ಮಹಿಳಾ ಏಕದಿನ ಕ್ರಿಕೆಟ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

Related Articles

ಟಿ-20 ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ

ಇಂಡೋನೇಷ್ಯಾ ಫುಟ್‌ಬಾಲ್ ಪಂದ್ಯದ ವೇಳೆ ಹಿಂಸಾಚಾರ: ಕನಿಷ್ಠ 127 ಮಂದಿ ಸಾವು

ಇಂಗ್ಲೆಂಡ್ ವಿರುದ್ಧ ಕ್ಲೀನ್‍ಸ್ವೀಪ್ ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ

ಟೆನಿಸ್ ಗೆ ವಿದಾಯ ಹೇಳಿದ ರೋಜರ್ ಫೆಡರರ್: ಸ್ನೇಹಿತನ ನಿವೃತ್ತಿಗೆ ಗಳಗಳನೆ ಅತ್ತ ಪ್ರತಿಸ್ಪರ್ಧಿ ರಫೆಲ್ ನಡಾಲ್: ಇದು ಕ್ರೀಡೆಯ ಅತ್ಯುತ್ತಮ ಕ್ಷಣ ಎಂದ ಕೊಹ್ಲಿ

ಟೆನಿಸ್ ಗೆ ಸ್ವಿಸ್ ಸ್ಟಾರ್ ರೋಜರ್ ಫೆಡರರ್ ವಿದಾಯ

ಲಾರೆನ್ಸ್ ಮೈದಾನದಲ್ಲಿ ಅಬ್ಬರಿಸಿದ ಹರ್ಮನ್​ಪ್ರೀತ್ ಕೌರ್: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 88 ರನ್‌ ಗೆಲುವು

ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಟಿಕೆಟ್ ಖರೀದಿಗೆ ನೂಕುನುಗ್ಗಲು: ಕಾಲ್ತುಳಿತದಿಂದ ಹಲವರಿಗೆ ಗಾಯ

ಉದ್ದೀಪನ ಮದ್ದು ಸೇವನೆ ಪ್ರಕರಣ: ಹಿರಿಯ ಅಥ್ಲೀಟ್ ಪೂವಮ್ಮಗೆ 2 ವರ್ಷ ನಿಷೇಧ

ಉತ್ತರ ಪ್ರದೇಶ| ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ: ವೀಡಿಯೊ ವೈರಲ್

ಟಿ20 ವಿಶ್ವಕಪ್: ನ್ಯೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ

ಮಹಿಳಾ ಏಕದಿನ ಕ್ರಿಕೆಟ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

Updated : 19.09.2022

ಹೋವೆ: ಇಂಗ್ಲೆಂಡ್ ತಂಡದ ವಿರುದ್ಧ ರವಿವಾರ ನಡೆದ ಮೊದಲ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಸ್ಮೃತಿ ಮಂದಾನಾ ಅವರ ಆಕರ್ಷಕ 91 ರನ್‍ಗಳ ನೆರವಿನಿಂದ ಏಳು ವಿಕೆಟ್‍ಗಳ ಸುಲಭ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.

ಹರ್ಮನ್‍ ಪ್ರೀತ್ ಸಿಂಗ್ ಟಾಸ್ ಗೆದ್ದು ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು.

ಜೂಲನ್ ಗೋಸ್ವಾಮಿಯವರ ಬೌಲಿಂಗ್ ದಾಳಿಯಿಂದ ಅತಿಥೇಯ ತಂಡವನ್ನು ಭಾರತ 227 ರನ್‍ಗಳಿಗೆ ಕಟ್ಟಿಹಾಕಿತು. ಗೋಸ್ವಾಮಿ 42 ಎಸೆತಗಳಲ್ಲಿ ಒಂದೂ ರನ್ ನೀಡದೇ ಗಮನ ಸೆಳೆದರು. ಇಂಗ್ಲೆಂಡಿನ ಕೆಳ ಮಧ್ಯಮ ಕ್ರಮಾಂಕದ ಸಾಹಸದಿಂದಾಗಿ ಅತಿಥೇಯ ತಂಡ ಗೌರವಾರ್ಹ ಮೊತ್ತ ತಲುಪಿತು.‌

ಉದಯೋನ್ಮುಖ ಆಟಗಾರ್ತಿ ಯಸ್ಟಿಕಾ ಭಾಟಿಯಾ 47 ಎಸೆತಗಳಲ್ಲಿ 50 ರನ್ ಗಳಿಸಿ, ಮೂರನೇ ಅರ್ಧಶತಕ ದಾಖಲಿಸಿದರು. ಯಸ್ಟಿಕಾ- ಮಂದಾನಾ ಜೋಡಿ ಕೇವಲ 16.1 ಓವರ್‌ ಗಳಲ್ಲಿ ಎರಡನೇ ವಿಕೆಟ್‍ಗೆ 96 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಹರ್ಮನ್‍ ಪ್ರೀತ್ 94 ಎಸೆತಗಳಲ್ಲಿ 74 ರನ್ ಗಳಿಸುವ ಮೂಲಕ ಮಂದಾನಾ ಜತೆಗೆ 99 ರನ್‍ ಗಳ ಜತೆಯಾಟಕ್ಕೆ ಕಾರಣರಾದರು. ಮಂದಾನಾ ಇನಿಂಗ್ಸ್‌ ನಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದೆ.

© Copyright 2022, All Rights Reserved Kannada One News