ಬಾಲಿವುಡ್ ಜೋಡಿ ರಣಬೀರ್- ಅಲಿಯಾ ದೇವಾಲಯ ಪ್ರವೇಶಕ್ಕೆ ಆರೆಸ್ಸೆಸ್‌ ಅಡ್ಡಿ

Related Articles

ಕರಾವಳಿ ಕತೆ ಹೇಳುವ 'ಕಾಂತಾರ': ತಾವು ಎಲ್ಲಿಂದ ಬಂದವರೆನ್ನುವುದ ಮರೆತ ನಿರ್ದೇಶಕ: ಪತ್ರಕರ್ತ ನವೀನ್ ಸೂರಿಂಜೆ ಅವರ ವಿಮರ್ಶೆ

ಮುಂಬೈ: ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್‌ ಮೃತದೇಹ ಪತ್ತೆ

ಉಗ್ರ ಹಿಂದುತ್ವ ಸಂಘಟನೆ ಸನಾತನ ಸಂಸ್ಥೆಯನ್ನೂ ನಿಷೇಧಿಸಲಾಗುತ್ತದೆಯೇ?: ನಟ ಚೇತನ್‌ ಅಹಿಂಸಾ

'ಚೆಲ್ಲೊ ಶೋ' ಭಾರತೀಯ ಸಿನಿಮಾ ಅಲ್ಲ: FWICE ಆರೋಪ

ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ನವೆಂಬರ್ 4ಕ್ಕೆ ತೆರೆಗೆ

ನಿಯಮ ಉಲ್ಲಂಘನೆ ಆರೋಪ: 'ಸೈಮಾ ಅವಾರ್ಡ್' ಆಯೋಜಕರ ವಿರುದ್ಧ ಎಫ್‌ ಐಆರ್

ಕಾಮಿಡಿಯನ್ ರಾಜು ಶ್ರೀವಾಸ್ತವ ನಿಧನ

ಗೌರಿ ಸಾಕ್ಷ್ಯಚಿತ್ರ: ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಗೆ ಭಾಜನ

ರವೀಶ್‌ ಕುಮಾರ್‌ ಕುರಿತ ಸಾಕ್ಷ್ಯಚಿತ್ರಕ್ಕೆ ಆಂಪ್ಲಿಫೈ ವಾಯ್ಸಸ್‌ ಪ್ರಶಸ್ತಿ

ತಮಿಳು ನಟಿ ಪಾಲಿನ್ ಜೆಸ್ಸಿಕಾ ಆತ್ಮಹತ್ಯೆ

ಬಾಲಿವುಡ್ ಜೋಡಿ ರಣಬೀರ್- ಅಲಿಯಾ ದೇವಾಲಯ ಪ್ರವೇಶಕ್ಕೆ ಆರೆಸ್ಸೆಸ್‌ ಅಡ್ಡಿ

Updated : 07.09.2022

ಉಜ್ಜಯಿನಿ: ಬಾಲಿವುಡ್ ತಾರಾ ಜೋಡಿಯಾದ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮಧ್ಯಪ್ರದೇಶದ ಉಜ್ಜಯಿನಿಯ ಪುರಾಣ ಪ್ರಸಿದ್ಧ ಮಹಾಕಾಳ ದೇವಾಲಯ ಪ್ರವೇಶಿಸದಂತೆ ಆರೆಸ್ಸೆಸ್ ಕಾರ್ಯಕರ್ತರು ತಡೆದ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ.

ಗೋಮಾಂಸ ಭಕ್ಷಣೆ ಬಗೆಗೆ ಈ ಜೋಡಿ ನೀಡಿದೆ ಎನ್ನಲಾದ ಹೇಳಿಕೆ ಮತ್ತು "ಬ್ರಹ್ಮಸೂತ್ರ" ಚಿತ್ರ ವೀಕ್ಷಣೆಗೆ ಸಂಬಂಧಿಸಿದಂತೆ  ಆರೆಸ್ಸೆಸ್‌ ಕಾರ್ಯಕರ್ತರು ಈ ಜೋಡಿ ದೇವಾಲಯ ಪ್ರವೇಶಿಸದಂತೆ ತಡೆದರು ಎನ್ನಲಾಗಿದೆ.

ಈ ಘಟನೆಯನ್ನು ಪೊಲೀಸರು ದೃಢಪಡಿಸಿದ್ದು, ದೇವಾಲಯ ಆವರಣದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಲಾಯಿತು ಎಂದು ಹೇಳಿದ್ದಾರೆ. ಲಾಠಿ ಪ್ರಹಾರದ ಹೊರತಾಗಿಯೂ ಪ್ರತಿಭಟನಾಕಾರರು ರಣಬೀರ್ ಮತ್ತು ಅಲಿಯಾ ಜೋಡಿ ದೇವಾಲಯ ಆವರಣ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಬಾಲಿವುಡ್ ಜೋಡಿ ದೇವಾಲಯ ದರ್ಶನಕ್ಕಾಗಿ ಆಗಮಿಸಿದಾಗ ಬಜರಂಗ ದಳ ಕಾರ್ಯಕರ್ತರು ಜೈ ಶ್ರೀರಾಂ ಘೋಷಣೆ ಕೂಗಿದರು. ಮಾಂಸಾಹಾರದಲ್ಲಿ ಮಟನ್, ಚಿಕನ್, ಗೋಮಾಂಸ ತನಗೆ ಅತ್ಯಂತ ಪ್ರಿಯ ಎಂದು ಕೆಲ ದಿನಗಳ ಹಿಂದೆ ರಣಬೀರ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರು ಈ ಪವಿತ್ರ ದೇವಾಲಯ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಬಜರಂಗದಳ ನಾಯಕ ಅಂಕಿತ್ ಚೌಬೆ ಹೇಳಿದ್ದಾರೆ.

ತಮ್ಮ ಬ್ರಹ್ಮಸೂತ್ರ ಚಿತ್ರವನ್ನು ನೋಡಲು ಬಯಸುವವರು ನೋಡಲಿ; ಆಸಕ್ತಿ ಇಲ್ಲದವರು ನೋಡದಿದ್ದರೆ ಬೇಡ" ಎಂದೂ ಅಲಿಯಾಭಟ್ ಹೇಳಿದ್ದಾಗಿ ಅವರು ವಿವರಿಸಿದರು. ಪ್ರತಿಭಟನೆಯ ನಡುವೆಯೇ ಬ್ರಹ್ಮಸೂತ್ರ ಚಿತ್ರ ನಿರ್ದೇಶಕ ಅಯಾನ್ ಮುಖರ್ಜಿ ದೇವಾಲಯದಲ್ಲಿ ದರ್ಶನ ಪಡೆದರು ಎಂದು ಅರ್ಚಕ ಆಶೀಶ್ ಪೂಜಾರಿ ಹೇಳಿದ್ದಾರೆ. ಈ ಬಗ್ಗೆ newindianexpress.com ವರದಿ ಮಾಡಿದೆ. 

© Copyright 2022, All Rights Reserved Kannada One News