Flash News:
ದಕ್ಷಿಣ ಕನ್ನಡ: ಅ.5ಕ್ಕೆ ಉಚಿತ 'ಅಭಾ ಕಾರ್ಡ್‌' ಉಚಿತ ನೋಂದಣಿ

ದಕ್ಷಿಣ ಕನ್ನಡ: ಅ.5ಕ್ಕೆ ಉಚಿತ 'ಅಭಾ ಕಾರ್ಡ್‌' ಉಚಿತ ನೋಂದಣಿ

Updated : 04.10.2022

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಂದರ್‍‌ನ ಹಿದಾಯತ್‌ ಸೆಂಟರ್‍‌ನಲ್ಲಿ 'ಆಯೂಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ' (ಅಭಾ ಕಾರ್ಡ್) ಉಚಿತ ನೋಂದಣಿ ಕಾರ್ಯಕ್ರಮವನ್ನು ಅಕ್ಟೋಬರ್‍‌ 5ರಂದು ಹಮ್ಮಿಕೊಳ್ಳಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬಂದರ್‌ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹೆಚ್ಚಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರ ತನಕ ಉಚಿತ ನೋಂದಣಿ ನಡೆಯಲಿದೆ. ನೋಂದಣಿಗೆ ಬರುವರು ಅಗತ್ಯ ದಾಖಲೆ - ಆಧಾರ್‍‌ ಕಾರ್ಡ್, ರೇಷನ್‌ ಕಾರ್ಡ್‌, ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ತರಬೇಕೆಂದು ತಿಳಿಸಿದೆ.

ಕೇಂದ್ರ ಸರ್ಕಾರವು ಆಯುಷ್ಮಾನ್ ಕಾರ್ಡನ್ನು ರದ್ದುಗೊಳಿಸಿ, ಆಯುಷ್ಮಾನ್‌ಗೆ ಬದಲಿಯಾಗಿ ‘ಅಭಾ ಕಾರ್ಡ್‌'ನ್ನು ಹೊರತಂದಿದೆ. ಈ ಕಾರ್ಡಿನ ಮುಖಾಂತರ ಬಿಪಿಎಲ್ ಕಾರ್ಡುದಾರರಿಗೆ ಐದು ಲಕ್ಷದವರಿಗೆ ಉಚಿತ ಹಾಗೂ ಎಪಿಎಲ್ ರೇಷನ್ ಕಾರ್ಡುದಾರರಿಗೆ ಶೇ.30ರಷ್ಟು ಆಸ್ಪತ್ರೆ ಬಿಲ್ಲಿನಲ್ಲಿ ರಿಯಾಯಿತಿ ದೊರೆಯಲಿದೆ.

ಯಾವಾಗ ಅನಾರೋಗ್ಯಕ್ಕೆ ಒಳಗಾಗಿದ್ದೇವೆ, ಯಾವ ವೈದ್ಯರಿಗೆ ತೋರಿಸಿದ್ದೇವೆ, ಯಾವೆಲ್ಲ ಪರೀಕ್ಷೆಗಳನ್ನು ಮಾಡಿದ್ದೇವೆ, ರಕ್ತದ ಗುಂಪು ಯಾವುದು ಹೀಗೆ ಎಲ್ಲ ಮಾಹಿತಿಗಳು ಅಭಾ ಕಾರ್ಡ್‌ನಲ್ಲಿ ನಮೂದಾಗಿರುತ್ತದೆ. ಇದರಿಂದ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ವಿಮಾ ಕಂಪನಿಗಳೊಂದಿಗೆ ವೈದ್ಯಕೀಯ ದಾಖಲೆಗಳನ್ನು ಸುಲಭವಾಗಿ ಹಂಚಿಕೊಳ್ಳಲು ಸಹಾಯವಾಗುತ್ತದೆ. ಆದ್ದರಿಂದ ಜನರು ಈ ಕಾರ್ಡ್‌ನ ಸದುಪಯೋಗ ಪಡಕೊಳ್ಳಬೇಕೆಂದು ಪ್ರಕಟನೆ ತಿಳಿಸಿದೆ. 

ಹೆಚ್ಚಿನ ಮಾಹಿತಿಗಾಗಿ ನಾಗರಿಕ ಸೇವಾ ಕೇಂದ್ರ, ಸಮಾಜ ಸೇವಾ ಘಟಕ ಜಮಾಅತೆ ಇಸ್ಲಾಮೀ ಹಿಂದ್, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ ಬಂದರ್, ಮಂಗಳೂರು ಘಟಕದ ದೂರವಾಣಿ ಸಂಖ್ಯೆ 87227 60795ಕ್ಕೆ ಸಂಪರ್ಕಿಸುವಂತೆ ತಿಳಿಸಿದೆ.

© Copyright 2022, All Rights Reserved Kannada One News