ಅಕ್ರಮ ಹಣ ವರ್ಗಾವಣೆ: ಎಎಪಿ ನಾಯಕ ಸತ್ಯೇಂದ್ರ ಜೈನ್‌ಗೆ ಜಾಮೀನು ತಿರಸ್ಕೃತ

ಅಕ್ರಮ ಹಣ ವರ್ಗಾವಣೆ: ಎಎಪಿ ನಾಯಕ ಸತ್ಯೇಂದ್ರ ಜೈನ್‌ಗೆ ಜಾಮೀನು ತಿರಸ್ಕೃತ

Updated : 17.11.2022

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ಜತೆಗೆ ಇದೇ  ಪ್ರಕರಣದಲ್ಲಿ ಬಂಧಿಯಾಗಿರುವ ಮತ್ತಿಬ್ಬರು ಆರೋಪಿಗಳಾದ ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಅವರ ಜಾಮೀನು ಅರ್ಜಿಗಳನ್ನೂ ನ್ಯಾಯಾಲಯ ವಜಾಗೊಳಿಸಿದೆ. ಅಕ್ರಮ ಹಣ ವರ್ಗಾವಣೆ ಸಂಬಂಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಆಧರಿಸಿ 2022ರ ಮೇ 30 ರಂದು ಜಾರಿ ನಿರ್ದೇಶನಾಲಯವು ಸತ್ಯೇಂದ್ರ ಜೈನ್‌ ಅವರನ್ನು ಬಂಧಿಸಿತ್ತು.

ದೆಹಲಿಯ ತಿಹಾರ್‌ ಜೈಲಿನಲ್ಲಿರುವ ಸತ್ಯೇಂದ್ರ ಜೈನ್‌ ಅವರಿಗೆ ವಿಶೇಷ ಆತಿಥ್ಯ ನೀಡಿದ ಆರೋಪದಡಿ ಜೈಲು ಅಧೀಕ್ಷಕರನ್ನು ಈ ವಾರದ ಆರಂಭದಲ್ಲಿ ವಜಾಗೊಳಿಸಲಾಗಿತ್ತು. ‌

ಕೆಲ ದಿನಗಳ ಹಿಂದೆ ಆರೋಪಿ ಸುಕೇಶ್‌ ಚಂದ್ರಶೇಖರ್‌, "ಜೈಲಿನಲ್ಲಿ ತನಗೆ ಕಿರುಕುಳ ನೀಡುತ್ತಿದ್ದು, ಬೆದರಿಕೆಗಳು ಬರುತ್ತಿವೆ. ಜೈಲಿನಲ್ಲಿ ತನಗೆ ರಕ್ಷಣೆ ನೀಡಲು ಸತ್ಯೇಂದ್ರ ಜೈನ್ ಅವರಿಗೆ 10 ಕೋಟಿ ರೂ. ಹಣ ನೀಡಿದ್ದೇನೆ" ಎಂದು ಆರೋಪಿಸಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದರು.      

© Copyright 2022, All Rights Reserved Kannada One News