ಸುರತ್ಕಲ್‌ ಟೋಲ್;‌ ರದ್ದಾದರೂ ಹಣ ಪಾವತಿಸಲೇಬೇಕು: ಐವನ್‌ ಡಿಸೋಜ

ಸುರತ್ಕಲ್‌ ಟೋಲ್;‌ ರದ್ದಾದರೂ ಹಣ ಪಾವತಿಸಲೇಬೇಕು: ಐವನ್‌ ಡಿಸೋಜ

Updated : 22.11.2022

ಮಂಗಳೂರು: ಸುರತ್ಕಲ್’ನ ಅಕ್ರಮ ಟೋಲ್ ಗೇಟ್ ರದ್ದುಪಡಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿ ೧೦ ದಿನ ಕಳೆದರೂ ಪ್ರತಿ ದಿನ ೧೧ ಲಕ್ಷ ರೂಪಾಯಿ ಅಕ್ರಮ ಸುಂಕ ವಸೂಲಿ ಮಾಡುತ್ತಿದ್ದಾರೆ. ಆದರೂ ಜಿಲ್ಲಾಧಿಕಾರಿ ಏನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಐವನ್ ಡಿಸೋಜಾ ಪ್ರಶ್ನಿಸಿದ್ದಾರೆ.

ದೇಶದಲ್ಲಿ ೩೬ ಅಕ್ರಮ ಟೋಲ್ ಗೇಟ್’ಗಳು ಇವೆ ಎಂದು ಹೆದ್ದಾರಿ ಖಾತೆ ಸಚಿವರು ಹೇಳಿದ್ದಾರೆ. ಆಮೇಲೆ ಹಲವು ನಾಯಕರು ಇದೇ ಮಾತು ಪುನರುಚ್ಚರಿಸಿದ್ದಾರೆ. ಇದರ ನಡುವೆ ಸಂಸದ ಕಟೀಲ್ ಅವರು ಟೋಲ್ ಗೇಟ್ ತೆಗೆದು ಹಾಕಿದ್ದಕ್ಕೆ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೂ ಅಕ್ರಮ ವಸೂಲಾತಿ ನಿಂತಿಲ್ಲ ಎಂದು ಕಿಡಿಕಾರಿದ್ದಾರೆ.

© Copyright 2022, All Rights Reserved Kannada One News