ಅಮೆರಿಕದಲ್ಲಿ ಭಾರತೀಯರಿಗೆ ಜನಾಂಗೀಯ ನಿಂದನೆ: ವೀಡಿಯೊ ವೈರಲ್‌

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಅಮೆರಿಕದಲ್ಲಿ ಭಾರತೀಯರಿಗೆ ಜನಾಂಗೀಯ ನಿಂದನೆ: ವೀಡಿಯೊ ವೈರಲ್‌

Updated : 28.08.2022

ಜಗತ್ತಿನ ಎಲ್ಲಾ ದೇಶದ, ಧರ್ಮದ, ಜನಾಂಗದ ಜನರನ್ನು ಸ್ವಾಗತಿಸುವ ದೇಶ ಎಂದೆಲ್ಲಾ ಜಂಭ ಕೊಚ್ಚಿಕೊಳ್ಳುವ ಅಮೆರಿಕದಲ್ಲಿ, ಜನಾಂಗೀಯವಾದ ಹೊಗೆಯಾಡುತ್ತಲೇ ಇದೆ. ಅಮೆರಿಕನ್ ಕಪ್ಪು ವರ್ಣೀಯರ ಮೇಲಿನ ದ್ವೇಷ ಒಂದೆಡೆಯಾದರೆ, ಅನಿವಾಸಿ ಭಾರತೀಯರ ಮೇಲಿನ ಅಮೆರಿಕನ್ನರ ದ್ವೇಷ ಇದೀಗ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಜಗತ್ತಿನಲ್ಲಾಗುವ ಮಾನವ ಹಕ್ಕುಗಳು, ಯುದ್ಧ ಪರಿಸ್ಥಿತಿಯ ಮೇಲೆ ಮೂಗು ತೂರಿಸುವ ಅಮೆರಿಕ, ತನ್ನದೇ ನೆಲದಲ್ಲಾಗುವ ಜನಾಂಗೀಯ ನಿಂದನೆಗಳ ಘಟನೆಗಳ ಕುರಿತಾಗಿ ಕಣ್ಮುಚ್ಚಿ ಕುಳಿತುಕೊಂಡಿದೆ. ನಾಲ್ವರು ಅನಿವಾಸಿ ಭಾರತೀಯ ಮಹಿಳೆಯರ ಮೇಲೆ, ಅಮೆರಿಕನ್ ಮಹಿಳೆಯೋರ್ವಳು ಹಲ್ಲೆ‌ ಮಾಡಿರುವ ವಿಡಿಯೋ ಇದೀಗ ಭಾರೀ ವೈರಲ್‌ ಆಗಿದೆ.

ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಆಗಸ್ಟ್‌ 24ರಂದು ಈ ಘಟನೆ ನಡೆದಿದೆ. ತನ್ನನ್ನು ತಾನು ಮೆಕ್ಸಿಕನ್‌ ಅಮೆರಿಕನ್‌ ಎಂದು ಹೇಳಿಕೊಂಡಿರುವ ಈ ಮಹಿಳೆ, ನಾಲ್ವರು ಅನಿವಾಸಿ ಭಾರತೀಯ ಮಹಿಳೆಯರೊಂದಿಗೆ ಕ್ಯಾತೆ ತೆಗೆದಿದ್ದಲ್ಲದೇ, ಓರ್ವ ಮಹಿಳೆ ಮೇಲೆ ಹಲ್ಲೆ ಕೂಡ ಮಾಡಿದ್ದಾಳೆ. ಭಾರತೀಯರು ಅಮೆರಿಕವನ್ನು ಬಿಟ್ಟು ತೊಲಗಿ ಎಂದು ಈ ಮಹಿಳೆ ಕಿರುಚಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅನಿವಾಸಿ ಭಾರತೀಯ ಮಹಿಳೆಯರನ್ನು ಜನಾಂಗೀಯವಾಗಿ ನಿಂದಿಸಿದ ಮೆಕ್ಸಿಕನ್‌ ಅಮೆರಿಕನ್‌ ಮಹಿಳೆಯನ್ನು ಪ್ಲಾನೋದ ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದ್ದು, ಟೆಕ್ಸಾಸ್‌ ಪೊಲೀಸರು ಇದೀಗ ಆಕೆಯಬನ್ನು ಬಂಧಿಸಿದ್ದಾರೆ. ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ಎಲ್ಲಾ ಭಾರತೀಯರು ಅಮೆರಿಕಕ್ಕೆ ಉತ್ತಮ ಜೀವನ ಅರಸಿ ಬರುತ್ತಾರೆ. ಇಲ್ಲಿನ ಸ್ಥಳೀಯರು ಅನಿವಾಸಿ ಭಾರತೀಯರಿಂದ ತುಂಬ ತೊಂದರೆಗೆ ಒಳಗಾಗಿದ್ದಾರೆ ಎಂದು ಈ ಮಹಿಳೆ ಅರಚಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಭಾರತದಲ್ಲಿ ಜೀವನ ಉತ್ತಮವಾಗಿದ್ದರೆ ನೀವೇಕೆ ಅಮೆರಿಕಕ್ಕೆ ಬರುತ್ತೀರಿ ಎಂದು ಹಲ್ಲೆ ಮಾಡಿದ್ದಾಳೆ. ಸದ್ಯ ಅನಿವಾಸಿ ಭಾರತೀಯರ ಮೇಲೆ ನಡೆದ ಈ ಹಲ್ಲೆ, ಅಮೆರಿಕದಲ್ಲಿ ಭಾರೀ ಸದ್ದು ಮಾಡುತ್ತಿದೆ. ಘಟನೆಯನ್ನು ಅಮೆರಿಕದ ಅನಿವಾಸಿ ಭಾರತೀಯರು ತೀವ್ರವಾಗಿ ಖಂಡಿಸಿದ್ದಾರೆ. ಇನ್ನು ಅನಿವಾಸಿ ಭಾರತೀಯ ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಅಪ್ಟನ್‌, ಮಹಿಳೆಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವುದೂ ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೇ ಅನಿವಾಸಿ ಭಾರತೀಯ ಮಹಿಳೆಯರು ಈ ರೀತಿ ಮಾತನಾಡದಂತೆ ಮನವಿ ಮಾಡಿಕೊಂಡರೂ ಆಕೆ ದೈಹಿಕವಾಗಿ ಹಲ್ಲೆಗೆ ಮುಂದಾಗಿರುವುದು ಖಂಡನೀಯವಾಗಿದೆ.

ಸದ್ಯ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ಜನಾಂಗೀಯ ದ್ವೇಷಕ್ಕೆ ಅಧ್ಯಕ್ಷ ಜೋ ಬೈಡನ್‌ ಇದುವರೆಗೂ ಮದ್ದು ಕಂಡುಹಿಡಿದಿಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿದೆ. ಟ್ರಂಪ್‌ ಆಡಳಿತಾವಧಿಯಲ್ಲಿ ಅಮೆರಿಕದಲ್ಲಿ ಜನಾಂಗೀಯ ದ್ವೇಷ ಹೆಚ್ಚಾಗಿತ್ತು ಎಂದು ಆರೋಪಿಸುವ ಜೋ ಬೈಡನ್‌, ಇದೀಗ ತಮ್ಮ ಆಡಳಿತದಲ್ಲಿ ಭಾರತೀಯರ ವಿರುದ್ಧ ಜನಾಂಗೀಯ ದ್ವೇಷ ಕಂಡುಬಂದಿರುವುದನ್ನು ಯಾವ ರೀತಿ ನೋಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.© Copyright 2022, All Rights Reserved Kannada One News