ಉಲ್ಲೇಖಿಸುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿ ವಾಗ್ವಾದಕ್ಕಿಳಿದರು. ಈ ನಡುವೆ ಸಭಾಪತಿ ರಘುನಾಥ್‍ರಾವ್ ಮಲ್ಕಾಪುರೆ ಸದನವನ್ನು ಶುಕ್ರವಾರಕ್ಕೆ ಮುಂದೂಡಿದರು.

ವರದಿಯಲ್ಲಿ ಏನಿದೆ?: ರಾಜ್ಯದ ಬೀದರ್, ಕಲಬುರ್ಗಿ, ಬೆಂಗಳೂರು ನಗರ, ಕೊಪ್ಪಳ ಸೇರಿದಂತೆ ವಿವಿಧ ನಗರಗಳಲ್ಲಿರುವ ವಕ್ಫ್ ಆಸ್ತಿಯನ್ನು ರಾಜಕೀಯ ಪ್ರತಿನಿಧಿಗಳು, ಸಂಘಸಂಸ್ಥೆಗಳು ಕಬಳಿಸಿರುವ ಬಗ್ಗೆ ವರದಿ ಮಾಡಲಾಗಿದೆ. ರಾಜ್ಯ ಅಲ್ಪಸಂಖ್ಯಾತರ ಅಧಿನಿಯಮ 1994ರ ಕಲಂ 10 (1) (ಜೆ)ರ ಅನ್ವಯ ವಕ್ಫ್ ಸ್ವತ್ತುಗಳ ದುರ್ಬಳಕೆ ಮತ್ತು ಅತಿಕ್ರಮಣದ ಕುರಿತು ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ. ಈ ವರದಿಯನ್ನು ಅಲ್ಪಸಂಖ್ಯಾತ ಇಲಾಖೆಯ ಪ್ರಧಾನ ಮುಖ್ಯ ಕಾರ್ಯದರ್ಶಿಗಳಿಗೆ 2011ರ ಅ.12ರಂದು ಸಲ್ಲಿಸಲಾಗಿದೆ.

© Copyright 2022, All Rights Reserved Kannada One News