ರವೀಶ್‌ ಕುಮಾರ್‌ ಕುರಿತ ಸಾಕ್ಷ್ಯಚಿತ್ರಕ್ಕೆ ಆಂಪ್ಲಿಫೈ ವಾಯ್ಸಸ್‌ ಪ್ರಶಸ್ತಿ

Related Articles

ಕರಾವಳಿ ಕತೆ ಹೇಳುವ 'ಕಾಂತಾರ': ತಾವು ಎಲ್ಲಿಂದ ಬಂದವರೆನ್ನುವುದ ಮರೆತ ನಿರ್ದೇಶಕ: ಪತ್ರಕರ್ತ ನವೀನ್ ಸೂರಿಂಜೆ ಅವರ ವಿಮರ್ಶೆ

ಮುಂಬೈ: ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್‌ ಮೃತದೇಹ ಪತ್ತೆ

ಉಗ್ರ ಹಿಂದುತ್ವ ಸಂಘಟನೆ ಸನಾತನ ಸಂಸ್ಥೆಯನ್ನೂ ನಿಷೇಧಿಸಲಾಗುತ್ತದೆಯೇ?: ನಟ ಚೇತನ್‌ ಅಹಿಂಸಾ

'ಚೆಲ್ಲೊ ಶೋ' ಭಾರತೀಯ ಸಿನಿಮಾ ಅಲ್ಲ: FWICE ಆರೋಪ

ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ನವೆಂಬರ್ 4ಕ್ಕೆ ತೆರೆಗೆ

ನಿಯಮ ಉಲ್ಲಂಘನೆ ಆರೋಪ: 'ಸೈಮಾ ಅವಾರ್ಡ್' ಆಯೋಜಕರ ವಿರುದ್ಧ ಎಫ್‌ ಐಆರ್

ಕಾಮಿಡಿಯನ್ ರಾಜು ಶ್ರೀವಾಸ್ತವ ನಿಧನ

ಗೌರಿ ಸಾಕ್ಷ್ಯಚಿತ್ರ: ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಗೆ ಭಾಜನ

ತಮಿಳು ನಟಿ ಪಾಲಿನ್ ಜೆಸ್ಸಿಕಾ ಆತ್ಮಹತ್ಯೆ

ಕೇರಳದಲ್ಲಿ ಸಾಪ್ತಾಹಿಕ ಕೋವಿಡ್ ಸೋಂಕು ಪ್ರಮಾಣ ಶೇ.50 ಹೆಚ್ಚಳ

ರವೀಶ್‌ ಕುಮಾರ್‌ ಕುರಿತ ಸಾಕ್ಷ್ಯಚಿತ್ರಕ್ಕೆ ಆಂಪ್ಲಿಫೈ ವಾಯ್ಸಸ್‌ ಪ್ರಶಸ್ತಿ

Updated : 20.09.2022

ಹೊಸದಿಲ್ಲಿ: ಖ್ಯಾತ ಪತ್ರಕರ್ತ, ಎನ್‌ಡಿಟಿವಿಯ ರವೀಶ್‌ ಕುಮಾರ್‌ ಅವರ ವೃತ್ತಿ ಜೀವನಾಧರಿತ ಸಾಕ್ಷ್ಯಚಿತ್ರ ʻವೈಲ್‌ ವಿ ವಾಚ್ಡ್‌ ಟೊರೊಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022ರಲ್ಲಿ ಪ್ರಶಸ್ತಿ ಪಡೆದಿದೆ. ಈ ಸಾಕ್ಷ್ಯಚಿತ್ರವನ್ನು ವಿನಯ್‌ ಶುಕ್ಲಾ ನಿರ್ಮಿಸಿದ್ದಾರೆ.

ಈ 96 ನಿಮಿಷಗಳ ಸಾಕ್ಷ್ಯಚಿತ್ರ ʻನಮಸ್ಕಾರ್!‌ ಮೈ ರವೀಶ್‌ ಕುಮಾರ್‌ʼ ಹಿಂದಿ ಭಾಷೆಯಲ್ಲಿದ್ದು ಆಂಪ್ಲಿಫೈ ವಾಯ್ಸಸ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಖ್ಯಾತ ಟಿವಿ ಪತ್ರಕರ್ತರಾಗಿರುವ ರವೀಶ್‌ ಕುಮಾರ್‌ ಅವರ ಕಾರ್ಯವೈಖರಿ ಹಾಗೂ ಸತ್ಯದ ಜಗತ್ತು ಹಾಗೂ ಹರಡಿರುವ ಸುಳ್ಳು ಮಾಹಿತಿಗಳ ಸುತ್ತ ಅವರು ಬೆಳಕು ಚೆಲ್ಲುವ ಪರಿಯನ್ನು ಈ ಸಾಕ್ಷ್ಯಚಿತ್ರ ಅದ್ಭುತವಾಗಿ ಪ್ರೇಕ್ಷಕರ ಮುಂದಿಡುತ್ತದೆ.

ವಿನಯ್‌ ಶುಕ್ಲಾ ಅವರ ಚೊಚ್ಚಲ ಸಾಕ್ಷ್ಯಚಿತ್ರ ʻಆನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌ʼ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತವರ ಆಮ್‌ ಆದ್ಮಿ ಪಕ್ಷದ ಕುರಿತಾಗಿತ್ತು. ಈ ಸಾಕ್ಷ್ಯ ಚಿತ್ರವನ್ನು ಕೂಡ ಟೊರೊಂಟೋ ಚಿತ್ರೋತ್ಸವದಲ್ಲಿ 2016 ರಲ್ಲಿ ಪ್ರದರ್ಶಿಸಲಾಗಿತ್ತು.

© Copyright 2022, All Rights Reserved Kannada One News