ಬಡ್ಡಿದರ ಹೆಚ್ಚಿಸಿದ ಅಮೆರಿಕದ ಫೆಡರಲ್ ರಿಸರ್ವ್

ಬಡ್ಡಿದರ ಹೆಚ್ಚಿಸಿದ ಅಮೆರಿಕದ ಫೆಡರಲ್ ರಿಸರ್ವ್

Updated : 03.11.2022

ವಾಷಿಂಗ್ಟನ್: ಅಮೆರಿಕದ ಫೆಡರಲ್ ರಿಸರ್ವ್ (The Federal Reserve) ಬುಧವಾರ ಬಡ್ಡಿದರವನ್ನು ಮತ್ತೆ ಶೇಕಡ 0.75ರಷ್ಟು ಹೆಚ್ಚಿಸಿದೆ. 40 ವರ್ಷಗಳಲ್ಲೇ ಅತ್ಯಂತ ಭೀಕರ ಎನಿಸಿದ ಹಣದುಬ್ಬರ ವಿರುದ್ಧದ ಹೋರಾಟದ ಅಂಗವಾಗಿ ಈ ದರ ಹೆಚ್ಚಿಸಿದೆ. ದೇಶದ ವಿತ್ತೀಯ ನೀತಿಯನ್ನು ಸಮಗ್ರವಾಗಿ ಬಿಗಿಗೊಳಿಸುವ ನಿಟ್ಟಿನಲ್ಲಿ ಇಂಥದ್ದೇ ಸಣ್ಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದಲ್ಲೂ ಸಾಲದ ವೆಚ್ಚವನ್ನು ಹೆಚ್ಚಿಸಬೇಕಾಗಬಹುದು ಎಂದು ಹೇಳಿರುವುದಾಗಿ timesofindia.com ವರದಿ ಮಾಡಿದೆ.

ಕ್ಷಿಪ್ರ ವೇಗದಲ್ಲಿ ಬಡ್ಡಿದರವನ್ನು ಹೆಚ್ಚಿಸುವ ಕಾರ್ಯದ ಪರಿಣಾಮ ಇನ್ನೂ ರೂಪುಗೊಳ್ಳುವ ಹಂತದಲ್ಲಿದ್ದು, ಕಾಲಾನುಕ್ರಮದಲ್ಲಿ ಹಣದುಬ್ಬರ ಶೇಕಡ 2ಕ್ಕೆ ಮರಳುವ ನಿಟ್ಟಿನಲ್ಲಿ ಫೆಡರಲ್ ಫಂಡ್ ಬಡ್ಡಿದರವನ್ನು ಹೆಚ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಮತ್ತಷ್ಟು ಹೆಚ್ಚಳದ ಗುರಿ ವ್ಯಾಪ್ತಿ ಮತ್ತಷ್ಟು ಅಪೇಕ್ಷಣೀಯ ಎಂದು ಅಮೆರಿಕದ ಕೇಂದ್ರೀಯ ಬ್ಯಾಂಕ್ ಎರಡು ದಿನಗಳ ಅವಧಿಯ ನೀತಿ ಸಭೆಯ ಬಳಿಕ ಹೇಳಿದೆ.

ಗುರಿಯ ವ್ಯಾಪ್ತಿಯಲ್ಲಿ ಭವಿಷ್ಯದ ಹೆಚ್ಚಳದ ವೇಗವನ್ನು ನಿರ್ಧರಿಸುವ ವಿಚಾರದಲ್ಲಿ ಫೆಡರಲ್ ಓಪನ್ ಮಾರ್ಕೆಟ್ ಸಮಿತಿ, ವಿತ್ತೀಯ ನೀತಿಯನ್ನು ಸಮಗ್ರವಾಗಿ ಬಿಗಿಗೊಳಿಸುವುದು, ಆರ್ಥಿಕ ಚಟುವಟಿಕೆಗಳು ಮತ್ತು ಹಣದುಬ್ಬರದ ಮೇಳೆ ಪ್ರಭಾವ ಬೀರುವ ವಿತ್ತೀಯ ನೀತಿಯನ್ನು ಬದಲಿಸುವುದು, ಆರ್ಥಿಕ ಹಾಗೂ ವಿತ್ತೀಯ ಅಭಿವೃದ್ಧಿಯ ಅಂಶಗಳನ್ನು ಪರಿಗಣಿಸಲಿದೆ ಎಂದು ತಿಳಿಸಿದೆ.

ಫೆಡರಲ್ ರಿಸರ್ವ್‍ನ ನೀತಿ ಬಿಗಿಗೊಳಿಸುವಿಕೆ, ಅಮೆರಿಕ ಮತ್ತು ವಿಶ್ವ ಆರ್ಥಿಕತೆ ಮೇಲೆ ಅದರ ಪ್ರಭಾವ, ಅಂತೆಯೇ ದೊಡ್ಡ ಪ್ರಮಾಣದಲ್ಲಿ ದರ ಹೆಚ್ಚಳ ಮಾಡುವುದರಿಂದ ಹಣಕಾಸು ವ್ಯವಸ್ಥೆ ಮೇಲೆ ಬೀರಬಹುದಾದ ಒತ್ತಡ ಅಥವಾ ಆರ್ಥಿಕ ಹಿಂಜರಿತದಂಥ ಸಾಧ್ಯತೆ ಬಗ್ಗೆಯೂ ವಿಸ್ತೃತವಾಗಿ ಚರ್ಚೆ ನಡೆಯುತ್ತಿರುವುದನ್ನು ದೃಢಪಡಿಸಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.

© Copyright 2022, All Rights Reserved Kannada One News