ಬಸ್‌ ನಿಲ್ದಾಣ ವಿವಾದ; ಕಿರುಕುಳ ಸಹಿಸಲಾಗುತ್ತಿಲ್ಲ, ದಯಮಾಡಿ ಬಿಟ್ಟುಬಿಡಿ: ಶಾಸಕ ರಾಮದಾಸ್‌ ಮನವಿ

ಬಸ್‌ ನಿಲ್ದಾಣ ವಿವಾದ; ಕಿರುಕುಳ ಸಹಿಸಲಾಗುತ್ತಿಲ್ಲ, ದಯಮಾಡಿ ಬಿಟ್ಟುಬಿಡಿ: ಶಾಸಕ ರಾಮದಾಸ್‌ ಮನವಿ

Updated : 18.11.2022

ಮೈಸೂರು: ‘ಬಿಜೆಪಿಯಿಂದ ಶಾಸಕರಾದ 11 ಮಂದಿ ಪೈಕಿ ನಾನೊಬ್ಬನೇ ಪಕ್ಷದಲ್ಲಿ ಉಳಿದಿದ್ದೇನೆ. ಬಸ್‌ ನಿಲ್ದಾಣದ ಈ ವಿವಾದದ ಮೂಲಕ ನನಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದೆ. ದಯಮಾಡಿ ಬಿಟ್ಟುಬಿಡಿ’ ಎಂದು ಶಾಸಕ ರಾಮದಾಸ್‌ ಬೇಸರ ತೋಡಿ ಮನವಿ ಮಾಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕ ರಾಮದಾಸ್‌, ‘ತಜ್ಞರ‌ ಸಮಿತಿಯನ್ನು ಕಳುಹಿಸುವಂತೆ ಮುಖ್ಯಮಂತ್ರಿಯನ್ನು ಕೋರಿದ್ದೇನೆ. ತಪ್ಪಾಗಿದ್ದರೆ ಹಣವನ್ನು ನನ್ನ ‌ಸಂಬಳದಿಂದ ಭರಿಸಲು ನಾನು ಸಿದ್ಧ. ನಿರ್ಮಾಣ ಕೆಲಸ ನಿಲ್ಲಿಸಿ ಎಂದರೆ ನಿಲ್ಲಿಸುವೆ‘ ಎಂದು ವಿವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ತಪ್ಪುಮಾಹಿತಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದೇನೆ. ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೂ ಪತ್ರ ಬರೆದಿದ್ದೇನೆ. ಅರಮನೆ ಮಾದರಿಯಲ್ಲಿ ನಿರ್ಮಿಸಬೇಕೆಂದು ವಿನ್ಯಾಸ ‌ಮಾಡಲಾಗಿತ್ತೇ ಹೊರತು ವಿವಾದ ಸೃಷ್ಟಿಸಬೇಕೆಂದಲ್ಲ’ ಎಂದು ಮತ್ತೊಮ್ಮೆ ಬಸ್‌ ನಿಲ್ದಾಣದ ವಿನ್ಯಾಸದ ಬಗೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. 


© Copyright 2022, All Rights Reserved Kannada One News