Flash News:
ನೊಬೆಲ್‌ ಶಾಂತಿ ಪ್ರಶಸ್ತಿ: ಪತ್ರಕರ್ತ ಮೊಹಮ್ಮದ್‌ ಝುಬೇರ್‌, ಪ್ರತೀಕ್‌ ಸಿನ್ಹಾ ನಾಮನಿರ್ದೇಶನ

ನೊಬೆಲ್‌ ಶಾಂತಿ ಪ್ರಶಸ್ತಿ: ಪತ್ರಕರ್ತ ಮೊಹಮ್ಮದ್‌ ಝುಬೇರ್‌, ಪ್ರತೀಕ್‌ ಸಿನ್ಹಾ ನಾಮನಿರ್ದೇಶನ

Updated : 05.10.2022

ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್‌ ಝುಬೇರ್‌ ಮತ್ತು ಪ್ರತೀಕ್‌ ಸಿನ್ಹಾ ಅವರು 2022ರ ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. 

ನೊಬೆಲ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವವರನ್ನು ಸಮಿತಿಯು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್, ಪೋಪ್ ಫ್ರಾನ್ಸಿಸ್, ಟುವಾಲು ವಿದೇಶಾಂಗ ಸಚಿವ ಸೈಮನ್ ಕೋಫೆ ಸೇರಿ ಹಲವರು ನಾಮನಿರ್ದೇಶನಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

ನೊಬೆಲ್‌ ಪ್ರಶಸ್ತಿಯ 50ನೇ ವಾರ್ಷಿಕೋತ್ಸವ ಇದಾಗಿದ್ದು, ಅಂತಿಮ ಹಂತದವರೆಗೆ ನಾಮನಿರ್ದೇಶನಗೊಂಡಿರುವವರ ಹೆಸರನ್ನು ಬಹಿರಂಗಪಡಿಸಬಾರದು ಎಂಬುದು ನಿಯಮ. ಆದರೆ, ಮೂಲಗಳ ಪ್ರಕಾರ ಸಿನ್ಹಾ ಮತ್ತು ಝುಬೇರ್‌ ಮಾತ್ರವಲ್ಲದೆ, ಉಕ್ರೇನ್‌ ಅಧ್ಯಕ್ಷ ವೊಲೊಡೊಮಿರ್‌ ಝೆಲೆನ್‌ಸ್ಕಿ, ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಕೂಡ ಸ್ಪರ್ಧಿಗಳಾಗಿದ್ದಾರೆ. ಅಕ್ಟೋಬರ್‌ 7ರಂದು ಓಸ್ಲೋದಲ್ಲಿ ನಡೆಯುವ ಸಮಾರಂಭದಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ವಿತರಿಸಲಾಗುವುದು. 

ಟ್ವೀಟ್‌ಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಜೂನ್‌ 27ರಂದು ದೆಹಲಿ ಪೊಲೀಸರು ಝುಬೇರ್‌ ಅವರನ್ನು ಬಂಧಿಸಿದ್ದರು. ಬಳಿಕ ಝುಬೇರ್‌ ವಿರುದ್ಧ ಉತ್ತರ ಪ್ರದೇಶದಲ್ಲಿ ಆರು ಪ್ರಕರಣಗಳು ದಾಖಲಾಗಿದ್ದವು. ಝುಬೇರ್‌ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಎಲ್ಲ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸೂಚಿಸಿತ್ತು. ಇದೀಗ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. 

© Copyright 2022, All Rights Reserved Kannada One News