ಶ್ರೀಲಂಕಾ ಲೇಖಕ ಶೆಹನ್ ಕರುಣತಿಲಕಗೆ ಬೂಕರ್ ಪ್ರಶಸ್ತಿ

ಶ್ರೀಲಂಕಾ ಲೇಖಕ ಶೆಹನ್ ಕರುಣತಿಲಕಗೆ ಬೂಕರ್ ಪ್ರಶಸ್ತಿ

Updated : 18.10.2022

ಹೊಸದಿಲ್ಲಿ: ಶ್ರೀಲಂಕಾದ ಖ್ಯಾತ ಲೇಖಕ ಶೆಹನ್ ಕರುಣತಿಲಕ ಈ ಬಾರಿಯ ಪ್ರತಿಷ್ಠಿತ ಬೂಕರ್ (Booker) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅವರ ಎರಡನೇ ಕಾದಂಬರಿ "ದ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇದ" (The Seven Moons of Maali Almeida) ಈ ಗೌರವಕ್ಕೆ ಪಾತ್ರವಾಗಿದೆ. ಮೃತ ಯುದ್ಧ ಛಾಯಾಗ್ರಾಹಕನ ಸಾವಿನ ಬಳಿಕದ ಮಿಷನ್ ಈ ಕಾದಂಬರಿಯ ಕಥಾವಸ್ತು ಆಗಿದೆ.

ರಾಣಿ ಕೆಮಿಲ್ಲಾ (Queen Consort Camilla) ಅವರಿಂದ ಕರುಣತಿಲಕ ಪ್ರಶಸ್ತಿ ಸ್ವೀಕರಿಸಿದರು. ಕರುಣತಿಲಕ 2019ರ ಬಳಿಕ ಈ ಪ್ರತಿಷ್ಠಿತ ಇಂಗ್ಲಿಷ್ ಭಾಷಾ ಸಾಹಿತ್ಯ ಪ್ರಶಸ್ತಿಯನ್ನು ವೈಯಕ್ತಿಕವಾಗಿ ಸ್ವೀಕರಿಸಿದ ಮೊದಲನೆಯವರು. ಪ್ರಶಸ್ತಿ 50 ಸಾವಿರ ಪೌಂಡ್ ನಗದು ಪ್ರಶಸ್ತಿಯನ್ನು ಒಳಗೊಂಡಿದೆ.

1990ರ ಶ್ರೀಲಂಕಾ ಅಂತರಿಕ ಯುದ್ಧದ ಸಂದರ್ಭದಲ್ಲಿ ಮೃತಪಟ್ಟ ಸಲಿಂಗಿ ಯುದ್ಧ ಛಾಯಾಗ್ರಾಹಕ ಮತ್ತು ಗ್ಯಾಂಬ್ಲರ್ ಮಾಲಿ ಅಲ್ಮೇದ ಎದ್ದು ಬರುವ ಕಥೆಯನ್ನು ಕರುಣತಿಲಕ ರಚಿಸಿದ್ದಾರೆ.


© Copyright 2022, All Rights Reserved Kannada One News