Flash News:
ಇಂಡೋನೇಷ್ಯಾ ಫುಟ್‌ಬಾಲ್ ಪಂದ್ಯದ ವೇಳೆ ಹಿಂಸಾಚಾರ: ಕನಿಷ್ಠ 127 ಮಂದಿ ಸಾವು

Related Articles

ಟಿ-20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಭಾರತ ಕ್ರಿಕೆಟ್ ತಂಡವನ್ನು ಚೋಕರ್ಸ್ ಎಂದ ಕಪಿಲ್ ದೇವ್

ಟೀ20 ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾ: ಫೈನಲ್‌ಗೆ ತಲುಪಿದ ಇಂಗ್ಲೆಂಡ್-ಪಾಕ್!

ಅತ್ಯಾಚಾರ ಆರೋಪ: ದನುಷ್ಕಾ ಗುಣತಿಲಕರನ್ನು ಅಮಾನತುಗೊಳಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ಟಿ-20 ವಿಶ್ವಕಪನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ದ. ಆಫ್ರಿಕಾಕ್ಕೆ ಸೋಲು, ಸೆಮಿಫೈನಲ್ ಗೆ ಲಗ್ಗೆ ಇಟ್ಟ ಭಾರತ!

ಐಪಿಎಸ್ ಅಧಿಕಾರಿ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಎಂಎಸ್ ಧೋನಿ

‘ಖೇಲ್ ರತ್ನ’ ಪ್ರಶಸ್ತಿಗೆ ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ಹೆಸರು ಶಿಫಾರಸು

ಏಷ್ಯಾ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ ತಂಡ

ಬೈಜುಸ್ ನ ಜಾಗತಿಕ ರಾಯಭಾರಿಯಾಗಿ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ನೇಮಕ

ಟಿ20 ವಿಶ್ವಕಪ್‌| ಟಾಸ್‌ ಗೆದ್ದ ಬಾಂಗ್ಲಾದೇಶ: ಭಾರತ ಬ್ಯಾಟಿಂಗ್

ಟಿ20 ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧ 3 ರನ್ ಅಂತರದ ಜಯ ಸಾಧಿಸಿದ ಬಾಂಗ್ಲಾದೇಶ

ಇಂಡೋನೇಷ್ಯಾ ಫುಟ್‌ಬಾಲ್ ಪಂದ್ಯದ ವೇಳೆ ಹಿಂಸಾಚಾರ: ಕನಿಷ್ಠ 127 ಮಂದಿ ಸಾವು

Updated : 02.10.2022

ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ಶನಿವಾರ ತಡರಾತ್ರಿ ಫುಟ್‌ಬಾಲ್ ಪಂದ್ಯದ ವೇಳೆ ನಡೆದ ಹಿಂಸಾಚಾರದಿಂದ ಕನಿಷ್ಠ 127 ಮಂದಿ ಸಾವಿಗೀಡಾಗಿದ್ದಾರೆ.

ಪೂರ್ವ ಜಾವದ ಮಲಂಗ್‌ನಲ್ಲಿ ನಡೆದ ಪಂದ್ಯದಲ್ಲಿ ಎದುರಾಳಿ ತಂಡ ಗೆಲುವು ಸಾಧಿಸಿದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಮೈದಾನಕ್ಕೆ ಇಳಿದು ದಾಂಧಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಿ, ಇಬ್ಬರು ಪೊಲೀಸರ ಸಹಿತ ಕನಿಷ್ಠ 127 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ಇಂಡೋನೇಷ್ಯಾದ ಪ್ರಮುಖ ಲೀಗ್ ಬಿಆರ್‌ಐ ಲಿಗಾ 1ರ ಅರೆಮಾ ಎಫ್‌ಸಿ ಮತ್ತು ಪರ್ಸಬೆಯ ಸುರಬಯ ತಂಡದ ನಡುವೆ ಪಂದ್ಯ ನಡೆಯುತ್ತಿತ್ತು.

ಈ ಸಂದರ್ಭದಲ್ಲಿ ಪಂದ್ಯ ಸೋತ ಕೋಪದಲ್ಲಿ ಅಭಿಮಾನಿಗಳು ಮೈದಾನಕ್ಕೆ ಇಳಿದು ದಾಂಧಲೆ ಎಬ್ಬಿಸಿದ್ದಾರೆ. ನಂತರ ಕಾಲ್ತುಳಿತ ಉಂಟಾಗಿದೆ. ಜತೆಗೆ ಉಸಿರುಗಟ್ಟಿ ಜನರು ಮೃತಪಟ್ಟಿದ್ದಾರೆ. ಕ್ರೀಡಾಂಗಣದಲ್ಲಿ 34 ಜನರು ಮೃತಪಟ್ಟರೆ, ಉಳಿದವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ಇಬ್ಬರು ಪೊಲೀಸರು ಕೂಡ ಇದ್ದಾರೆ ಎಂದು ಪೂರ್ವ ಜಾವಾ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ತಿಳಿಸಿದ್ದಾರೆ.

© Copyright 2022, All Rights Reserved Kannada One News