ರಾಷ್ಟ್ರಪತಿ ಚುನಾವಣೆ: ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ಗೊತ್ತ?

Related Articles

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಜನಸೇವಕ ಟಿ.ಆರ್.ಶಾಮಣ್ಣ ನೆನಪು: ಹರೀಶ್ ಕಳಸೆ ಅವರ ಲೇಖನ

ರಾಷ್ಟ್ರಪತಿ ಚುನಾವಣೆ: ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ಗೊತ್ತ?

Updated : 22.06.2022

ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ರಾಷ್ಟ್ರಪತಿಯ ಸ್ಥಾನ ಬಹಳ ಮಹತ್ವದ್ದು. ನಮ್ಮ ದೇಶದ ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರದ ಅವಧಿ ಜುಲೈ 24ಕ್ಕೆ ಮುಕ್ತಾಯವಾಗಲಿದೆ. ಭಾರತದ ಚುನಾವಣಾ ಆಯೋಗ ದೇಶದ 15ನೇ ರಾಷ್ಟ್ರಪತಿ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಹೀಗಾಗಿ ದೇಶದ ರಾಜಕೀಯ ಪಕ್ಷಗಳಲ್ಲಿ ಮುಂದಿನ ರಾಷ್ಟ್ರಪತಿ ಆಯ್ಕೆಗೆ ಈಗಾಗಲೇ ರಾಜಕೀಯ ಪಕ್ಷಗಳ ಕಸರತ್ತು ಶುರುವಾಗಲಿದೆ. ಅದರ ಜೊತೆಗೆ ಮುಂದಿನ ರಾಷ್ಟ್ರಪತಿ ಯಾರಾಗಬಹುದು ಎಂಬ ಕುತೂಹಲ ಶುರುವಾಗಿದೆ. ಆದ್ರೆ  ಅದೆಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರಪತಿ ಆಯ್ಕೆ ಮಾಡುವ ವಿಧಾನ ಇದೆಯಲ್ಲ ಅದು ಬಹಳ ಸೋಜಿಗವಾದುದು. ಅನೇಕರಿಗೆ ಅದರ ಬಗ್ಗೆ ಮಾಹಿತಿ ಕೂಡ ಇರುವುದಿಲ್ಲ. ಹಾಗಾಗಿ ಇವತ್ತು ನಾವು ಅದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನೀಡ್ತೀವಿ..

ರಾಷ್ಟ್ರಪತಿ ಚುನಾವಣೆ?: ದೇಶದ ಸಂವಿಧಾನದ 54ನೇ ವಿಧಿಯ ಅನ್ವಯ, ಭಾರತದ ಚುನಾವಣ ಆಯೋಗ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ತಕ್ಷಣವೇ ಚುನಾವಣೆ ಪ್ರಕ್ರಿಯೆಗಳು ಶುರುವಾಗುತ್ತವೆ.

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಇರುವ ಅರ್ಹತೆ ಏನು?:
ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವವರು 35 ವರ್ಷ ಮೇಲ್ಪಟ್ಟರಾಗಿದ್ದರೆ ಸಾಕು ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಸ್ಫರ್ಧಿಸುವವರ ಹೆಸರನ್ನು 50 ಮಂದಿ ಎಂಎಲ್‌ಎ ಅಥವಾ ಎಂಪಿಗಳು ಸೂಚಿಸಬೇಕು ಮತ್ತು 50 ಮಂದಿ ಅವರ ಹೆಸರನ್ನು ಅನುಮೋದಿಸಬೇಕು. ಇನ್ನು ಒಬ್ಬ ಸೂಚಕ ಮತ್ತು ಅನುಮೋದಕ ಒಬ್ಬ ಅಭ್ಯರ್ಥಿಯನ್ನು ಮಾತ್ರ ಸೂಚಿಸಬಹುದು.
ವಾ: ಹಾಗಾದ್ರೆ ಇಲ್ಲಿ ಮತದಾರ ಯಾರು ಅನ್ನೋ ಪ್ರಶ್ನೆ ನಿಮಗೆ ಇಲ್ಲಿ ಉಂಟಾಗಿರಬಹುದು..

ರಾಷ್ಟ್ರಪತಿಗೆ ಮತಹಾಕುವವರು ಯಾರು?
ಲೋಕಸಭೆಯ 543 ಮಂದಿ ಸದಸ್ಯರು
ರಾಜ್ಯಸಭೆಯ 233 ಮಂದಿ ಸದಸ್ಯರು
ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ 4,033 ಚುನಾಯಿತ ಶಾಸಕರು
 ಇಲ್ಲಿ ಮುಖ್ಯವಾಗಿ ನೆನಪಿಟ್ಟುಪೊಳ್ಳಬೇಕಾದ ಅಂಶವೇನಂದ್ರೆ ಪಕ್ಷಗಳಿಂದ ನಾಮಕರಣಗೊಂಡ ಸದಸ್ಯರಿಗೆ ಮತದಾನ ಮಾಡುವ ಅರ್ಹತೆ ಇರುವುದಿಲ್ಲ. ಕೇವಲ ಚುನಾಯಿತ ಸದಸ್ಯರಿಗೆ ಮಾತ್ರ ಓಟಿಂಗ್‌ಪವರ್‌ಇರುತ್ತದೆ.

ಮತಗಳ ಮೌಲ್ಯದ ಲೆಕ್ಕಾಚಾರ ಹೇಗೆ?
ಲೋಕಸಭೆ ಮತ್ತು ರಾಜ್ಯಸಭೆಯ ಪ್ರತೀ ಸಂಸದರ ಒಟ್ಟು ಮತ ಮೌಲ್ಯ 700. ಆದರೆ ಶಾಸಕರ ಮತ ಪ್ರಮಾಣ ರಾಜ್ಯವಾರು ವ್ಯತ್ಯಾಸವಾಗುತ್ತದೆ. ಆಯಾ ರಾಜ್ಯದ ಜನಸಂಖ್ಯೆಯನ್ನು ಆಧರಿಸಿ ಹಾಗೂ ಒಟ್ಟು ಶಾಸಕರನ್ನು ಅವಲಂಬಿಸಿ ಅದನ್ನು ನಿರ್ಧರಿಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಪ್ರತೀ ಶಾಸಕನ ಮತ ಮೌಲ್ಯ 208. ಇದು ದೇಶದಲ್ಲಿ ಅತೀ ಹೆಚ್ಚು. ಅದೇ ಅರುಣಾಚಲ ಪ್ರದೇಶದಲ್ಲಾದರೆ ಒಬ್ಬ ಶಾಸಕನ ಮತದ ಮೌಲ್ಯ ಎಂಟು 8. ಈ ಮತ ಮೌಲ್ಯವನ್ನು 1971ರ ಜನಸಂಖ್ಯೆಯನ್ನು ಆಧಾರವಾಗಿ ಇರಿಸಿಕೊಂಡು ನಿರ್ಣಯಿಸಲಾಗುತ್ತದೆ.

ಮುಂದಿನ ಜನಗಣತಿಯ ಹೊಸ ಅಂಕಿಅಂಶ ಪ್ರಕಟಗೊಂಡಾಗ ಈ ಸಾಂಖ್ಯೀಕ ಅಂಶಗಳು ಬದಲಾಗುವ ಸಾಧ್ಯತೆಗಳಿವೆ. ಒಂದು ರಾಜ್ಯದ ಜನಸಂಖ್ಯೆಯನ್ನು ಅಲ್ಲಿನ ಒಟ್ಟು ಶಾಸಕರ ಸಂಖ್ಯೆಯಿಂದ ವಿಭಜನೆಮಾಡಿ ಒಬ್ಬ ಶಾಸಕನ ಮತ ಮೌಲ್ಯವನ್ನು ಕಂಡು ಹಿಡಿಯಲಾಗುತ್ತದೆ. ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರ ಮತ ಮೌಲ್ಯ 77x 6700= 5,43,200 ಆಗುತ್ತದೆ. ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕರ ಮತ ಮೌಲ್ಯ 5,49, 495. ಹೀಗೆ ಒಟ್ಟು ಮತಗಳ ಸಂಖ್ಯೆ  10,92,695 ಆಗುತ್ತದೆ.


ಹಾಲಿ ಚುನಾವಣೆಯಲ್ಲಿ ಮತ ಪ್ರಮಾಣ ಹೇಗೆ?:
ವಿಪಕ್ಷಗಳು ಒಟ್ಟಾಗಿ ಓಆಂ ವಿರುದ್ಧ ಅಭ್ಯರ್ಥಿ ಕಣಕ್ಕೆ ಇಳಿಸಲು ಯೋಚಿಸುತ್ತಿವೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲಿ ಇತ್ತೀಚಿನ ವಿಧಾನಸಭೆ ಚುನಾವಣೆ ಮುಕ್ತಾಯದ ಬಳಿಕ ಬಿಜೆಪಿ ನೇತೃತ್ವದ ಎನ್ಡಿಎಗೆ ಒಟ್ಟು 5,39,827 ಮತಗಳು ಲಭ್ಯವಾಗಲಿವೆ. ಇಷ್ಟಾದರೂ ಕೂಡ ಬಹುಮತಕ್ಕೆ 9,625 ಮತಗಳ ಕೊರತೆ ಬೀಳಲಿವೆ. ಮಹಾರಾಷ್ಟ್ರದಲ್ಲಿ 50,400 ಮತ ಮೌಲ್ಯ ಇದೆ. ಬಿಜೆಪಿಯ ಜತೆಗೆ ಶಿವಸೇನೆ ಇಲ್ಲ. ಹೀಗಾಗಿ, ಆ ರಾಜ್ಯದಲ್ಲಿ ಎನ್ಡಿಎ ಮತ ಮೌಲ್ಯ 19,775. ಇನ್ನು ಪಂಜಾಬ್ನಲ್ಲಿ ಶಿರೋಮಣಿ ಅಕಾಲಿ ದಳದ ಜತೆಗೆ ಬಿಜೆಪಿ ಇಲ್ಲ. ಹಾಗಾಗಿ ಪಂಜಾಬ್ನ ಒಟ್ಟು ಮತ ಮೌಲ್ಯ 13,572. ಅಲ್ಲಿ ಎನ್ಡಿಎ ಮತಮೌಲ್ಯ ಕೇವಲ 464. ಉತ್ತರ ಪ್ರದೇಶದಲ್ಲಿ ಬಿಜೆಪಿ 273 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಆ ರಾಜ್ಯದ ಒಬ್ಬ ಶಾಸಕನ ಮತ ಮೌಲ್ಯ 208 ಆಗಿದೆ. ಹೀಗಾಗಿ ಅಲ್ಲಿನ ಒಟ್ಟು ಮತ ಮೌಲ್ಯ 56,684. ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕೆಲವು ಕ್ಷೇತ್ರಗಳು ತೆರವಾಗಿವೆ. ಅದು ಮತ ಮೌಲ್ಯದ ಮೇಲೆ ಪರಿಣಾಮ ಬೀರಲಿದೆ..

ಈ ಚುನಾವಣೆಯಲ್ಲಿ ಮತದಾರರಾಗಿರುವ ಶಾಸಕರು ಮತ್ತು ಸಂಸದರು ನಿಗದಿತ ನಮೂನೆಯ ಮತಪತ್ರದಲ್ಲಿ ಅಭ್ಯರ್ಥಿಯ ಹೆಸರು ಬರೆಯುತ್ತಾರೆ. ಅದಕ್ಕಾಗಿ ನಿಗದಿ ಮಾಡಿದ ಪೆನ್‌ಕೂಡ ಇದೆ. ಈ ಚುನಾವಣೆಯಲ್ಲಿ ಬಹುಮತ ಎನ್ನುವುದಕ್ಕಿಂತ ಅತ್ಯಧಿಕ ಮತಗಳನ್ನು ಗಳಿಸಿದವರೇ ವಿಜಯಿ. ಅಭ್ಯರ್ಥಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ.50ರಷ್ಟು ಮತಗಳನ್ನು ಪಡೆಯಲೇಬೇಕಾಗುತ್ತದೆ.

ನಮ್ಮ ದೇಶದಲ್ಲಿ ಇದುವರೆಗೆ 15 ಬಾರಿ ರಾಷ್ಟ್ರಪತಿ ಆಯ್ಕೆಯ ಸಂಬಂಧ ಚುನಾವಣೆಗಳು ನಡೆದಿವೆ. ಈ ಪೈಕಿ ಒಮ್ಮೆ ಮಾತ್ರ 1977 ಅವಿರೋಧವಾಗಿ ಆಯ್ಕೆ ನಡೆದಿದೆ. ಜನತಾ ಪಾರ್ಟಿಯ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವ ರೆಡ್ಡಿ ಅವಿರೋಧವಾಗಿ ಆಯ್ಕೆಯಾದವರು. ತಮ್ಮ 64ನೇ ವಯಸ್ಸಿನಲ್ಲಿ ಅವರು ದೇಶದ ಅತ್ಯುನ್ನತ ಹುದ್ದೆಗೆ ಆಯ್ಕೆಯಾದ ಕಾರಣ “ದೇಶದ ಅತ್ಯಂತ ಯುವ ರಾಷ್ಟ್ರಪತಿ’ ಎಂಬ ಹೆಗ್ಗಳಿಕೆಯೂ ಅವರದ್ದೆ ಆಗಿದೆ.  ಇನ್ನೊಂದು ವೈಶಿಷ್ಯತೆ ಅಂದರೆ, ದೇಶದ ಮೊದಲ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್‌ಮಾತ್ರ ಸತತ ಎರಡು ಬಾರಿ ಆಯ್ಕೆಯಾಗಿದ್ದರು. ಅನಂತರ ಈವರೆಗೆ ಸತತ ಎರಡನೇ ಬಾರಿಗೆ ಆಯ್ಕೆಯಾಗಲು ಯಾರಿಗೂ ಅವಕಾಶ ಲಭಿಸಿಲ್ಲ.


ಈಗಾಗಲೇ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಚುನಾವಣಾ ಆಯೋಗ  ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಜೂನ್ 29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು 30ರಂದು ಪರಿಶೀಲನೆ ನಡೆಯಲಿದೆ. ಜುಲೈ 2 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಜುಲೈ 21ರಂದು ಚುನಾವಣೆ ನಡೆಯಲಿದೆ.
 ಈ ಸಲ ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿ ಒಂದು ಕಡೆಯಾದರೆ ಇನ್ನೊಂದೆಡೆ ಎಲ್ಲ ಕಾಂಗ್ರೆಸ್‌ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿವೆ. ಹೀಗಾಗಿ ಈ ಸಲದ ರಾಷ್ಟ್ರಪತಿ ಚುಣಾವಣಾ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಗಾದ್ರೆ 15ನೇ ರಾಷ್ಟ್ರಪತಿ ಯಾರಾಗ್ತಾರೆ ಅನ್ನೋದು ಗೊತ್ತಾಗಬೇಕಂದ್ರೆ ಇನ್ನೊಂದು ತಿಂಗಳವರೆಗೆ ಕಾಯಲೇಬೇಕಾಗಿದೆ.. ಇದು ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆಯ ಮಜಲುಗಳು.

 -ಕನ್ನಡ ಒನ್ ನ್ಯೂಸ್ ಬಳಗ

© Copyright 2022, All Rights Reserved Kannada One News