ಆರ್‌ಎಸ್‌ಎಸ್‌ ವಿರುದ್ಧ ಕರಪತ್ರ ಹಂಚಿದ ಆರೋಪ: ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆಯ ಮೂವರ ಬಂಧನ

Related Articles

ಭಾರತದ ಜನಪ್ರಿಯ ಗೇಮಿಂಗ್ ಯೂಟ್ಯೂಬರ್ ಅಭ್ಯುದಯ್ ಮಿಶ್ರಾ ರಸ್ತೆ ಅಪಘಾತದಲ್ಲಿ ಮೃತ್ಯು

ಪಿಎಸ್ಐ ಹಗರಣ: ಪ್ರಮುಖ ಆರೋಪಿ ಹಾಸ್ಟೆಲ್ ವಾರ್ಡನ್ ಬಂಧನ

ತಮ್ಮ ತಂಗಿ ಜೊತೆ ಸ್ನೇಹದಲ್ಲಿದ್ದ ಯುವಕನ ಹತ್ಯೆ: ಆರೋಪಿಗಳ ಬಂಧನ

ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ 75 ಮಂದಿ ಪ್ರಯಾಣಿಸುತ್ತಿದ್ದ ದೋಣಿ: ಓರ್ವ ಅಧಿಕಾರಿ ಸೇರಿ ಹಲವರು ನಾಪತ್ತೆ

ಪ್ರವಾದಿ ಮುಹಮ್ಮದ್ ಬಗ್ಗೆ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ: ಮುಖ್ಯಶಿಕ್ಷಕ ಅಮಾನತು

ದೇಶದ ನೂತನ ಅಟಾರ್ನಿ ಜನರಲ್‌ ಆಗಿ ಹಿರಿಯ ವಕೀಲ ಆರ್‌.ವೆಂಕಟರಮಣಿ ನೇಮಕ

ಕೊಡಗು: ಸಾಕಾನೆ ದಾಳಿಗೆ ಕಾರ್ಮಿಕ ಬಲಿ

ಚಾಮರಾಜನಗರ: ‘ಭಾರತ್ ಜೋಡೋ’ ಫ್ಲೆಕ್ಸ್ ಹರಿದ ದುಷ್ಕರ್ಮಿಗಳು

ಕಾನೂನುಬದ್ಧ ಗರ್ಭಪಾತಕ್ಕೆ ಎಲ್ಲ ಮಹಿಳೆಯರು ಅರ್ಹ : ಸುಪ್ರೀಂಕೋರ್ಟ್

ಮಳಲಿ‌ ಮಸೀದಿ ವಿವಾದ: ಪ್ರಕರಣದ ತೀರ್ಪು ಅ.17 ಕ್ಕೆ ಮುಂದೂಡಿಕೆ

ಆರ್‌ಎಸ್‌ಎಸ್‌ ವಿರುದ್ಧ ಕರಪತ್ರ ಹಂಚಿದ ಆರೋಪ: ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆಯ ಮೂವರ ಬಂಧನ

Updated : 15.08.2022

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಕರಪತ್ರ ಹಂಚುತ್ತಿದ್ದಾರೆಂದು ಮನುವಾದಿ ಸಂಘಟನೆಯ ಕಾರ್ಯಕರ್ತು ಆರೋಪಿಸಿದ್ದು, ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.

ಅಂಬೇಡ್ಕರ್ ಪರಿನಿರ್ವಾಣದ ದಿನ ಬಾಬರಿ ಮಸೀದಿಯನ್ನು ಉರುಳಿಸಲಾಯಿತು. ಅಂಬೇಡ್ಕರ್ ಜಯಂತಿಯಂದೇ ಅವರ ಮೊಮ್ಮಗ ಹಾಗೂ ಚಿಂತಕ ಆನಂದ್‌ ತೇಲ್ತುಂಬ್ಡೆ ಜತೆಗೆ ಇನ್ನೂ 15 ಜನ ನೈಜ ದೇಶಭಕ್ತರನ್ನು ಬಂಧಿಸಲಾಗಿದೆ. ಆ ಮೂಲಕ ದೇಶದಲ್ಲಿ ಅಂಬೇಡ್ಕರ್ ಗುರುತುಗಳನ್ನು ನಾಶಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಹೇಳಿಕೆಗಳನ್ನು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

“ ಅಂಬೇಡ್ಕರ್ ಮೊಮ್ಮಗ ಆನಂದ್‌ ತೇಲ್ತುಂಬ್ಡೆ ಒಳಗೊಂಡಂತೆ 15 ಜನ ಹೋರಾಟಗಾರರನ್ನು  ಬಂಧಿಸಿರುವುದರ ವಿರುದ್ಧ ಸಂಘಟನೆಯ ಮೂಲಕ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಈ ಬಗ್ಗೆ ಜನತೆಗೆ ಅರಿವು ಮೂಡಿಸುವ ಸಲುವಾಗಿ ಸಂಘಟನೆಯ ಮೂಲಕ ಕರಪತ್ರ ಹಂಚಿದ್ದೇವೆ. ಆರ್‌ಎಸ್‌ಎಸ್‌ ವಿರುದ್ಧ ಕರಪತ್ರ ಹಂಚುತ್ತಿದ್ದಾರೆ ಎಂದು ಆರೋಪಿಸಿ ಬಜರಂಗದಳದವರು ದಾಂಧಲೆ ನಡೆಸಿದ್ದಾರೆ” ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಎಸ್‌ ಶಿವಲಿಂಗಯ್ಯ ಹೇಳಿರುವುದಾಗಿ ಈ ದಿನ.ಕಾಮ್‌ ವರದಿ ಮಾಡಿದೆ.


© Copyright 2022, All Rights Reserved Kannada One News