ಉದ್ಯೋಗ ಕಡಿತ ಖಚಿತಪಡಿಸಿದ ಅಮೆಜಾನ್‌

ಉದ್ಯೋಗ ಕಡಿತ ಖಚಿತಪಡಿಸಿದ ಅಮೆಜಾನ್‌

Updated : 17.11.2022

ಸ್ಯಾನ್‌ಫ್ರಾನ್ಸಿಸ್ಕೊ: ಇ–ಕಾಮರ್ಸ್‌ ದಿ‌ಗ್ಗಜ ಅಮೆಜಾನ್‌ ಬೃಹತ್‌ ಪ್ರಮಾಣದ ಉದ್ಯೋಗ ಕಡಿತಕ್ಕೆ ಮುಂದಾಗಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. 

ಕಂಪನಿ ಎಷ್ಟು ನೌಕರರನ್ನು ಕೆಲಸದಿಂದ ತೆಗೆದು ಹಾಕಲಿದೆ ಎಂದು ಅಧಿಕೃತವಾಗಿ ಹೇಳಿಲ್ಲ. 10,000 ನೌಕರರು ಅಥವಾ ಶೇ.3ರಷ್ಟು ನೌಕರರನ್ನು ತೆಗೆದು ಹಾಕಲಿದೆ ಎಂದು ಈ ಹಿಂದೆ ವರದಿಯಾಗಿತ್ತು. 

ನಮ್ಮ ವಾರ್ಷಿಕ ವಹಿವಾಟು ನಿರ್ವಹಣೆ ಯೋಜನೆ ಪರಾಮರ್ಶೆ ಭಾಗವಾಗಿ ಪ್ರತಿ ವಹಿವಾಟನ್ನು ವಿಮರ್ಶಿಸುತ್ತೇವೆ ಮತ್ತು ನಮಗೆ ಅಗತ್ಯವೆಸಿದ ಬದಲಾವಣೆ ಮಾಡುತ್ತೇವೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ. 

ಪ್ರಸ್ತುತದ ಆರ್ಥಿಕ ಸ್ಥಿತಿಯಲ್ಲಿ ಕೆಲವು ತಂಡಗಳು ಹೊಂದಾಣಿಕೆ ಮಾಡಿಕೊಂಡಿದ್ದು, ಕೆಲವು ಹುದ್ದೆಗಳ ಅಗತ್ಯ ಕಾಣುತ್ತಿಲ್ಲ. ಅಂತಹ ಹುದ್ದೆಗಳನ್ನು ರದ್ದುಮಾಡುತ್ತಿದ್ದೇವೆ ಎಂದಿದ್ದಾರೆ.

ಆದಾಗ್ಯೂ ಈ ನಿರ್ಧಾರವನ್ನು ಲಘುವಾಗಿ ತೆಗೆದುಕೊಂಡಿಲ್ಲ ಮತ್ತು ನಾವು ಇದರಿಂದ ಸಂಕಷ್ಟಕ್ಕೆ ಸಿಲುಕುವ ಯಾವುದೇ ಸಿಬ್ಬಂದಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ. 

‘ಆಳವಾದ ಪರಾಮರ್ಶೆಯ ನಂತರ ನಾವು ಕೆಲವು ತಂಡಗಳನ್ನು ಮತ್ತು ಕಾರ್ಯಕ್ರಮಗಳನ್ನು ವಿಲೀನಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಕಂಪನಿಯ ಸಾಧನ ಮತ್ತು ಸೇವಾ ವಿಭಾಗದ ಹಿರಿಯ ಉಪಾಧ್ಯಕ್ಷ ಡೇವ್‌ ಲಿಂಪ್‌ ಆಂತರಿಕ ಸಂವಹನದಲ್ಲಿ ಹೇಳಿದ್ದಾರೆ.

© Copyright 2022, All Rights Reserved Kannada One News