ಮಳೆಯ ನಡುವೆಯೇ ಪುನೀತ್ ರಾಜ್‌ಕುಮಾರ್‌ಗೆ 'ಮರಣೋತ್ತರ ಕರ್ನಾಟಕ ರತ್ನʼ ಪ್ರಶಸ್ತಿ ಪ್ರದಾನ

Related Articles

ಸಿನಿಮಾ ಕ್ಷೇತ್ರದಿಂದ ಕೊಂಚ ಬಿಡುವು ಪಡೆದು, ಕುಟುಂಬದ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದೇನೆ: ಅಮೀರ್ ಖಾನ್

‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ನ.25ಕ್ಕೆ ಬಿಡುಗಡೆ

ತೆಲುಗು ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

ವೀರ ದಾಸ್ ಅವರ ಬೆಂಗಳೂರು ಶೋ ರದ್ದಾದ ಬಳಿಕ ಕೋಲ್ಕತ್ತಾಗೆ ಆಹ್ವಾನಿಸಿದ ಟಿಎಂಸಿ

ʼದಿ ಕೇರಳ ಸ್ಟೋರಿʼ ಸಿನಿಮಾ: ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ

ಹಿರಿಯ ನಟ ಟಿ.ಎಸ್. ಲೋಹಿತಾಶ್ವ ನಿಧನ

ನಾಳೆ ́ಬೈ2 ಕಾಫಿ́ ನಾಟಕ ಪ್ರದರ್ಶನ

ಶಾಲಾ ಮಕ್ಕಳಿಗೆ 'ಗಂಧದ ಗುಡಿ' ಉಚಿತ ಪ್ರದರ್ಶನ ನೀಡಲು ಮನವಿ

‘ಉತ್ತರಕಾಂಡ’ ಸಿನೆಮಾದಲ್ಲಿ ಧನಂಜಯ್‌–ರಮ್ಯಾ ಜೋಡಿ

ಮುಂದಿನ ಚುನಾವಣೆಯಲ್ಲಿ ನಿಂತು ಗೆಲ್ಲುವ ಸಾಮರ್ಥ್ಯ ನನಗಿದೆ. ಆದರೆ, ನನಗೆ ಆ ಆಸೆ ಇರಲಿಲ್ಲ: ಝೈದ್ ಖಾನ್

ಮಳೆಯ ನಡುವೆಯೇ ಪುನೀತ್ ರಾಜ್‌ಕುಮಾರ್‌ಗೆ 'ಮರಣೋತ್ತರ ಕರ್ನಾಟಕ ರತ್ನʼ ಪ್ರಶಸ್ತಿ ಪ್ರದಾನ

Updated : 02.11.2022

ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಇಂದು 'ಯುವರತ್ನ', ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ಗೆ 'ಮರಣೋತ್ತರ ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಜ್ಯೂನಿಯರ್ ಎನ್‌ಟಿಆರ್ ಹಾಗೂ ಸುಧಾ ಮೂರ್ತಿ, ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನೀತ್ ಪತ್ನಿ ಅಶ್ವಿನಿ ರಾಜ್‌ಕುಮಾರ್ ಅವರಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.

ಮಳೆಯೆ ನಡುವೆಯೇ ಮುಂದುವರೆದ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್, ಬಾಲ್ಯದಿಂದಲೇ ಪುನೀತ್ ರಾಜ್ ಜೊತೆಗಿದ್ದ ತಮ್ಮ ಬಾಂಧವ್ಯ ಹಂಚಿಕೊಂಡರು.

"ಅಪ್ಪು ದೇವರ ಮಗು, ಆತ ಮಹಾಮಹಿಮರ ಸಾಲಿನಲ್ಲಿ ನಿಲ್ಲುವಾತ, ನಮ್ಮಲ್ಲಿ ಬಂದು ಆಟವಾಡಿ ದೇವರ ಹತ್ರ ಹೋಗಿದ್ದಾನೆ. ಆದರೆ ಆತನ ಆತ್ಮ ನಮ್ಮ ಬಳಿಯಲ್ಲೇ ಇದೆ. ಆತ ಸದಾ ಅಮರ" ಎಂದರು. ‌

"ರಾಜ್ಯದ ಶ್ರೇಷ್ಠ ಪ್ರಶಸ್ತಿಯನ್ನು ಪುನೀತ್‌ಗೆ ನೀಡುತ್ತಿರುವುದು ಅರ್ಥಪೂರ್ಣ. ಹಿಂದೆ ಇದೇ ವೇದಿಕೆಯಲ್ಲಿ ಅವರ ತಂದೆ ರಾಜ್‌ಕುಮಾರ್ ಅವರಿಗೆ ಇದೇ ಪ್ರಶಸ್ತಿ ನೀಡಲಾಗಿತ್ತು. ಆಗಲೂ ಮಳೆ ಬಂದಿತ್ತು, ಈ ಕಾರ್ಯಕ್ರಮಕ್ಕೂ ಮಳೆ ಬಂದಿದೆ. ಕಾಕತಾಳೀಯ ಘಟನೆ ಇದಾದಾರೂ, ಒಳ್ಳೆಯತನಕ್ಕೆ ಇದಕ್ಕಿಂತ ದೊಡ್ಡ ಸಂಕೇತ ಏನು ಬೇಕು" ಎಂದು ರಜನಿಕಾಂತ್ ಹೇಳಿದರು.

ಬಳಿಕ ಮಾತನಾಡಿದ ಜ್ಯೂನಿಯರ್ ಎನ್‌ಟಿಆರ್, "ನಾನು ನನ್ನ ಸ್ಟಾರ್ ಇಮೇಜ್‌ನಿಂದ ಇಲ್ಲಿಗೆ ಬಂದಿಲ್ಲ. ಕೇವಲ ಗೆಳೆಯನಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ" ಎಂದ ಅವರು, "ವ್ಯಕ್ತಿಗೆ ಸಂಸ್ಕಾರ ಮನೆ, ಮನೆತನದಿಂದ ಬರುತ್ತದೆ. ಆದರೆ ವ್ಯಕ್ವಿತ್ವ ಎನ್ನುವುದು ಆತನೇ ಸಂಪಾದನೆ ಮಾಡಿಕೊಳ್ಳುವ ಹಿರಿಮೆ. ಹೀಗೆ ಬರೀ ವ್ಯಕ್ತಿತ್ವ ಹಾಗೂ ನಗುವಿನಿಂದ ಅಹಂಕಾರವಿಲ್ಲದೆ ಒಂದು ರಾಜ್ಯ ಗೆದ್ದವನು ಪುನೀತ್ ರಾಜ್‌ಕುಮಾರ್" ಎಂದು 'ಅಪ್ಪು'ವನ್ನು ನೆನೆದರು.‌

"ನಗುವಿನ ಒಡೆಯ, ಹೃದಯ ಶ್ರೀಮಂತ, ನನ್ನ ಪ್ರಕಾರ ಕರ್ನಾಟಕ ರತ್ನದ ಅರ್ಥವೇ ಪುನೀತ್ ರಾಜ್. ಆತ ಒಳ್ಳೆಯ ಮಗನಾಗಿ, ಗೆಳೆಯನಾಗಿ, ಗಂಡನಾಗಿ ಎಲ್ಲವಕ್ಕೂ ಮಿಗಿಲಾಗಿ 'ಗ್ರೇಟ್ ಹ್ಯೂಮನ್ ಬೀಯಿಂಗ್' ಆಗಿ ಬದುಕಿದ್ದವರು. ಪುನೀತ್ ರಾಜ್ ಕುಮಾರ್ ಎಂದು ತಮ್ಮ ಗೆಳೆಯನ ಸ್ಮರಣೆ ಮಾಡಿದರು. ಇದೇ ವೇಳೆ ರಾಜ್ ಕುಮಾರ್ ಕುಟುಂಬವನ್ನು ಹೊಗಳಿದ ತಾರಕ್, ನನ್ನನ್ನು ನನ್ನ ಮನೆಯವರಷ್ಟೇ ಚೆನ್ನಾಗಿ ನೋಡಿಕೊಂಡವರು ಈ ಕುಟುಂಬ ಸದಸ್ಯರು ಎಂದರು.

ಸುರಿಯುತ್ತಿದ್ದ ಮಳೆಯ ನಡುವೆಯೇ ಕಾರ್ಯಕ್ರಮ ನೋಡಲು ಆಗಮಿಸಿದ್ದ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಸಂದ ಸರ್ಕಾರಿ ಗೌರವಕ್ಕೆ ಸಾಕ್ಷಿಯಾದರು.

ಪುನೀತ್ ರಾಜ್ ಕುಮಾರ್‌ ಮೇಲಿನ ಅಭಿಮಾನದಿಂದ ಕಾರ್ಯಕ್ರಮದ ಬಹುಪಾಲು ನಿರೂಪಣಾ ಕಾರ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದು ಗಮನಾರ್ಹವಾಗಿತ್ತು.

© Copyright 2022, All Rights Reserved Kannada One News