ವಿಮಾನ ಇಂಧನ ದರ ಶೇ.2.2ರಷ್ಟು ಇಳಿಕೆ

ವಿಮಾನ ಇಂಧನ ದರ ಶೇ.2.2ರಷ್ಟು ಇಳಿಕೆ

Updated : 16.07.2022

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಿಮಾನ ಇಂಧನ (ಎಟಿಎಫ್‌) ದರವನ್ನು ಶನಿವಾರ ಶೇ 2.2ರಷ್ಟು ಇಳಿಕೆ ಮಾಡಿವೆ.

ಈ ಪರಿಷ್ಕರಣೆಯಿಂದಾಗಿ ದೆಹಲಿಯಲ್ಲಿ ವಿಮಾನ ಇಂಧನ ದರ ಪ್ರತಿ ಕಿಲೋ ಲೀಟರಿಗೆ  3,084.94ರಷ್ಟು ಕಡಿಮೆ ಆಗಿದ್ದು,  1.38 ಲಕ್ಷಕ್ಕೆ ಇಳಿಕೆ ಆಗಿದೆ. (ಒಂದು ಕಿಲೋ ಲೀಟರ್‌ ಎಂದರೆ ಒಂದು ಸಾವಿರ ಲೀಟರ್). ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಆಗಿರುವುದರಿಂದ ಕಂಪನಿಗಳು ಎಟಿಎಫ್‌ ದರವನ್ನು ಕಡಿಮೆ ಮಾಡಿವೆ.

ಈ ವರ್ಷದಲ್ಲಿ ದರ ಇಳಿಕೆ ಆಗುತ್ತಿರುವುದು ಇದು ಎರಡನೇ ಬಾರಿ. ಈವರೆಗೆ ಒಟ್ಟಾರೆ 11 ಬಾರಿ ದರವನ್ನು ಹೆಚ್ಚಿಸಲಾಗಿದೆ. ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

© Copyright 2022, All Rights Reserved Kannada One News