ಟೆನಿಸ್ ಗೆ ಸ್ವಿಸ್ ಸ್ಟಾರ್ ರೋಜರ್ ಫೆಡರರ್ ವಿದಾಯ

Related Articles

ಟಿ-20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಭಾರತ ಕ್ರಿಕೆಟ್ ತಂಡವನ್ನು ಚೋಕರ್ಸ್ ಎಂದ ಕಪಿಲ್ ದೇವ್

ಟೀ20 ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾ: ಫೈನಲ್‌ಗೆ ತಲುಪಿದ ಇಂಗ್ಲೆಂಡ್-ಪಾಕ್!

ಅತ್ಯಾಚಾರ ಆರೋಪ: ದನುಷ್ಕಾ ಗುಣತಿಲಕರನ್ನು ಅಮಾನತುಗೊಳಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ಟಿ-20 ವಿಶ್ವಕಪನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ದ. ಆಫ್ರಿಕಾಕ್ಕೆ ಸೋಲು, ಸೆಮಿಫೈನಲ್ ಗೆ ಲಗ್ಗೆ ಇಟ್ಟ ಭಾರತ!

ಐಪಿಎಸ್ ಅಧಿಕಾರಿ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಎಂಎಸ್ ಧೋನಿ

‘ಖೇಲ್ ರತ್ನ’ ಪ್ರಶಸ್ತಿಗೆ ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ಹೆಸರು ಶಿಫಾರಸು

ಏಷ್ಯಾ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ ತಂಡ

ಬೈಜುಸ್ ನ ಜಾಗತಿಕ ರಾಯಭಾರಿಯಾಗಿ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ನೇಮಕ

ಟಿ20 ವಿಶ್ವಕಪ್‌| ಟಾಸ್‌ ಗೆದ್ದ ಬಾಂಗ್ಲಾದೇಶ: ಭಾರತ ಬ್ಯಾಟಿಂಗ್

ಟಿ20 ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧ 3 ರನ್ ಅಂತರದ ಜಯ ಸಾಧಿಸಿದ ಬಾಂಗ್ಲಾದೇಶ

ಟೆನಿಸ್ ಗೆ ಸ್ವಿಸ್ ಸ್ಟಾರ್ ರೋಜರ್ ಫೆಡರರ್ ವಿದಾಯ

Updated : 24.09.2022

ಲಂಡನ್: ಸ್ವಿಸ್ ಟೆನಿಸ್ ಸ್ಟಾರ್ ರೋಜರ್ ಫೆಡರರ್(Roger Federer), ಶುಕ್ರವಾರ ATP ಟೂರ್ ನಲ್ಲಿ  ತಮ್ಮ ಕೊನೆಯ ಪಂದ್ಯವನ್ನು ಆಡಿದರು. ತನ್ನ ದೀರ್ಘಕಾಲದ ಎದುರಾಳಿ, 22 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್  ಪ್ರಶಸ್ತಿಯ ಒಡೆಯ ರಫೆಲ್ ನಡಾಲ್ ಅವರೊಂದಿಗೆ ಲೇವರ್ ಕಪ್ 2022 ರ ಡಬಲ್ಸ್ ಪಂದ್ಯದಲ್ಲಿ ಆಡಿದರು.

ಪಂದ್ಯದ ನಂತರದ ಸಂದರ್ಶನದಲ್ಲಿ ಫೆಡರರ್ ಕಣ್ಣೀರು ಹಾಕಿದರು. ತನ್ನ ಕೊನೆಯ ವೃತ್ತಿಪರ ಪಂದ್ಯದ ನಂತರ ಪ್ರೆಸೆಂಟರ್‌ನೊಂದಿಗೆ ಮಾತನಾಡುವಾಗ ಫೆಡರರ್ ಭಾವೋದ್ವೇಗಕ್ಕೆ ಒಳಗಾದರು.

ಫೆಡರರ್ ಮಾತನ್ನು ಕೇಳುತ್ತಿದ್ದ ನಡಾಲ್‌ಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ. ಇಬ್ಬರೂ ಅಕ್ಕಪಕ್ಕದಲ್ಲಿ ಕುಳಿತು ಕಣ್ಣೀರು ಸುರಿಸುತ್ತಿರುವ ದೃಶ್ಯವೂ ಕಂಡುಬಂತು.

ಸೆಂಟರ್ ಕೋರ್ಟ್‌ನಲ್ಲಿ ಟೀಮ್ ವರ್ಲ್ಡ್‌ ತಂಡದ  ಜ್ಯಾಕ್ ಸಾಕ್ ಹಾಗೂ  ಫ್ರಾನ್ಸಿಸ್ ಟಿಯಾಫೋ ವಿರುದ್ಧದ ಪಂದ್ಯದಲ್ಲಿ ಫೆಡರರ್ ಹಾಗೂ ನಡಾಲ್  ಟೀಮ್ ಯುರೋಪ್ ತಂಡವನ್ನು ಪ್ರತಿನಿಧಿಸಿದ್ದರು. ಫೆಡರರ್ ಸ್ಪರ್ಧಾತ್ಮಕ  ಟೆನಿಸ್‌ಗೆ ಪ್ರವೇಶಿಸಿ 20 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ . ಅಭಿಮಾನಿಗಳನ್ನು ರಂಜಿಸಲು ಅವರು ಯಾವುದೇ ಅವಕಾಶವನ್ನು ಅವರು ಕೈಬಿಟ್ಟಿಲ್ಲ.

ಫೆಡರರ್ ಹಾಗೂ  ನಡಾಲ್ ಡಬಲ್ಸ್  ಪಂದ್ಯವನ್ನು 6-4, 6-7 (2-7), 9-11 ಅಂತರದಿಂದ ಸೋತರು, ಆದರೆ  ಫೆಡರರ್ ಆಟವನ್ನು ಕೊನೆಯ ಬಾರಿ ಕಣ್ತುಂಬಿಕೊಳ್ಳಲು ಕಿಕ್ಕಿರಿದು  ತುಂಬಿದ್ದ ಜನರು  ಚಪ್ಪಾಳೆ ತಟ್ಟಿ ತನ್ನ ನೆಚ್ಚಿನ ಆಟಗಾರನಿಗೆ ವಿದಾಯ ಕೋರಿದರು.

© Copyright 2022, All Rights Reserved Kannada One News