ಸಿನಿಮಾ ಕ್ಷೇತ್ರದಿಂದ ಕೊಂಚ ಬಿಡುವು ಪಡೆದು, ಕುಟುಂಬದ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದೇನೆ: ಅಮೀರ್ ಖಾನ್

ಸಿನಿಮಾ ಕ್ಷೇತ್ರದಿಂದ ಕೊಂಚ ಬಿಡುವು ಪಡೆದು, ಕುಟುಂಬದ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದೇನೆ: ಅಮೀರ್ ಖಾನ್

Updated : 15.11.2022

ನವದೆಹಲಿ: ಸಿನಿಮಾ ಕ್ಷೇತ್ರದಿಂದ ಕೊಂಚ ಬಿಡುವು ಪಡೆದು, ಕುಟುಂಬದ ಜತೆ ಕಾಲ ಕಳೆಯಲು ನಿರ್ಧರಿಸಿದ್ದೇನೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ.

35 ವರ್ಷಕ್ಕೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದೇನೆ. ಈಗ ಒಂದು ವರ್ಷ ಬಿಡುವು ಪಡೆದುಕೊಳ್ಳಲು ನಿರ್ಧರಿಸಿದ್ದೇನೆ. ಕುಟುಂಬದ ಜತೆ ಇರಲು ಬಯಸಿದ್ದೇನೆ ಎಂದು ಅಮೀರ್ ತಿಳಿಸಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಳಿಕ ಚಾಂಪಿಯನ್ಸ್ ಚಿತ್ರದ ಕೆಲಸ ಆರಂಭಿಸುವುದಾಗಿ ಅಮೀರ್ ಹೇಳಿದ್ದರು.  ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್‌ನ ಹಿಂದಿ ರಿಮೇಕ್ ಲಾಲ್ ಸಿಂಗ್ ಚಡ್ಡಾ ಬಾಲಿವುಡ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅಲ್ಲದೆ, ಬಾಕ್ಸ್ ಅಫೀಸ್‌ನಲ್ಲಿ ಕಳಪೆ ಸಾಧನೆ ಮಾಡಿತ್ತು.

ಸಿನಿಮಾದಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡಿದ್ದರಿಂದ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗಿಲ್ಲ. ಜೀವನದಲ್ಲಿ ಮತ್ತೇನೂ ನಡೆಯುತ್ತಿಲ್ಲ ಎಂದು ಅನ್ನಿಸಿತು. ಹೀಗಾಗಿ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದು ತಾಯಿ, ಮಕ್ಕಳ ಜೊತೆ ಇರಲು ಬಯಸುತ್ತೇನೆ ಎಂದು ಅಮೀರ್ ತಿಳಿಸಿದ್ದಾರೆ.

© Copyright 2022, All Rights Reserved Kannada One News